ಎನ್ನ ಕನ್ನಡ(ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ)
ಎನ್ನದೀ ಕನ್ನಡವು ಬೇಕೆಮಗೆ ಬಿಗುಮಾನ
ಇತ್ತ ಬಾ ತಮ್ಮ ಕೇಳು ನೀನು/
ನಿನ್ನೆ ಹುಟ್ಟಿದುದಲ್ಲ, ಮೊನ್ನೆ, ಅದರಾಚೆಯಲ್ಲ
ಸಾವಿರದ ಸಾವಿರ ಇತಿಹಾಸವಿಹುದು
ನೂರಾರು ಭಾವಗಳ, ಜೀವಗಳ ಮನೆಯಹುದೀಗದು ಗಡಿನಾಡು ನೋಡು/
ಪಾತರ್ಿಸುಬ್ಬನ ಬಲ್ಲೆ, ಪೈಯವರು, ರೈಯವರು, ಕೀರಿಕ್ಕಾಡು ಮಾಸ್ತರರು
ಶೇಣಿ, ಪೆರ್ಲ ಪಂಡಿತರು, ಖಂಡಿಗೆಯ ಸಾಧಕರು,ಕುಣಿದ ಶಾಸ್ತ್ರಿಗಳು,
ಬೇಕಲದ ನಾಯಕರು, ಸಿರಿಬಾಗಿಲು ಮೆರೆದ, ಬಾಚ ಮರೆವಿರೇನೋ/
ಮೊರೆತವೀಗಳು ಕೇಳು ಚೆಂಡೆ, ಜಾಗಟೆ, ಕೋಲ
ಬಸದಿ, ಮಂದಿರ, ಮಸೀದಿ, ಚಚರ್ುಗಳ ಸೌಹಾರ್ಧತೆಯ ಮೇಳ
ಮನೆಗೊಂದರಂತೆ ಬಹುಭಾಷೆಗಳಿಹುದು
ಗವಿಯ ಹೊಕ್ಕರು ಅಲ್ಲಿ ಎನ್ನ ಕನ್ನಡವಿತ್ತು, ಈಗ ಆಪತ್ತು/
ಯಾವುದೂ ಕನವರಿಕೆ ಹೊತ್ತು ತಪ್ಪಿತು ಆಗ
ತಬ್ಬಲಿಯಾಗಿಸಿ ಈಗ ಯಾರ ತಬ್ಬಲಿ ನಾನು ಇಹುದು ದುಖಃ/
ಆದರೂ ಕಾತರಿಕೆ, ನಿತ್ಯ ಕನವರಿಕೆ ತಮ್ಮ
ಅಮ್ಮ ಬರುವಳೆಂದು, ಸೆರಗಿನೊಳಸೆಳೆದು ಎತ್ತಿಕೊಳ್ಳುವಳೆಂಬ ಭರವಸೆಯ ಬಯಕೆ/
ಕವನ: ಸಿದ್ದಾರ್ಥ