HEALTH TIPS

No title

                 ಮಹಾತ್ಮರ ಜೀವನ ಪರಿಚಯ ವಿದ್ಯಾಥರ್ಿಗಳಿಗೆ ನೀಡಬೇಕು-ಕುಂಟಾರು ತಂತ್ರಿ
    ಪೆರ್ಲ:   ಸಂಸ್ಕಾರಯುತ ಶಿಕ್ಷಣದಿಂದ ಗುರು ಹಿರಿಯರನ್ನು, ಮಾತೆಯರನ್ನು ಗೌರವಿಸುವ ಪರಂಪರೆ ನಮ್ಮದು. ವಿದೇಶಿ ಸಂಸ್ಕೃತಿಯನ್ನು ಅನುಸರಿಸುವಂತಹ ಶಿಕ್ಷಣ ಪದ್ಧತಿಗಳಲ್ಲಿ ಆಧ್ಯಾತ್ಮಕತೆ ,ಧಾಮರ್ಿಕತೆಯ ಬಗ್ಗೆ ಯಾವುದೇ ಪಠ್ಯಗಳಿರುವುದಿಲ್ಲ. ಅಲ್ಲದೆ ದೇಶಕ್ಕಾಗಿ ದುಡಿದ ಮಹಾತ್ಮರ ಜೀವನದ ಮಹತ್ತರ ಸಾಧನೆಯ ಬಗ್ಗೆ ಉಲ್ಲೇಖಗಳಿಲ್ಲ ಎಂದು ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ ಅಭಿಪ್ರಾಯಪಟ್ಟರು.
   ಅವರು ಪೆರ್ಲ ವಿವೇಕಾನಂದ ಶಿಶು ಮಂದಿರದ ವಾಷರ್ಿಕೋತ್ಸವ ಸಂದರ್ಭ  ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ , ಪುಷ್ಪಾರ್ಚನೆ ನಡೆಸಿ ಮಾತನಾಡಿದರು.
    ಇಂದಿನ ಶಿಕ್ಷಣ ಪದ್ಧತಿ ಬದಲಾಗಿರುವುದು  ಬೆಳೆಯುತ್ತಿರುವ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರದ ಕೊರೆತೆಗೆ ಕಾರಣವಾಗಬಹುದು. ಬಾಲ್ಯದಲ್ಲೇ ಸೂಕ್ತ ಗುರು ಶಿಷ್ಯರ ನಡುವಿನ ಅವಿನಾಭಾವ ಬಾಂಧವ್ಯ, ಉತ್ತಮ ಪ್ರಜೆಗಳ ನಿಮರ್ಾಣಕ್ಕೆ ಪ್ರೇರಣೆ ಎಂದು ಅವರು ತಿಳಿಸಿದರು.
    ನಾಲಂದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಡಾ.ಪ್ರಸನ್ನ ಅಖಿಲೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿವಿಧ ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಿಸಿದರು. ವಿದ್ಯಾಥರ್ಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾತರ್ಿಕ್ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು.ಮಾತೃ ಮಂಡಳಿ ಅಧ್ಯಕ್ಷೆ ಶ್ಯಾಮಲಾ ಪತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಉಪಹಾರದ ಬಳಿಕ ಶಿಶು ಮಂದಿರ ಮತ್ತು ಬಾಲಗೋಕುಲದ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries