HEALTH TIPS

No title

                ಒಸರುವ ಕಣ್ಣೀರುಗಳಿಗೆ ಬೆಳ್ಗೊಡೆಯ ಆಸರೆಯ ದೇವಮಾನವ-ದೀನಬಂಧುವಿಗೆ ಪೌರ ಸನ್ಮಾನ
    ಬದಿಯಡ್ಕ: ದೇಹದೊಳಗೆ ಹೃದಯವಿದ್ದ ಮಾತ್ರಕ್ಕೆ ಅದು ಮಿಡಿಯುತ್ತಿದೆ ಎಂದು ಭಾವಿಸುವಂತಿಲ್ಲ! ಯಾಕೆಂದರೆ ಜಗದ ಪ್ರತಿ ಜೀವಗಳಿಗೂ ಹೃದಯವಿದ್ದರೂ ಅದು ಇತರ ಜೀವಿಗಳಿಗಿಂತ ವಿಶೇಷವಾಗಿ ಮಾನವನಲ್ಲಿ ಹೆಚ್ಚುಗಾರಿಕೆಯಿಂದ ಗುರುತಿಸಿಕೊಂಡಿದೆ ಎನ್ನಲು ಅಡ್ಡಿಯಾಗದು. ಕಾರಣ ಬಡಿತದಲ್ಲಿ ಇತರ ಜೀವಗಳಿಗಿಂತ ಭಿನ್ನಹಾದಿಯಲ್ಲಿದೆ, ಜೊತೆಗೆ ತನ್ನಂತೆಯೇ ಇರುವ ಪರರ ಭಾವಗಳನ್ನು ಗುರುತಿಸಿ ಸ್ಪಂದಿಸುವಲಲಿನ ಹೆಚ್ಚುಗಾರಿಕೆ ಮಹಾನ್ ಮಾನವ ಜೀವಿಯದ್ದು.
   ಆದರೆ ಇತರರೊಂದಿಗೆ ಮಿಳಿತಗೊಂಡು ನಾವು ನಡೆಸುವ ಬಾಳುವೆಯ ಅರ್ಥವ್ಯಾಪ್ತಿ ನಾವೆಷ್ಟು ಗಳಿಸಿದದೇವೆ ಎಂಬುದರಾಚೆಗೆ ಗಳಿಸಿದ್ದರಲ್ಲಿ ತನ್ನ ಆವಶ್ಯಕತೆಗಳಿಗಾಚೆಗೆ ಇತರರ ಅಗತ್ಯಗಳನ್ನೂ ಮನಗಂಡು ಅವರಿಗೆ ಕೈದೀವಿಗೆಯಾಗಿದ್ದೇವೆಂಬುದೂ ಮಹತ್ವವಾದುದು. ಇಂದಿನ ಹೊಸ ಕಾಲಘಟ್ಟದ ವ್ಯಾವಹಾರಿಕ ಜಗತ್ತಿಗದು ಮೂಢತ್ವವೆಂದು ಕಂಡರೂ ನಮ್ಮ ಪರಂಪರೆ, ಮೆಟ್ಟಿನಿಂತ ವಸುಂಧರೆಯ ಮಣ್ಣ ವಾಸನೆ ಹೃದಯ ಶ್ರೀಮಂತಿಕೆಯ ಪ್ರತೀಕವಾಗಿ ಬೆಳೆದುಬಂದ ವಿಶಾಲತೆಯದು. ಜೊತೆಗೆ ಭಾರತೀಯ ಪರಂಪರೆಯ, ಹುಟ್ಟು ಸಾವುಗಳಾಚೆಗಿನ ಭಗವದ್ ಸಾಯುಜ್ಯವೆಂಬ ಪರಿಕಲ್ಪನೆಗೂ ಹೃದಯಮಿಡಿತದಿಂದಾದ ದಾನತ್ವ ದಾನವತ್ವವನ್ನು ಮೆಟ್ಟಿ ಎತ್ತರಕೊಯ್ಯುತ್ತದೆ ಎಂಬ ಗೂಡಾರ್ಥವೂ ಮಹತ್ವದ್ದು.
   ಜಗತ್ತಿನ ಪ್ರಾಚೀನ ಪರಂಪರೆಗಳಲ್ಲೊಂದಾದ ಭಾರತೀಯ ಸಮಾಜ ವ್ಯವಸ್ಥೆ ಶತಶತಮಾನಗಳಿಂದ ಅನುಭವಿಸಿದ ಆಕ್ರಮಣಗಳು, ಕಳಕೊಂಡ ಸ್ವಾತಂತ್ರ್ಯ-ಸ್ವಾಯತ್ತತೆ, ಮೊಟಕಾದ ಬದುಕುವ ಹಕ್ಕುಗಳೇ ಮೊದಲಾದವುಗಳಿಂದ ಪಾರಾಗಿ ಇದೀಗ ದಶಕಗಳೇ ಸಂದರೂ ಇನ್ನೂ ಸಂಪೂರ್ಣ ಸ್ವಾವಲಂಬನೆ ಗಗನಕುಸುಮವಾಗಿಯೇ ಉಳಿದಿದೆ ಎಂಬುದೂ ಸತ್ಯ. ಜಗತ್ತಿನ ವರ್ತಮಾನದ ವಿದ್ಯಮಾನಗಳೊಂದಿಗೆ ಎಲ್ಲರೂ ನಾಗಾಲೋಟಕ್ಕೆಳಸಿ ದಾಂಗುಡಿ ಇರಿಸುವ ಮಧ್ಯೆ ನಮ್ಮಲಲಿ ಹಲವೆಡೆ ಮತ್ತಷ್ಟು ಹಲವರು ಎಡವುವುತ್ತಿದ್ದಾರೆ; ಸೋಲುತ್ತಿದ್ದಾರೆ. ಅಂತಹ ಸೋತವರನ್ನು ನಮ್ಮೊಡನೆ ಕೈನೀಡಿ ಕರೆದೊಯ್ಯುವುದು ಬಹುಷಃ ನಾಗರಿಕ ಪ್ರಪಂಚದ ಕರ್ತವ್ಯವೂ ಹೌದು.ಜೊತೆಗೆ ಮಾನವೀಯತೆಯ ಸಹೃದಯ ಸ್ಪಂದನ ಪ್ರತೀಕ.
   ಗಡಿನಾಡು ಕಾಸರಗೋಡಿನ ಅನೇಕಾನೇಕ ಸಾಧಕರ ಸಾಲಿನಲ್ಲಿ ಎಂದಿಗೂ ಅಜರಾಮರರಾಗಿ ನೂರಾರು ಜನರ ಬದುಕಿಗೆ ಬೆಳಕಾಗುವವರಲ್ಲಿ ಎಲ್ಲರಿಗೂ ಕಳಶ ಪ್ರಾಯರಾದವರು ಕಿಳಿಂಗಾರಿನ ಸಾಯಿರಾಂ ಭಟ್ ಎಂದೇ ಖ್ಯಾತರಾದ ಸಾಯಿರಾಂ ಗೋಪಾಲಕೃಷ್ಣ ಭಟ್. ಅವರ ಜೀವನ, ಬದುಕಲ್ಲಿ ಅನುಸರಿಸಿಕೊಂಡುಬಂದಿರುವ ಸೇವಾ ತತ್ಪರತೆ ಬಹುಷಃ ಕರಾವಳಿಗೇ ಮಾದರಿ ಮತ್ತು ಹೆಮ್ಮೆ. ನೂರಾರು ನಿರ್ಗತಿಕ ಕುಟುಂಬಗಳಿಗೆ ಸೂರಿನಾಸರೆ ನೀಡುವ ಮೂಲಕ ದೇವಮಾನವರಾಗಿ ಬೆಳೆದವರು.
   ಭಟ್ ರವರ ಜೀವನ ಮೌಲ್ಯ ಹೊಸ ತಲೆಮಾರಿಗೆ, ಭವಿಷ್ಯದ ವರ್ತಮಾನಕ್ಕೆ ಪಾಠವಾಗಬೇಕು, ಅನುಸರಣೀಯವಾಗಬೇಕೆಂಬ ಪರಿಕಲ್ಪನೆಯಲ್ಲಿ ಮಾ.29ರಂದು ಬದಿಯಡ್ಕದಲ್ಲಿ ಸಾಮಾಜಿಕ-ರಾಜಕೀಯ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಾಯಿರಾಂ ಭಟ್ ಅವರಿಗೆ ಪೌರ ಸನ್ಮಾನ ಹಾಗೂ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮರಸ ಸುದ್ದಿ ಇಂದಿನಿಂದ ಸಾಯಿರಾಂ ಗೋಪಾಲಕೃಷ್ಣ ಭಟ್ ರವರ ಕಿರುಪರಿಚಯ ಸಮರಸ ಸುದ್ದಿ ಕಂತುಗಳಲ್ಲಿ ಇಂದಿನಿಂದ ಓದುಗರಿಗೆ ನೀಡಲು ಪ್ರಯತ್ನಿಸಲಿದೆ. ಸಹೃದಯ ಓದುಗರು ಓದಿ, ಇತರರಿಗೂ ಹಂಚಿ ನಲ್ಮೆಯ ಸಮಾಜ ನಿಮರ್ಾಣದಲ್ಲಿ ಮಾದರಿಯಾದವರ ಯಶೋಗಾಥೆಯನ್ನು ಪಸರಿಸುವ ಯತ್ನವನ್ನು ಮಾಡದಿರುವಿರೇ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries