HEALTH TIPS

No title

               ಸದನದಲ್ಲಿ ಸುಗಮ ಕಲಾಪ ನಡೆಯುವವರೆಗೆ ಅವಿಶ್ವಾಸ ನಿರ್ಣಯಕ್ಕೆ ಅವಕಾಶವಿಲ್ಲ: ಸುಮಿತ್ರಾ ಮಹಾಜನ್
    ನವದೆಹಲಿ: "ಅವಿಶ್ವಾಸ ನಿರ್ಣಯ ಪ್ರತಿ ತಲುಪಿದೆ, ಆದರೆ ಕಲಾಪ ಕ್ರಮಬದ್ದವಾಗಿಲ್ಲ ಆದ ಕಾರಣ ಲೋಕಸಭೆಯಲ್ಲಿ ಅದನ್ನು ಮಂಡನೆ ಮಾಡಲಾಗುವುದಿಲ್ಲ" ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
   ವಿರೋಧಪಕ್ಷಗಳು ಮಡಿಸಲು ಉದ್ದೇಶಿಸಿದ  ಅವಿಶ್ವಾಸ ನಿರ್ಣಯ ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗಲಿಲ್ಲ. ವಿರೋಧ ಪಕ್ಷಗಳ ಪ್ರತಿಭಟನೆಗಳ ನಡುವೆ ಲೋಕಸಭಾ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
   "ಟಿಡಿಪಿಯು ಆಂಧ್ರ ಪ್ರದೇಶದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ನಮಗೆ ತಿಳಿದಿದೆ. ಅವರು 2019ರ ಚುನಾವಣೆಯಲ್ಲಿ ನಾವು ಸೋಲುವುದನ್ನು ಕಾಯುತ್ತಿದ್ದಾರೆ. ಈ ಮೂಲಕ ಅವರು ತಾವು ಕಳೆದುಕೊಂಡ ಸ್ಥಳಾವಕಾಶವನ್ನು ಮತ್ತೆ ಪಡೆಯುವುದಕ್ಕೆ ಅನುಕೂಲಕರ ವಾತಾವರಣ ಬಯಸುತ್ತಿದ್ದಾರೆ. ಆದರೆ ಪ್ರಶ್ನೆ ಏನೆಂದರೆ ನಮ್ಮಸಕರ್ಾರ ಆಂಧ್ರ ಪ್ರದೇಶದ ಒಳಿತಿಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ತಿಳಿದುಕೊಳ್ಳಲು ಅಲ್ಲಿನ ಮುಖ್ಯಮಂತ್ರಿ ನಾಲ್ಕು ವರ್ಷಗಳ ಸಮಯವನ್ನೇಕೆ ತೆಗೆದುಕೊಂಡರು?
"ಟಿಡಿಪಿಯ ಈ ನಡೆಯನ್ನು ಬಿಜೆಪಿ ಉತ್ತಮವಾಗಿಯೇ ಬಳಸಿಕೊಳ್ಳಲಿದೆ, ನಾವು ಆಂಧ್ರ ಪ್ರದೇಶದಲ್ಲಿ ರಾಜಕೀಯವಾಗಿ ಬೆಳೆಯಲು, ರಾಜ್ಯದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಈ ಅವಕಾಶವನ್ನು ನಮ್ಮ ಪಕ್ಷ ಬಳಸಿಕೊಳ್ಳಲಿದೆ. ನಾವು ಆಂಧ್ರ ಪ್ರದೇಶವು ನಮ್ಮ ಮುಂದಿನ ತ್ರಿಪುರಾ ಆಗಲಿದೆ ಎನ್ನುವುದನ್ನು ಸಾಬೀತು ಪಡಿಸಲಿದ್ದೇವೆ."  ಸಂಸತ್ತಿನ ಹೊರಗೆ ಮಾತನಾಡಿದ  ಬಿಜೆಪಿ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್ ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries