HEALTH TIPS

No title

               ಅಪಾಯಕ್ಕೆ ಆಹ್ವಾನವೀಯುತ್ತಿದ್ದ ವಿದ್ಯುತ್ ಕಂಬಕ್ಕೆ  ಪೋಸ್ಟರ್ ಫ್ಲೆಕ್ಸ್ ಕಟ್ಟಲು ಸ್ಥಾಪಿಸಲಾದ ಕಂಬಗಳ ತೆರವು
    ಪೆರ್ಲ: ಅಪಾಯಕ್ಕೆ ಆಹ್ವಾನವೀಯುತ್ತಿದ್ದ  ಸ್ವರ್ಗ ಕೂಡು ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಲಾದ ಬ್ಯಾನರ್, ಫ್ಲಕ್ಸ್ ವಾಣೀನಗರ ಭಾಗ ಹಾಗೂ ಪುತ್ತೂರು ಭಾಗದಿಂದ ಆಗಮಿಸುವ ವಾಹನಗಳಿಗೆ ತೀವ್ರ ತೊಂದರೆಯಾಗಿ ಅಪಘಾತಗಳಿಗೂ ಕಾರಣವಾಗುತ್ತಿದೆ. ವಿದ್ಯುತ್ ಕಂಬಕ್ಕೆ ಪೋಸ್ಟರ್, ಫ್ಲೆಕ್ಸ್ ಸ್ಥಾಪಿಸಲು ಕಟ್ಟಲಾಗಿದ್ದ  ಕಂಬಗಳನ್ನು ಸುದರ್ಶನ ತಂಡದ ಮನವಿ ಮೇರೆಗೆ ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅವರ ಸೂಚನೆಯಂತೆ ವಿದ್ಯುತ್ ನಿಗಮದ ಕಾಮರ್ಿಕರು ಶುಕ್ರವಾರ ತೆರವುಗೊಳಿಸಿದರು. ಸುದರ್ಶನ ಬಳಗದಿಂದ ಪಂಚಾಯತು ಅಧ್ಯಕ್ಷರಿಗೆ ಈ ಬಗ್ಗೆ ಸಚಿತ್ರ ಮನವಿ ನೀಡಿತ್ತು.
   ಕೂಡುರಸ್ತೆಯಲ್ಲಿ ಸ್ಥಾಪಿಸಿದ್ದ ಬ್ಯಾನರ್ ಫ್ಲೆಕ್ಸ್  ಕಾರಣದಿಂದ ಉಂಟಾಗಿದೆ ಹಲವು ಅಪಘಾತ
  ಕೂಡು ರಸ್ತೆಯಲ್ಲಿ ಸ್ಥಾಪಿಸುವ ಬ್ಯಾನರ್ ಫ್ಲೆಕ್ಸ್ ಪುತ್ತೂರು ಹಾಗೂ ವಾಣೀನಗರ ಭಾಗಗಳಿಂದ ಆಗಮಿಸುವ ವಾಹನಗಳ ಚಾಲಕರುಗಳಿಗೆ  ಪರಸ್ಪರ ದೃಷ್ಟಿಗೆ ನಿಲುಕದೇ ಇರುವುದರಿಂದ ಈ ಹಿಂದೆ ಸಮೀಪದ  ಅಧ್ಯಾಪಕಿಯೋರ್ವರು ಚಲಾಯಿಸಿದ ದ್ವಿಚಕ್ರ ವಾಹನ ಇನ್ನೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವುದು ಸಹಿತ  ಹಲವು ಅಪಘಾತ ಗಳು ಸಂಭವಿಸಿದ್ದರೂ ಅದೃಷ್ಟವಶಾತ್ ಯಾರೂ ಗಾಯಗಳಿಲ್ಲದೆ ಪಾರಾಗಿದ್ದರು.
