HEALTH TIPS

No title

               
ಮಾ.27 : ಕನ್ನಡ ಗ್ರಾಮದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ
                 ಕಾಸರಗೋಡು ಕನರ್ಾಟಕ ಉತ್ಸವ
   ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ, ವಿ.ಕೆ.ಎಂ. ಕಲಾವಿದರು ಬೆಂಗಳೂರು ಇದರ ಸಹಯೋಗದಲ್ಲಿ ಕನರ್ಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಮಾ.27 ರಂದು ವಿಶ್ವ ರಂಗಭೂಮಿ ದಿನಾಚರಣೆ ಮತ್ತು ಕಾಸರಗೋಡು-ಕನರ್ಾಟಕ ಉತ್ಸವ ಪಾರೆಕಟ್ಟೆಯ ಕನ್ನಡ ಗ್ರಾಮದ ಬಯಲು ರಂಗಮಂಟಪದಲ್ಲಿ ನಡೆಯಲಿದೆ.
   ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಅಂದು ಅಪರಾಹ್ನ 2.30 ರಿಂದ 5 ರ ತನಕ ಚುಟುಕು ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಸಹಯೋಗದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಇದರ ಸಹಕಾರದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವ ಮತ್ತು ಚುಟುಕು ಸಾಹಿತ್ಯ ವಿಚಾರಗೋಷ್ಠಿ, ಚುಟುಕು ಕವಿಗೋಷ್ಠಿ, ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಕಾಸರಗೋಡು ಕನರ್ಾಟಕ ವೈಭವ ಕಾರ್ಯಕ್ರಮ ನಡೆಯಲಿದೆ.
   ನಾದಾಂತ ನಾಟ್ಯಮಯೂರಿ ನೃತ್ಯಾಲಯ ಕುಶಾಲನಗರ ಸಾದರ ಪಡಿಸುವ ವಿದೂಷಿ ಮಂಜು ಭಾರ್ಗವಿ ಬಿ.ಕೆ. ಇವರಿಂದ ವಚನ ವೈಭವ ನೃತ್ಯೋತ್ಸವ ಹಾಗೂ ದರ್ಶನ ಪಿ.ಆರ್. ತಲಶ್ಶೇರಿ ಅವರಿಂದ ಕೂಚುಪುಡಿ ನೃತ್ಯ ವೈಭವ ನಡೆಯಲಿದೆ.
   ಇದೇ ಸಂದರ್ಭದಲ್ಲಿ ಯಕ್ಷಗಾನದ ದಿಗ್ಗಜ ಹರಿದಾಸ ದಿ.ಡಾ.ಶೇಣಿ ಗೋಪಾಲಕೃಷ್ಣ ಭಟ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರು `ಶೇಣಿ ಒಡ್ಡೊಲಗ' ಎಂಬ ವಿಶೇಷ ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ.
   ಸಂಜೆ 5ರಿಂದ ಸಭಾ ಕಾರ್ಯಕ್ರಮ ಮತ್ತು ವಿಶ್ವ ರಂಗಭೂಮಿ ಪ್ರಶಸ್ತಿ ಸಮಾರಂಭವನ್ನು ಶಾಸಕ ಎನ್.ಎ.ನೆಲ್ಲಿಕನ್ನು ಉದ್ಘಾಟಿಸುವರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕಾಸರಗೋಡು ಡೆಪ್ಯೂಟಿ ಕಲೆಕ್ಟರ್ ಕೆ.ಶಶಿಧರ ಶೆಟ್ಟಿ ಹಾಗೂ ಕನರ್ಾಟಕ ನವ ನಿಮರ್ಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಬೆಂಗಳೂರು, ವಿಕೆಎಂ ಕಲಾವಿದರು ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ಸಿ.ಎಂ.ತಿಮ್ಮಯ್ಯ ಬೆಂಗಳೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕೆ.ಎಸ್.ವೆಂಕಟೇಶಲು, ಎಂ.ಎಸ್.ವೆಂಕಟರಾಮ, ದೇವ ನಾಗೇಶ್ ಬೆಂಗಳೂರು, ಕಾಸರಗೋಡು ನಗರಸಭಾ ಕೌನ್ಸಿಲರ್ಗಳಾದ  ಶಂಕರ್ ಕೆ., ಸಂಧ್ಯಾ ಶೆಟ್ಟಿ, ಮಧೂರು ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಕೆ.ಮಾಧವ ಮಾಸ್ತರ್, ಸತೀಶ್ ಅಡಪ ಸಂಕಬೈಲು, ಶೇಖರ ಅಜೆಕಾರು, ಉದ್ಯಮಿ ರಾಮ್ ಪ್ರಸಾದ್, ಕೆ.ನಿರಂಜನ ಕೊರಕ್ಕೋಡು, ಬಿ.ಪಿ.ವೆಂಕಟ್ರಮಣ, ಕೆ.ಲೋಕೇಶ್ ಕೊಪ್ಪಲು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಲೋಕೇಶ್ ಮೀಪುಗುರಿ, ಕೆ.ಗಣೇಶ್ ನಾಕ್, ಎಸ್.ಲೋಕೇಶ್ ಕುಮಾರ್ ಅಣಂಗೂರು, ಲವ ಮೀಪುಗುರಿ, ಪುರುಷೋತ್ತಮ ನಾಕ್, ಕೆ.ಗುರುಪ್ರಸಾದ್ ಕೋಟೆಕಣಿ, ರಘು ಮೀಪುಗುರಿ ಅತಿಥಿಗಳಾಗಿ ಉಪಸ್ಥಿತರಿರುವರು.
  ಕೆ.ವಿ.ರಮಣ್ ಮೂಡಬಿದಿರೆ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪಿ.ದಿವಾಕರ ಅಶೋಕನಗರ, ಎಂ.ಆರ್.ರಂಗರಾಮಯ್ಯ ಬೆಂಗಳೂರು, ರತ್ನ ನಾಗೇಶ್ ಬೆಂಗಳೂರು, ಅರುಣ್ ಕುಮಾರ್ ಅವರನ್ನು ಗೌರವಿಸಲಾಗುವುದು.
ಆ ಬಳಿಕ `ಬೆಳ್ಳಕ್ಕಿ ಹಿಂಡು ಬೆದರ್ಯಾವೊ', `ಏಕಲವ್ಯ', `ಸಂಗ್ಯಾ ಬಾಳ್ಯ' ನಾಟಕ ಪ್ರದರ್ಶನಗೊಳ್ಳಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries