HEALTH TIPS

No title

        ಇನ್ನು ಅಕ್ಕಿಗೆ ವಂಚನೆಯಾಗದು- ಪಡಿತರ ಅಂಗಡಿಗಳಿಗೆ ತಲುಪಿದ ಇ-ಪೋಸ್ ಪಂಚಿಂಗ್= ಕಾಡರ್ುದಾರರು ಬಂದಿಲ್ಲವಾದರೇ ರೇಶನ್ ಇಲ್ಲ, ಆಹಾರ ಸಾಮಗ್ರಿಗಳ ಕಳ್ಳ ವ್ಯಾಪಾರಕ್ಕೂ ಬ್ರೇಕ್
   ಕಾಸರಗೋಡು: ಜಿಲ್ಲೆಯ ಪಡಿತರ(ರೇಶನ್) ಅಂಗಡಿಗಳಿಗೆ ಇ-ಪೋಸ್ ಪಂಚಿಂಗ್ ಯಂತ್ರಗಳು ತಲುಪಿವೆ. ಕಾಡರ್ುದಾರರು ತಮ್ಮ ಪಡಿತರ ಕಾಡರ್್ ಸಹಿತರಾಗಿ ಬಾರದೇ ಇದ್ದಲ್ಲಿ ರೇಶನ್ ಮೂಲಕ ದೊರೆಯುವ ಆಹಾರ ಸಾಮಾಗ್ರಿಗಳು ಸಿಗದೇ ಉಳಿಯಲಿವೆ. ಪಡಿತರ ಅಂಗಡಿ ಮಾಲಕರಿಗೆ ಇನ್ನು ಮುಂದೆ ಅಂಗಡಿಗೆ ತಲುಪುವ ಆಹಾರ ಸಾಮಾಗ್ರಿಗಳ ಕಳ್ಳ ವ್ಯಾಪಾರಕ್ಕೂ ತಡೆ ಬೀಳಲಿದೆ. ಕಾಸರಗೋಡು ತಾಲೂಕಿನ ಮುಳ್ಳೇರಿಯ, ಬದಿಯಡ್ಕ, ವ್ಯಾಪ್ತಿಯ 105 ಪಡಿತರ ವಿತರಣಾ ಕೇಂದ್ರಗಳ 70 ರೇಶನ್ ಅಂಗಡಿಗೆ ನವೀನ ಇ-ಪೋಸ್ ಪಂಚಿಂಗ್ ಮೆಶಿನ್ ತಲುಪಿವೆ. ಉಳಿದಂತೆ ಮಂಜೇಶ್ವರ ತಾಲೂಕಿನ ರೇಶನ್ ಅಂಗಡಿಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಇ-ಪೋಸ್ ಯಂತ್ರ ಸಹಿತ ಸಲಕರಣೆಗಳು ಬಂದು ತಲುಪಿದ್ದು ಶೀಘ್ರದಲ್ಲೇ ಯಂತ್ರಧಾರಿತ ರೇಶನ್ ವಿತರಣಾ ವ್ಯವಸ್ಥೆ ನಡೆಯಲಿದೆ.
  ನಗರದ 35 ಅಂಗಡಿಗಳಲ್ಲಿ ಉದ್ದೇಶಿತ ಇ-ಪೋಸ್ ಮೆಶಿನ್ಗಳನ್ನು ಸ್ಥಾಪಿಸಲಾಗಿದೆ. ಕಾಡರ್ುದಾರರು ತಮ್ಮ ರೇಶನ್ ಕಾಡರ್ು ಸಹಿತರಾಗಿ ಆಗಮಿಸಿ ರೇಶನ್ ಕಾಡರ್ು ಸಂಖ್ಯೆಯನ್ನು ನಮೂದಿಸಿದರಷ್ಟೇ ರೇಶನ್ ಸಾಮಗ್ರಿಗಳು ದೊರೆಯಲಿವೆ ಎಂದು ಅಧಿಕೃತರು ತಿಳಿಸಿದ್ದಾರೆ. ಕಾಡರ್ುದಾರರು ಇಲ್ಲವಾದಲ್ಲಿ ರೇಶನ್ ಕಾಡರ್್ನಲ್ಲಿ ನಮೂದಿಸಲ್ಪಟ್ಟ ಹೆಸರಿನ ಮಂದಿ ಸ್ಥಳಕ್ಕೆ ತಲುಪಿ ರೇಶನ್ ಪಡೆದುಕೊಳ್ಳಬಹುದಾಗಿದೆ. ಬೆಳಗ್ಗೆ 8 ಗಂಟೆಯಿಂದ ಅಪರಾಹ್ನ 12 ಗಂಟೆಯವರೆಗೆ, ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆ ತನಕ ರೇಶನ್ ವಿತರಣೆ ನಡೆಯಲಿದೆ.
   ವಿದ್ಯುನ್ಮಾನ ಯಂತ್ರದ ಅಂಕಿ ಅಂಶ ಆಧಾರಿತ ಪಡಿತರ ಸಾಮಾಗ್ರಿ ಮಾರಾಟದಿಂದ ರೇಶನ್ ಮಾರಾಟ ಸುಲಭವಾಗಲಿದ್ದು ಹೆಚ್ಚಿನ ಪಾರದರ್ಶಕತೆ ಮೂಲಕ ರೇಶನ್ ಮಾಲಕರು ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ. ರಾಷ್ಟ್ರೀಯ ಆಹಾರ ಭದ್ರತಾ ಅಧಿನಿಯಮದಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಕೇರಳ ರಾಜ್ಯವು ಮಾದರಿಯಾಗಲಿದ್ದು, ಇತರೆ ರಾಜ್ಯಗಳಿಗೆ ಹೊಸ ವ್ಯವಸ್ಥೆ ಮಾರ್ಗದಶರ್ಿಯಾಗಿದೆ. ಮಾಚರ್್ ಅಂತ್ಯದೊಳಗೆ ಜಿಲ್ಲೆಯ ಎಲ್ಲ ರೇಶನ್ ಅಂಗಡಿಗಳಿಗೆ ವಿದ್ಯುನ್ಮಾನ ಯಂತ್ರಗಳು ತಲುಪಲಿದ್ದು, ಅಂಗಡಿ ಮಾಲಕರಿಗೆ ಯಂತ್ರಗಳ ಉಪಯೋಗದ ಬಗ್ಗೆ ವಿಶೇಷ ತರಗತಿಗಳು ಆಯಾ ಜಿಲ್ಲಾ ಕೇಂದ್ರದಲ್ಲಿ ನಡೆಯಲಿವೆ. ಏ.1 ರಿಂದ ಹೊಸ ವ್ಯವಸ್ಥೆಯ ಮೂಲಕ ರೇಶನ್ ವಿಕ್ರಯ ಏರ್ಪಡಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಮೂಲಕ ಕೇರಳದಲ್ಲಿ 1.54 ಕೋಟಿ ಜನರು ತಿಂಗಳಿಗೆ ನಾಲ್ಕು ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಪಡೆಯಲಿದ್ದು. 1.24 ಕೋಟಿ ಮಂದಿ ತಲಾ ಎರಡು ಕೆ.ಜಿ ಅಕ್ಕಿಯನ್ನು ಎರಡು ರೂಪಾಯಿಗಳಿಗೆ ಪಡೆಯಲಿದ್ದಾರೆ. ಉಳಿದಂತೆ 65 ಲಕ್ಷ ಮಂದಿ ಒಂದು ಕೆ.ಜಿ ಅಕ್ಕಿಯನ್ನು 8 ರೂ. ಮತ್ತು ಗೋಧಿಯನ್ನು 7 ರೂ. ನಂತೆ ಸ್ವೀಕರಿಸಲಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ನಿಯಮ(ಎನ್ಎಫ್ ಎಸ್ಎ)ದಂತೆ ರಾಜ್ಯದ 14,500 ರೇಶನ್ ಅಂಗಡಿಗಳು ಹೊಸ ವ್ಯವಸ್ಥೆಗೆ ಒಳಪಡಲಿದ್ದು, ಮೈಕ್ರೋ ಎಟಿಎಂ ಗಳಂತೆ ಕಾರ್ಯನಿರ್ವಹಿಸಲಿವೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries