HEALTH TIPS

No title

              ಕನಿಲ ಭರಣಿ ಮಹೋತ್ಸವ ಸಂಪನ್ನ
   ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರದ ಭರಣಿ ಮಹೋತ್ಸವದಂಗವಾಗಿ ಚಕ್ರವತರ್ಿ ಹೊಸಂಗಡಿ ಇವರಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಷರ್ಿತಾ ಶೆಟ್ಟಿ ಬೆಜ್ಜಂಗಳ ಅವರ ನಿದರ್ೇಶನದಲ್ಲಿ ಶ್ರೀ ಭ್ರಾಮರಿ ನೃತ್ಯ ತಂಡ ಮೀಯಪದವು ಅವರಿಂದ `ಶ್ರೀ ನವ ದುಗರ್ಾ ಮಹಿಮೆ' ಎಂಬ ನೃತ್ಯ ರೂಪಕ ಮತ್ತು ದೀಕ್ಷಾ ಹೊಂಸಗಡಿ, ನಂದಿತಾ ಹೊಸಂಗಡಿ ಅವರಿಂದ ನೃತ್ಯ ಪ್ರದರ್ಶನ ನಡೆಯಿತು.
   ಈ ವೇಳೆ ಕನಿಲ ಶ್ರೀ ಭಗವತಿ ಕ್ಷೇತ್ರದ ಕೊಂಬು ವಾದಕರಾಗಿರುವ ದಿವಾಕರ ಪೊಯ್ಯಕಂಡ ಅವರನ್ನು ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿಗಳಾದ ರೋಹಿದಾಸ್ ಎಸ್. ಬಂಗೇರ, ಟಿ.ಲಕ್ಷ್ಮಣ ಸಾಲಿಯಾನ್, ಪದ್ಮನಾಭ ಕಡಪ್ಪರ, ಕೆ.ಪಿ.ಅರವಿಂದ, ಚಂದ್ರಶೇಖರ ಬೆಳ್ಚಾಡ, ಚಕ್ರವತರ್ಿ ಸಂಸ್ಥೆಯ ಪದಾಧಿಕಾರಿಗಳಾದ ಅನಿಲ್ರಾಜ್ ಅಂಗಡಿಪದವು, ಹರೀಶ್ ಮಜಾಲ್, ಸುರೇಶ್ ಗಾಣಿಂಜಾಲ್ ಮೊದಲಾದವರು ಕ್ಷೇತ್ರದ ವತಿಯಿಂದ ಹಾಗೂ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ, ಫಲಪುಷ್ಪವನ್ನಿತ್ತು ಸಮ್ಮಾನಿಸಿದರು. ದಿನಕರ್ ಬಿ.ಎಂ. ಹಾಗೂ ರತನ್ ಕುಮಾರ್ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರಿನ ಶ್ರೀ ಲಲಿತೆ ತಂಡದವರಿಂದ `ಕಟೀಲ್ದಪ್ಪೆ ಉಳ್ಳಾಲ್ದಿ' ಎಂಬ ಅದ್ಧೂರಿ ಭಕ್ತಿ ಪ್ರಧಾನ ನಾಟಕ ನಡೆಯಿತು. ಬಳಿಕ ಕ್ಷೇತ್ರದಲ್ಲಿ ಬಲಿ ಉತ್ಸವ, ಬಿಂಬ ದರ್ಶನ, ಮಡೆಸ್ತಾನ, ಸರ್ಪಕಳ, ಮೂಡುನಡೆ, ಅಮೃತ ಕಲಶ, ತಾಲಪ್ಪೊಲಿ, ಬೆಳಿಗ್ಗೆ ಧ್ವಜ ಅವರೋಹಣ, ಶ್ರೀ ಧೂಮಾವತಿ ದೈವದ ನೇಮೋತ್ಸವ, ಗಂಧ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಬಳಿಕ ಭಂಡಾರ ಇಳಿಯುವುದರೊಂದಿಗೆ ಕಳೆದ 7 ದಿನಗಳಿಂದ ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ಜರುಗಿದ ಭರಣಿ ಮಹೋತ್ಸವವು ಮಂಗಳವಾರ ಸಂಪನ್ನಗೊಂಡಿತು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries