HEALTH TIPS

No title

            ನಾಗಾರಾಧನೆ ಅತಿ ಪ್ರಾಚೀನ-ನಂಬಿದವರನ್ನು ಕೈಬಿಡನು-ಮಾಣಿಲಶ್ರೀ
              ಪೆರಿಂಗಡಿಯಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ 
   ಉಪ್ಪಳ: ಬದುಕಿನ ಸಾರ್ಥಕತೆಗೆ ಹಿರಿಯರು ಹಾಕಿಕೊಟ್ಟ ಧರ್ಮಮಾರ್ಗದ ಜೀವನ ನಡೆಸುವ ಮೂಲಕ ಸಾಗಬೇಕಿದೆ. ನಾಗಾರಾಧನೆ ಸಮೃದ್ದತೆಯ ಸಂಕೇತವಾಗಿದ್ದು, ಅದರಿಂದ ಸುಭಿಕ್ಷ, ನೆಮ್ಮದಿ ಲಭ್ಯವಾಗುತ್ತದೆ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
   ಅವರು ಉಪ್ಪಳ ಸಮೀಪದ ಮಂಗಲ್ಪಾಡಿ ಪೆರಿಂಗಡಿಯ ಶ್ರೀಶಾಸ್ತಾರೇಶ್ವರ ನಾಗಬ್ರಹ್ಮ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಸಪರ್ಾದಿಷ್ಟಕುಲ ನಾಗದೇವರ ಅಷ್ಟಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಮಂಗಳವಾರ ಸಂಜೆ ನಡೆದ ಧಾಮರ್ಿಕ ಸಭೆಯಲ್ಲಿ ಆಶೀರ್ವಚನಗೈದು ಮಾತನಾಡಿದರು.
  ನಾಗಾರಾಧನೆ ಮತ್ತು ಮನುಷ್ಯ ಜೀವನ ಪರಸ್ಪರ ಪೂರಕ ಧನಾತ್ಮಕ ಸಂಬಂಧಗಳನ್ನು ಹೊಂದಿದ್ದು, ದೇಹದ ಕುಂಡಲಿನೀ ಶಕ್ತಿಯ ಮೂಲ ನಾಗ ಶಕ್ತಿಯಾಗಿದೆ ಎಂದು ತಿಳಿಸಿದ ಅವರು, ಸಂತಾನ, ಆರೋಗ್ಯ, ಅಷ್ಟ ಐಶ್ವರ್ಯಗಳ ಪ್ರಾಪ್ತಿ ನಾಗಾನುಗ್ರಹದಿಂದ ಲಭ್ಯವಾಗುವುದು ಎಂದು ತಿಳಿಸಿದರು. ನಾಗಮಂಡಲ ಉತ್ಸವದಲ್ಲಿ ಅಡಿಕೆ ಹಿಂಗಾರವನ್ನು ಪ್ರಮುಖವಾಗಿ ಬಳಸಲಾಗುತ್ತಿದ್ದು, ಕರಾವಳಿಯ ಅಡಿಕೆ ಕೃಷಿ ಮತ್ತು ನಾಗಾರಾಧನೆಯ ಹಿಂದೆ ನಿಕಟ ಸಂಬಂಧಗಳಿವೆ. ನಾಗಮಂಡಲೋತ್ಸವ, ನಾಗನ ಮೇಲಿನ ವಿಶ್ವಾಸ ಹೆಚ್ಚಿದಷ್ಟು ಅಡಿಕೆಯ ಧಾರಣೆಯ ಏರಿಕೆಯ ಮೂಲಕ ಕೃಷಿಕನ ಸಮೃದ್ದ ಬದುಕಿಗೆ ದಾರಿ ಮಾಡಿಕೊಟ್ಟಿರುವುದನ್ನು ಗುರುತಿಸಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು.
   ವೇದಿಕೆಯಲ್ಲಿ ಉಪಸ್ಥಿತರಿದ್ದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಶ್ರೀಗಳು ಮಾತನಾಡಿ, ನಾಗಾರಾಧನೆಯಂತಹ ಆಚರಣೆಗಳು ಧರ್ಮ ಜಾಗೃತಿಯ ಚಿಂತನೆಯನ್ನು ನೀಡುತ್ತದೆ. ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಾಗಮಂಡಲದ ಕೊಡುಗೆ ದೊಡ್ಡದು ಎಂದು ತಿಳಿಸಿದರು.
   ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರು ಉಪಸ್ಥಿತರಿದ್ದು ಮಾತನಾಡಿ, ಪ್ರಕೃತಿ ಮತ್ತು ಜನಜೀವನದ ಪರಸ್ಪರ ಸಂಬಂಧಗಳನ್ನು ಬೆಸೆಯುವ ನಾಗಾರಾಧನೆ ಪರಿಶುದ್ದತೆಯ ಸಂಕೇತ. ಶುದ್ದ ಅಂತರಾಳದ ಜೀವನ ಭಗವಂತನ ಕೃಪೆಗೆ ಕಾರಣವಾಗಿ ಸಾಯುಜ್ಯದೆಡೆಗೆ ಮುನ್ನಡೆಸುವುದು ಎಂದು ತಿಳಿಸಿದರು.