   ಲೋರಿ ಚಾಲಕರ ಪಾಡಂತೂ ಹೇಳುವುದೇ ಬೇಡ:
  ವಾಣೀನಗರ ಭಾಗದಿಂದ ಕನರ್ಾಟಕದ ಪುತ್ತೂರು ಭಾಗಕ್ಕೆ ಸಂಚರಿಸುವ ಲೋರಿ ಚಾಲಕರುಗಳಿಗೆ ವಾಹನದ  ಮುಂಭಾಗ ಪೆರ್ಲ -ಪುತ್ತೂರು ರಸ್ತೆ ದಾಟಿದ  ಬಳಿಕವಷ್ಟೆ  ಪುತ್ತೂರು ಪಾಣಾಜೆ ಭಾಗದಿಂದ ಆಗಮಿಸುವ ವಾಹನಗಳು ದೃಷ್ಟಿಗೆ ನಿಲುಕುವಂತಿದ್ದು ಈ ಭಾಗದಲ್ಲಿ ಅಪಘಾತಕ್ಕೆ ಕಾರಣವಾಗುತ್ತಿದ್ದ ಕಾಡು ಪೊದೆ ಹಾಗೂ ಕಂಬಗಳನ್ನು ತಿಂಗಳುಗಳ ಮೊದಲು ಸುದರ್ಶನ ತಂಡ ತೆರವುಗೊಳಿಸಿದ ಬೆನ್ನಲ್ಲೇ ಪುನಃ ಕಂಬಗಳನ್ನು ಸ್ಥಾಪಿಸಲಾಗಿತ್ತು. ಕೇರಳ ವಿದ್ಯುತ್ ಅಧಿನಿಯಮ ಪ್ರಕಾರ ವಿದ್ಯುತ್ ಕಂಬಗಳಿಂದ ಐದು ಮೀಟರ್ ವ್ಯಾಪ್ತಿಯಲ್ಲಿ  ಯಾವುದೆ ಸ್ಥಿರ ಅಥವಾ ತಾತ್ಕಾಲಿಕ ಪೋಸ್ಟರ್, ಕಂಬ ಸ್ಥಾಪಿಸುವುದು, ವಿದ್ಯುತ್ ಲೈನ್ಗಳಿಗೆ ಅಡೆ ತಡೆ ಉಂಟು ಮಾಡುವ ರೀತಿಯಲ್ಲಿ ವಸ್ತುಗಳ ಸ್ಥಾಪನೆ, ಜಾನುವಾರುಗಳನ್ನು ಕಟ್ಟಿ ಹಾಕುವುದು ನಿಯಮ ಬಾಹಿರವಾಗಿದೆ.
   ಬೇಕು ಜಾಗೃತಿ-ಕಠಿಣ ನಿಲುವು:
   ಜಿಲ್ಲೆಯಾದ್ಯಂತ ಕಾನೂನು ನಿಬಂಧನೆಗಳಿದ್ದರೂ ಅವನ್ನು ಗಾಳಿಗೆ ತೂರಿ ವಿದ್ಯುತ್ ಕಂಬ ಸಹಿತ ಸರಕಾರಿ ನಾಮ ಫಲಕಗಳನ್ನು ಪೋಸ್ಟರ್ ಫ್ಲೆಕ್ಸ್ ಗಳನ್ನು ಬಳಸುತ್ತಿರುವುದು ವ್ಯಾಪಕಗೊಂಡಿದ್ದು, ಅಧಿಕೃತ ವರ್ಗದ ಅನಾಸ್ಥೆ ಈ ಅವಾಂತರಗಳಿಗೆ ಮೂಲ ಕಾರಣವೆಂದು ಸಾರ್ವಜನಿಕರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಜಾಗೃತಿ ಮತ್ತು ಪೋಸ್ಟರ್, ಬ್ಯಾನರ್ ಗಳನ್ನು ಸ್ಥಾಪಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ತುತರ್ು ಅನಿವಾರ್ಯತೆ ಇದೆ.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries