ಬಿಸಿಸಿಐನಿಂದ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್; ಐಪಿಎಲ್ನಲ್ಲಿ ಆಡಲು ಅಡ್ಡಿಯಿಲ್ಲ!
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭ್ರಷ್ಟಾಚಾರ ಆರೋಪದಿಂದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ಟೀಂ ಇಂಡಿಯಾದೊಂದಿಗೆ ತವರಿಗೆ ಮರಳುವ ವೇಳೆ ಶಮಿ ದುಬೈ ಹೋಟೆಲ್ ನಲ್ಲಿ ತಂಗಿದ್ದರು. ಈ ವೇಳೆ ಪಾಕಿಸ್ತಾನದ ಮಹಿಳೆಯೊಬ್ಬರು ಶಮಿ ಜತೆಗಿದ್ದರು. ಅಲ್ಲದೆ ಆಕೆ ಇಂಗ್ಲೆಂಡ್ ಮೂಲದ ಮೊಹಮ್ಮದ್ ಭಾಯ್ ಎಂಬ ವ್ಯಕ್ತಿ ನೀಡಿದ ಹಣವನ್ನು ಶಮಿಗೆ ಹಸ್ತಾಂತರಿಸಿದ್ದರು ಎಂಬ ಗಂಭೀರ ಆರೋಪವನ್ನು ಶಮಿ ವಿರುದ್ದ ಪತ್ನಿ ಹಸೀನ್ ಜಹಾನ್ ಮಾಡಿದ್ದರು.
ಬಿಸಿಸಿಐ ನಿವರ್ಾಹಕ ಸಮಿತಿ ಬಿಸಿಸಿಐ ವಿರೋಧಿ ಭ್ರಷ್ಟಾಚಾರ ಘಟಕದ ಮುಖ್ಯಸ್ಥ ನೀರಜ್ ಕುಮಾರ್ ಅವರಿಗೆ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿತ್ತು. ಅಂತೆ ನೀರಜ್ ಕುಮಾರ್ ಅವರು ಶಮಿ ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ವರದಿ ನೀಡಿದೆ ಎಂದು ಹೇಳಲಾಗಿದೆ.