HEALTH TIPS

No title

               ಏಕ ಭಾಷೆಯ ದ್ವೀಪಗಳ ಬದಲು ಬಹುಭಾಷೆಯ ದೀಪಗಳಾಗೋಣ=

ಮಲಾರ್ ಜಯರಾಮ ರೈ 
   ಕಾಸರಗೋಡು: ವೈವಿಧ್ಯಮಯವಾದ ಭಾರತೀಯ ಭಾಷಾ ಪರಂಪರೆ ಅಗಣಿತ ಸಂಬಂಧಗಳನ್ನು ಹೊಂದಿದ್ದು, ಅವುಗಳು ಪರಸ್ಪರ ಬೆಸೆದಾಗ ಬೆಳವಣಿಗೆ ಸಾಧ್ಯವಾಗುತ್ತದೆ. ಭಾಷೆಗಳನ್ನು ಹತ್ತಿರಕ್ಕೆ ತರುವ ಕಾರ್ಯಚಟುವಟಿಕೆಗಳು ನಿರಂತರವಾದಾಗ ಅವಕಾಶಗಳು ವಿಸ್ತರಿಸಿ ಹೊಸತನಕ್ಕೆ ನಾಂದಿಯಾಗುತ್ತದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಮಲಾರು ಜಯರಾಮ ರೈ ಅಭಿಪ್ರಾಯ ವ್ಯಕ್ತಪಡಿಸಿದರು.
   ಬೆಂಗಳೂರಿನ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಕಾಸರಗೋಡಿನ ಅಪೂರ್ವ ಕಲಾವಿದರು ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಅಪರಾಹ್ನ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ತಿಂಗಳ ಕಾರ್ಯಕ್ರಮ "ಕನ್ನಡ ಚಿಂತನೆ" ಹಾಗೂ ಕಾಸರಗೋಡಿನ ಮಲೆಯಾಳಿ ಪತ್ರಕರ್ತರಿಗೆ ನಡೆಸಿದ ಕನ್ನಡ ಕಲಿಕಾ ಕಾಯರ್ಾಗಾರದ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಸಿ ಅವರು ಮಾತನಾಡಿದರು.
   ಮಾತೃ ಭಾಷೆಯೊಂದಿಗೆ ಇತರ ಭಾಷೆಗಳನ್ನು ಕಲಿಯುವುದರಿಂದ ಪರಸ್ಪರ ಸಂಬಂಧಗಳನ್ನು ನಿಕಟಗೊಳಿಸಿ ವಿಶಾಲತೆಗೆ ಕಾರಣವಾಗುತ್ತದೆ. ಭಾಷೆಯ ಸಂಬಂಧಿ ದ್ವೇಶ-ಅಸೂಯೆಗಳಿಂದ ಕಚ್ಚಾಡುವುದು ಮಾನವ ಧರ್ಮವಲ್ಲ ಎಂದು ಅವರು ತಿಳಿಸಿದರು.
   ಕಾಸರಗೋಡು ಪ್ರೆಸ್ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡು ಕಾಸರಗೋಡಿನ ಬಹುಭಾಷಾ ಸಂಸ್ಕೃತಿಯ ಮಧ್ಯೆ ಏಕ ಭಾಷೆಯ ಅರಿವಿನಿಂದ ದ್ವೀಪಗಳಾಗುವ ಬದಲು ವಿವಿಧ ಭಾಷೆ, ಸಂಸ್ಕೃತಿಗಳನ್ನು ಅಥರ್ೈಸುವ ನಿಟ್ಟಿನ ಪ್ರಯತ್ನ ನಿರಂತರವಾಗಿ ನಡೆಯಬೇಕಿದೆ ಎಂದು ತಿಳಿಸಿದರು.
  ಖ್ಯಾತ ಗಾಯಕ ರಮೇಶ್ಚಂದ್ರ ಕಾಸರಗೋಡು ಉಪಸ್ಥಿತರಿದ್ದರು. ಸಮಾರಂಭದಲ್ಲಿ "ಕೀರ್ತನೆಗಳಲ್ಲಿ ಸಂಸ್ಕೃತಿ ಚಿಂತನೆ" ಎಂಬ ವಿಷಯದ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಸಂಶೋಧನಾ ವಿದ್ಯಾಥರ್ಿ ರವಿಶಂಕರ ಜಿ.ಕೆ. ವಿಶೇಷೋಪನ್ಯಾಸ ನೀಡಿ ಮಾತನಾಡಿ, ಕನ್ನಡ ನಾಡು-ನುಡಿಯನ್ನು ಕಟ್ಟಿ ಬೆಳೆಸುವಲ್ಲಿ ಕೀರ್ತನಕಾರರ ವಿಶಿಷ್ಟ ಕೊಡುಗೆಗಳು ಅಪಾರ ಎಂದು ತಿಳಿಸಿದರು. ಸಾಂಸ್ಕೃತಿಕ ಪ್ರತಿಕೂಲ ಸನ್ನಿವೇಶ ಸೃಷ್ಟಿಗೊಂಡಾಗ ಹುಟ್ಟಿ ಬೆಳೆದ ಕೀರ್ತನ ಪರಂಪರೆ ಅಂದಿನ ಜನಜೀವನದ ಮೇಲೆ ಗಾಢ ಪರಿಣಾಮ ಬೀರುವಲ್ಲಿ ಮಹತ್ತರ ಯಶ ಸಾಧಿಸಿದೆ ಎಂದು ಅವರು ಬೊಟ್ಟುಮಾಡಿದರು.   ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
   ಪತ್ರಕರ್ತ ಪುರುಷೋತ್ತಮ ಬಿ ಸ್ವಾಗತಿಸಿ, ಅಪೂರ್ವ ಕಲಾವಿದರು ಸಂಸ್ಥೆಯ ಡಾ.ರತ್ನಾಕರ ಮಲ್ಲಮೂಲೆ ವಂದಿಸಿದರು.ಕಾರ್ಯಕ್ರಮಕ್ಕೂ ಮೊದಲು ಗಾಯಕ ರಮೇಶ್ಚಂದ್ರ ಕಾಸರಗೋಡು ರವರಿಂದ ದಾಸ ಸಂಕೀರ್ತನಾ ಗಾಯನ ನಡೆಯಿತು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries