HEALTH TIPS

No title

                  ತಾಯ್ತನ ಎಂದರೆ ಮಾಕರ್ೆಟಿಂಗ್ ಅಲ್ಲ; 'ಗೃಹಲಕ್ಷ್ಮಿ' ಮುಖಪುಟದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ
     ಕಾಸರಗೋಡು: ಮಹಿಳಾ ದಿನಾಚರಣೆಯ ಪ್ರಯುಕ್ತ ಮಲಯಾಳಂ ಪಾಕ್ಷಿಕ ಗೃಹಲಕ್ಷ್ಮಿ ಮುಖಪುಟದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಮ್ಮನ್ನು ದುರುಗುಟ್ಟಿ ನೋಡಬೇಡಿ, ನಾವು ಹಾಲುಣಿಸುತ್ತಿದ್ದೇವೆ-ಕೇರಳದ ಜನತೆಗೆ ಅಮ್ಮಂದಿರ ಮಾತು ಎಂಬ ಶೀಷರ್ಿಕೆಯೊಂದಿಗೆ ಗೃಹಲಕ್ಷ್ಮಿಯಲ್ಲಿ ಪ್ರಕಟವಾದ ಮುಖಪುಟ ಚಿತ್ರದ ಬಗ್ಗೆ ಪರ ವಿರೋಧ ಚಚರ್ೆಗಳು ನಡೆಯುತ್ತಿವೆ.
    ಅಮ್ಮ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ ಇದಾಗಿದ್ದು, ತೆರೆದೆದೆಯ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದರೆ ಇನ್ನು ಕೆಲವರು ಹಾಲುಣಿಸುವಾಗ ಅಮ್ಮ ಮಗುವಿನತ್ತ ಗಮನ ಹರಿಸಬೇಕೇ ಹೊರತು ಕ್ಯಾಮೆರಾ ನೋಡಿ ಪೋಸ್ ಕೊಡುವುದಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
   ನಟಿ, ಲೇಖಕಿ, ಅಂಕಣಗಾತರ್ಿ ಮತ್ತು  ಗಗನಸಖಿ ಆಗಿರುವ ಜೀಲೂ ಜೋಸೆಫ್ ಈ ಕವರ್ ಚಿತ್ರದಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಸೀರೆ ಉಟ್ಟು, ಕತ್ತಿನಲ್ಲಿ ಕರಿಮಣಿ ಸರ, ಹಣೆಯಲ್ಲಿ ಸಿಂಧೂರ ಇಟ್ಟ ಮಹಿಳೆಯೊಬ್ಬಳು ರವಿಕೆ ಬಿಚ್ಚಿ ಮಗುವಿಗೆ ಹಾಲುಣಿಸುವ ಚಿತ್ರ ಮುಖ ಪುಟದಲ್ಲಿದೆ.
   ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ಚಚರ್ೆ:
   ಮಗುವಿಗೆ ಎದೆಹಾಲುಣಿಸುವ ಅಮ್ಮನನ್ನು ಯಾರೂ ದುರುಗುಟ್ಟಿನೋಡುವುದಿಲ್ಲ. ಈ ರೀತಿಯ ಚಿತ್ರ ಪ್ರಕಟಿಸುವ ಮೂಲಕ ಮಾತೃಭೂಮಿ ಗೃಹಲಕ್ಷ್ಮಿ ಮಾಕರ್ೆಟಿಂಗ್ ತಂತ್ರ ಮಾಡಿದೆ ಎಂದು ಕೆಲವರು ಆರೋಪಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries