ಮತ್ತೆ ಸಂಘಟಿತರಾಗುತ್ತಿದ್ದಾರೆ ಗಡಿನಾಡ ಕನ್ನಡ ಪತ್ರಕರ್ತರು
ಮಾ.24ರಂದು ಕನ್ನಡ ಪತ್ರಕರ್ತರ ಸಂಘದ ಮಹಾಸಭೆ
ಕಾಸರಗೋಡು: ಗಡಿನಾಡು ಕಾಸರಗೋಡಿನ ಅಲ್ಪಸಂಖ್ಯಾತ ಕನ್ನಡಿಗರು ಅನುಭವಿಸುವ ಸಂಕಷ್ಟಗಳಲ್ಲಿ ಒಂದಷ್ಟು ಗಂಭೀರ ಸಮಸ್ಯೆಗೊಳಗಾಗುತ್ತಿರುವವರು ಇಲ್ಲಿಯ ಕನ್ನಡ ಪತ್ರಕರ್ತರು. ಕನರ್ಾಟಕದ ಬಹುತೇಕ ಎಲ್ಲಾ ಕನ್ನಡ ಮಾಧ್ಯಮಗಳಿಗೆ ವರದಿಗಾರರನ್ನು ಹೊಂದಿರುವ ಕಾಸರಗೋಡಿನ ಕನ್ನಡ ಪತ್ರಕರ್ತರು ತಮ್ಮ ಎಡೆಬಿಡದ ಉದ್ಯೋಗ ನಿರ್ವಹಣೆಯ ಮಧ್ಯೆ ತಮ್ಮ ಹಕ್ಕುಗಳಿಗಾಗಿ ಏನೂ ಮಾಡಲಾರದ ಸ್ಥಿತಿ ಹಿಂದಿನಿಂದಲೂ ಮುಂದುವರಿದುಕೊಂಡುಬಂದಿರುವ ವ್ಯವಸ್ಥೆಯಂತೆ ಬೆಳೆದಿದೆ. ಈ ನಿಟ್ಟಿನಲ್ಲಿ ಕನ್ನಡ ಪತ್ರಕರ್ತರು ಒಂದಾಗಬೇಕೆಂಬ ಕನಸುಗಳೊಂದಿಗೆ ವರ್ಷಗಳ ಹಿಂದೆ ಹುಟ್ಟಿಕೊಂಡ ಕಾಸರಗೋಡು ಕನ್ನಡ ಪತ್ರಕರ್ತರ ಸಂಘ ಮುಂಚೂಣಿಯಲ್ಲಿ ಒಂದಷ್ಟು ವರ್ಷ ಕಾರ್ಯನಿರ್ವಹಿಸಿದರೂ ಬಳಿಕ ನಿಸ್ತೇಜಗೊಂಡಿರುವುದು ಬಹುಷಃ ಸುದ್ದಿಯಾಗಲೇ ಇಲ್ಲ.
ಇದೀಗ ಮತ್ತೆ ಆ ಸಂಘಟನೆ ಎಚ್ಚೆತ್ತುಕೊಂಡು ಕ್ರಿಯಾತ್ಮಕವಾಗಿ ಮುಂದಡಿಯಿಡಲಿದ್ದು, ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಮಹಾಸಭೆಯು ಮಾ.24ರಂದು ಬೆಳಗ್ಗೆ 10 ಗಂಟೆಗೆ ನಗರದ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲ್ಲಿ ನಡೆಯಲಿದೆ. ಜಿಲ್ಲೆಯ ಎಲ್ಲಾ ಕನ್ನಡ ಪತ್ರಕರ್ತರು ಸಭೆಯಲ್ಲಿ ಭಾಗವಹಿಸಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.