   ಕಾರ್ಯಕ್ರಮದಲ್ಲಿ ಧಾಮರ್ಿಕ ಉಪನ್ಯಾಸಗೈದ ಹಿರಿಯ ಸಂಸ್ಕೃತ ವಿದ್ವಾಂಸ, ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಮಾತನಾಡಿ, ದೇಹದ ಕುಂಡಲಿನೀ ಶಕ್ತಿಯು ನಾಗನ ಪ್ರತೀಕವಾಗಿದ್ದು, ನಾಗಗಳಿಗೆ ಉಂಟಾಗುವ ಅಸುರಕ್ಷಿತತೆ ಮನುಷ್ಯ ದೇಹವನ್ನೂ ಬಾಧಿಸಿ ಅಸಂತೋಷಕ್ಕೆ ಕಾರಣವಾಗುವುದು ಎಂದು ತಿಳಿಸಿದರು. ವೇದ, ಪುರಾಣ, ಉಪನಿಷತ್ತುಗಳಲ್ಲಿ ಧಾರಾಳವಾಗಿ ನಾಗಾರಾಧನೆಯ ವಿವರಣೆಗಳಿದ್ದು, ನಂಬಿಕೆಯು ಬಲಗೊಂಡಷ್ಟು ನೆಮ್ಮದಿ ನೆಲೆಗೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
   ಹಿರಿಯ ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ನಾಗಪಾತ್ರಿ ವೇದಮೂತರ್ಿ ಸಗ್ರಿ ಗೋಪಾಲಕೃಷ್ಣ ಸಾಮಗ, ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದ ಪವಿತ್ರಪಾಣಿ ಮಾಧವ ಭಟ್ ಪೊಳಲಿ ದಿವ್ಯ ಉಪಸ್ಥಿತರಿದ್ದು ಶುಭಾಶಂಸನೆಗೈದರು.  ರಾಧಾಕೃಷ್ಣ ಶೆಟ್ಟಿ ಚೆರ್ಲ, ಉದ್ಯಮಿ ಸಂಜೀವ ಶೆಟ್ಟಿ, ಡಾ.ಬಿ.ಎಸ್ ರಾವ್, ಕೃಷ್ಣಪ್ಪ ಪೂಜಾರಿ, ರಾಧಾಕೃಷ್ಣ ಹೊಳ್ಳ ಬೆಂಗಳೂರು, ಕರುಣಾಕರ ಬೆಳ್ಚಪ್ಪಾಡ, ಡಾ.ಸುರೇಶ್ ಮಯ್ಯ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
   ನಾಗಮಂಡಲೋತ್ಸವ ಸಮಿತಿಯ ಕಾಯಾಧ್ಯಕ್ಷ ಡಾ. ಶ್ರೀಧರ ಭಟ್ ಉಪ್ಪಳ ಸ್ವಾಗತಿಸಿ, ಹರಿಶ್ಚಂದ್ರ ಮಂಜೇಶ್ವರ ವಂದಿಸಿದರು.
   ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಜೆ 5.30 ರಿಂದ ದ್ರವ್ಯ ಜೋಡಣೆ, ತನುತರ್ಪಣ, ಹಾಲಿಟ್ಟು ಸೇವೆಗಳು ನಡೆಯಿತು. ರಾತ್ರಿ 10.30ರ ಬಳಿಕ ಮಹಾ ಕಾಣರ್ಿಕದ ಐತಿಹಾಸಿಕ ಶ್ರೀಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ ಶ್ರದ್ದಾ ಭಕ್ತಿಯಿಂದ ನಡೆಯಿತು. ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ ಹಾಗೂ ಮದ್ದೂರು ಬಾಲಕೃಷ್ಣ ವೈದ್ಯರ ಬಳಗ ನಾಗಮಂಡಲೋತ್ಸವ ನೆರವೇರಿಸಿದರು. ಬಳಿಕ ಮಂತ್ರಾಕ್ಷತೆ, ಸಿರಿಮುಡಿ ಗಂಧ ಪ್ರಸಾದ ವಿತರಣೆ ನಡೆಯಿತು. ಜಿಲ್ಲೆಯ ಹಲವೆಡೆಗಳಿಂದ, ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ವಿಟ್ಲ, ಮಂಗಳೂರು, ಉಡುಪಿ, ಮಡಿಕೇರಿ, ಬೆಂಗಳೂರು, ಮೈಸೂರುಗಳಿಂದ ಎಂಟು ಸಾವಿರಕ್ಕಿಂತಲೂ ಮಿಕ್ಕಿದ ಭಕ್ತರು ಪಾಲ್ಗೊಂಡಿದ್ದರು.
   




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries