HEALTH TIPS

No title


                  ಯಕ್ಷಗಾನಕ್ಕೆ ಪೂರ್ಣ ಪ್ರಮಾಣದ ಕಲಾಶಾಲೆ ರಚನೆಗೊಳ್ಳಬೇಕು-ಪ್ರೊ.ಎ.ಶ್ರೀನಾಥ್
           ಪುದುಕೋಳಿಯಲ್ಲಿ ತತ್ವಮಸಿ ಸಂಗಮ ಹಮ್ಮಿಕೊಂಡ ಯಕ್ಷಗಾನ ಬಯಲಾಟ-ಅಭಿನಂದನಾ ಕಾರ್ಯಕ್ರಮ 

   ಬದಿಯಡ್ಕ: ಯಕ್ಷಗಾನ ಸವರ್ಾಂಗೀಣ ಕಲಾಪ್ರಕಾರವಾಗಿದ್ದು, ಇಂದು ದೇಶ ವಿದೇಶಗಳಲ್ಲಿ ವ್ಯಾಪಕ ಪ್ರಯೋಗ-ಪ್ರದರ್ಶನ ಕಾಣುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಯಕ್ಷಗಾನವನ್ನು ಹೊಸ ತಲೆಮಾರಿಗೆ ಪರಿಚಯಿಸಲು ಮತ್ತು ಪರಂಪರೆಯನ್ನು ತೋರಿಸಲು ಅದರದ್ದೇ ಕಲಾಶಾಲೆ ಮೂಡಿಬರಬೇಕು ಎಂದು ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
    ನೀಚರ್ಾಲು ಸಮೀಪದ ಪುದುಕೋಳಿ ತತ್ವಮಸಿ ಸಂಗಮ ಹಾಗೂ ಊರ ಹತ್ತು ಸಮಸ್ತರ ನೇತೃತ್ವದಲ್ಲಿ ಬುಧವಾರ ರಾತ್ರಿ ಹಮ್ಮಿಕೊಳ್ಳಲಾದ ಹನುಮಗಿರಿ ಶ್ರೀಕೋದಂಡರಾಮ ಕೃಪಾಪೋಶಿತ ಯಕ್ಷಗಾನ ಮಂಡಳಿಯವರ ಬಯಲಾಟ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ರಾಷ್ಟ್ರದ ಗ್ರಾಂಥಿಕ ಸಮೃದ್ದತೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಯಕ್ಷಗಾನ ಸಮರ್ಥವಾಗಿ ಕೊಡುಗೆಗಳನ್ನು ನೀಡಿರುವುದು ಅದು ಜನಪ್ರೀಯಗೊಳ್ಳಲು ಕಾರಣವಾಗಿದ್ದು, ರಸ,ಭಾವ, ತಾಳ-ಮೇಳಗಳನ್ನೊಳಗೊಂಡು ಸಮೃದ್ದತೆಹೊಂದಿದೆ ಎಂದು ಅವರು ತಿಳಿಸಿದರು.
   ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಮಾತನಾಡಿ, ಜೀವನ ಮೌಲ್ಯ, ಸಂಸ್ಕಾರದ ಅರಿವು ಮೂಡಿಸುವಲ್ಲಿ ಪ್ರಧಾನ ಪಾತ್ರವಹಿಸುವ ಯಕ್ಷಗಾನ ಕಲಾ ಪ್ರಕಾರಕ್ಕೆ ಗಡಿನಾಡು ಕಾಸರಗೋಡಿನ ಮಹತ್ವದ ಕೊಡುಗೆಗಳಿಂದ ಹೆಮ್ಮೆಯೆನಿಸಿದೆ. ಅದನ್ನು ಉಳಿಸಿ ಬೆಳೆಸುವಲ್ಲಿ ಗಂಭೀರ ಕಾರ್ಯಚಟುವಟಿಕೆಗಳು ಆಗಬೇಕಿದ್ದು, ಸಂಘಸಂಸ್ಥೆಗಳು ಹಮ್ಮಿಕೊಳ್ಳುವ ಇಂತಹ ಪ್ರಯತ್ನಗಳು ಶ್ಲಾಘನೀಯ ಎಂದು ತಿಳಿಸಿದರು.
   ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನವೀನಚಂದ್ರ ಮಾಸ್ತರ್ ಮಾನ್ಯ ಹಾಗೂ ಹಿರಿಯ ಸಮಾಜ ಸೇವಕ ಎಂ.ಎಚ್.ಜನಾರ್ಧನ ಉಪಸ್ಥಿತರಿದ್ದು ಶುಭಹಾರೈಸಿದರು.
   ಸಮಾರಂಭದಲ್ಲಿ ಹಿರಿಯ ಸಾಧಕ ಕೃಷಿಕ ಉದಯಶಂಕರ ಭಟ್ ಪುದುಕೋಳಿಯವರನ್ನು ಸನ್ಮಾನಿಸಲಾಯಿತು. ಜೊತೆಗೆ ಭಾರತೀಯ ಸೇನೆಗೆ ಇತ್ತೀಚೆಗೆ ಆಯ್ಕೆಯಾದ ಪ್ರವೀಣ್ ಕುಮಾರ್ ಪುದುಕೋಳಿಯವರನ್ನು ಅಭಿನಂದಿಸಲಾಯಿತು. ಗೋಪಾಲಕೃಷ್ಣ ಭಟ್ ಪುದುಕೋಳಿ ಸನ್ಮಾನಪತ್ರ ವಾಚಿಸಿದರು. ತಿಲಕರಾಜ್ ಪುದುಕೋಳಿ ಸ್ವಾಗತಿಸಿ,ತತ್ವಮಸಿ ಸಂಗಮದ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ವಂದಿಸಿದರು. ಸ್ಥಳೀಯ ತತ್ವಮಸಿ ಬಾಲಗೋಕುಲ ಮಕ್ಕಳು ಪ್ರಾರ್ಥನಾಗೀತೆ ಹಾಡಿದರು.
   ಸಭಾ ಕಾರ್ಯಕ್ರಮಕ್ಕಿಂತಲೂ ಮೊದಲು ತಾಂಡವಂ ಕಾಸರಗೋಡು ಮತ್ತು ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯಗಳು ಪ್ರದರ್ಶನಗೊಂಡಿತು. ಬಳಿಕ ಹನುಮಗಿರಿ ಶ್ರೀಕೋದಂಡರಾಮ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಓಂ ನಮ ಶಿವಾಯ, ಕಣರ್ಾಜರ್ುನ ಹಾಗೂ ರಕ್ತರಾತ್ರಿ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
   ಮುಖ್ಯಾಂಶ:
   * ಯಕ್ಷಗಾನ ಬಯಲಾಟಕ್ಕೆ ದಾಖಲೆಯ ಸಂಖ್ಯೆಯ ಪ್ರೇಕ್ಷಕರು ಬೆಳಿಗ್ಗಿನ ವರೆಗೆ ಭಾಗವಹಿಸಿದ್ದು ಗಮನ ಸೆಳೆಯಿತು.
   * ಕಣರ್ಾಜರ್ುನ ಪ್ರಸಂಗದಲ್ಲಿ ಕರ್ಣ(ಜಯಪ್ರಕಾಶ್ ಶೆಟ್ಟಿ ಪೆಮರ್ುದೆ), ಶಲ್ಯ(ವಾಸುದೇವ ರಂಗಾ ಭಟ್ ಮಧೂರು) ರೊಳಗಿನ ಚಚರ್ಾ ಸಂಭಾಷಣೆ ಕುತೂಹಲಕರವಾಗಿ ವಿಭಿನ್ನವಾಗು ಮೂಡಿಬಂತು.
   * ಸ್ಥಳೀಯ ಕುಟುಂಬಶ್ರೀಯ ಹಿರಿಯ ಮಹಿಳೆಯರಿಂದ ಪ್ರದರ್ಶನಗೊಂಡ ನೃತ್ಯ ಜನಾಕರ್ಷಣೆಯೊಂದಿಗೆ ಆಶ್ಚರ್ಯಮೂಡಿಸಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries