ಬರಹಗಳು ಚಿಂತನೆಗೆ ಪ್ರೇರಣೆ ನೀಡುತ್ತದೆ-ರಾಧಾಕೃಷ್ಣ ಉಳಿಯತ್ತಡ್ಕ
ಕುಂಬಳೆ: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾವ್ಯಗಳು ಕಾಲಘಟ್ಟದ ಧ್ವನಿಯಾಗಿ ಗುರುತಿಸಲ್ಪಡುತ್ತದೆ. ಅಂತರಂಗದಲ್ಲಿ ಹುದುಗಿರುವ ಭಾವಗಳು ಸಾಂದ್ರರೂಪದಲ್ಲಿ ಕಾವ್ಯ-ಬರಹಗಳಾಗಿ ಮೂಡಿಬಂದಾಗ ಚಿಂತನೆಗೆ ತೆರೆದುಕೊಳ್ಳುತ್ತದೆ ಎಂದು ಹಿರಿಯ ಪತ್ರಕರ್ತ, ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಚುಟುಕು ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವ 2018 ಕಾರ್ಯಕ್ರಮದ ಅಂಗವಾಗಿ ನಡೆದ ಚುಟುಕು ಕವಿಗೋಷ್ಠಿ ಹಾಗೂ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಕಾಲೀನ ವಸ್ತು, ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಚುಟುಕು ಸಾಹಿತ್ಯಗಳು ಸಮಗ್ರ ಸಮಾಜ ನಿಮರ್ಾಣದಲ್ಲಿ ಚಿಕಿತ್ಸವ ಪ್ರವೃತ್ತಿಯ ಕಾರ್ಯನಿರ್ವಹಿಸುತ್ತದೆ. ಹಂಗು-ಮಿತಿಗಳ ವ್ಯಾಪ್ತಿಯನ್ನು ಮೀರಿ ಸುಲಲಿತವಾಗಿ ಅಕ್ಷರಗಳನ್ನು ಪೋಣಿಸುವುದರ ಮೂಲಕ ವ್ಯಾಪಕ ಅರ್ಥಗಳನ್ನು ಧ್ವನಿಸುವ ಚುಟುಕು ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ಬೇಕು ಎಂದು ತಿಳಿಸಿದರು. ಭಾಷೆಯ ಬೆಳವಣಿಗೆ, ವಿಷಯ ಮಂಡನೆಯ ಲಲಿತತೆ ಮತ್ತು ತಕ್ಷಣದ ಪ್ರತಿಸ್ಪಂಧನೆಯಿಂದ ಮೂಡುವ ಅಕ್ಷರ ಬಿಂಬಗಳು ತಾಜಾತನದ ಮೂಲಕ ಪ್ರೇರಣೆ ನೀಡುವಲ್ಲಿ ಚುಟುಕು ಸಾಹಿತ್ಯ ಪ್ರಕಾರ ಪ್ರಸ್ತುತ ಎಂದು ತಿಳಿಸಿದರು.
ಕವಿಗಳಾದ ಕೆ.ನರಸಿಂಹ ಭಟ್ ಏತಡ್ಕ, ಜಯ ಮಣಿಯಂಪಾರೆ, ಪುಂಡೂರು ಪ್ರಭಾವತಿ ಕೆದಿಲಾಯ, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ಚೇತನಾ ಕುಂಬಳೆ, ಶ್ಯಾಮಲಾ ರವಿರಾಜ್ ಕುಂಬಳೆ, ಶಾರದಾ ಎಸ್.ಭಟ್ ಕಾಡಮನೆ, ರಂಗಶಮರ್ಾ ಉಪ್ಪಂಗಳ, ವಿರಾಜ್ ಅಡೂರು, ಜ್ಯೋಸ್ನ್ಯಾ ಎನ್. ಕಡಂದೇಲು, ರವೀಂದ್ರನ್ ಪಾಡಿ ಸ್ವರಚಿತ ಕವಿಗಳ ವಾಚನ ನಡೆಸಿದರು. ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಮೈಸೂರಿನ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್.ಅರಸ್, ಮೈಸೂರಿನ ಮೇಘನಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಲತಾಕುಮಾರಿ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿರಾಜ್ ಅಡೂರು ಸ್ವಾಗತಿಸಿ, ವಂದಿಸಿದರು.