ಬೆಜ್ಜ ದೈವಗಳ ಉತ್ಸವ
ಮಂಜೇಶ್ವರ: ಬೆಜ್ಜ ಶ್ರೀ ಧೂಮಾವತಿ ಬಂಟ ದೈವಗಳ ಕ್ಷೇತ್ರದಲ್ಲಿ ಶ್ರೀ ದೈವಗಳ ಉತ್ಸವವು ಎ.6ರಿಂದ 8ರ ವರೆಗೆ ಜರಗಲಿದೆ. ಎ.1ರಂದು ಬೆಳಗ್ಗೆ 9ಗಂಟೆಗೆ ಉತ್ಸವದ ನಿಮಿತ್ತ ಗೊನೆ ಮುಹೂರ್ತ, ಕೋಳಿಗೂಟ ಮತ್ತು ಉತ್ಸವದ ಚೆಂಡು ಆರಂಭಗೊಳ್ಳಲಿದೆ.
ಎ.6ರಂದು ರಾತ್ರಿ 8ಕ್ಕೆ ಉತ್ಸವದ ಭಂಡಾರ ಏರುವುದು, 9ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ತುಳುವೆರೆ ಉಡಲ್ ಜೋಡುಕಲ್ಲು ಇವರಿಂದ `ಬಯ್ಯಮಲ್ಲಿಗೆ' ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಎ.7ರಂದು ಸಂಜೆ 4ರಿಂದ ಅಂಗಣದ ಉತ್ಸವ, 9.30ಕ್ಕೆ ಶ್ರೀ ಸಾಲಿಗ್ರಾಮ ಮೇಳದವರಿಂದ `ಸಮಗ್ರ ಕಂಸ' ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಎ.8ರಂದು ಸಂಜೆ 6ರಿಂದ ಶ್ರೀ ರಕ್ತೇಶ್ವರಿ ಯಕ್ಷಗಾನ ಸಂಘ ಹೊಸಕಟ್ಟೆ ಇವರಿಂದ `ಶಾಂಭವಿ ವಿಲಾಸ' ಯಕ್ಷಗಾನ, ರಾತ್ರಿ 10ರಿಂದ ಉತ್ಸವ ಆರಂಭ, ಶ್ರ ದೈವಗಳ ಓಲಸರಿ ಹಾಗೂ ಎ.9ರಂದು ಬೆಳಗ್ಗೆ 6 ಗಂಟೆಗೆ ಭಂಡಾರ ಇಳಿಯುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಗಲಿದೆ.