HEALTH TIPS

No title

          ರಿವಸರ್್ ಹರಾಜು ಬಿಡ್ಡಿಂಗ್ ಗೆ ರೈಲ್ವೆ ಒಲವು; ಏ.1ರಿಂದ ಜಾರಿ: ವರ್ಷಕ್ಕೆ 10 ಸಾವಿರ ಕೋಟಿ ಉಳಿಸುವ ಗುರಿ
    ನವದೆಹಲಿ: ಸ್ಪಧರ್ೆಯನ್ನು ಹೆಚ್ಚಿಸಲು ಮತ್ತು ಸಂಗ್ರಹಣೆ ವೆಚ್ಚ ತಗ್ಗಿಸಲು ಭಾರತೀಯ ರೈಲ್ವೆ ಇಲಾಖೆ ವಿದ್ಯುನ್ಮಾನ ರಿವಸರ್್ ಹರಾಜು ಪ್ರಕ್ರಿಯೆಯನ್ನು ಜಾರಿಗೆ ತರಲಿದೆ. ಏಪ್ರಿಲ್ 1ರಿಂದ ಅಧಿಕ ಮೌಲ್ಯದ ವಸ್ತುಗಳಿಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ರಾಷ್ಟ್ರೀಯ ಸಾರಿಗೆ ವಿದ್ಯುನ್ಮಾನ ಹರಾಜು ಪ್ರಕ್ರಿಯೆ ದೇಶದಲ್ಲಿಯೇ ಇದು ಮೊದಲಾಗಿದೆ. ಇದರಿಂದ ವರ್ಷಕ್ಕೆ 10,000 ಕೋಟಿ ರೂಪಾಯಿಗಳಷ್ಟು ಉಳಿತಾಯ ಮಾಡುವುದು ಇಲಾಖೆಯ ಉದ್ದೇಶ.
    ವೇಗನ್, ಲೊಕೊಮೊಟಿವ್ ಮತ್ತು ಬೋಗಿಗಳ ಭಾಗಗಳು, ಸಿಗ್ನಲಿಂಗ್ ಮತ್ತು ಹಳಿ ಉಪಕರಣಗಳು, ಸಿಮೆಂಟ್ ಇತ್ಯಾದಿಗಳ ಖರೀದಿಗೆ ರಿವಸರ್್ ಹರಾಜು ಅನ್ವಯವಾಗುತ್ತದೆ. ಇದರಲ್ಲಿ ರೈಲ್ವೆ ಇಲಾಖೆಯ ಕೆಲಸಗಳು, ಸೇವೆಗಳು ಮತ್ತು ಎಲ್ಲಾ ಉತ್ಪಾದನೆ ಘಟಕಗಳನನು ಕೂಡ ಒಳಗೊಂಡಿರುತ್ತದೆ.
    ರೈಲ್ವೆ ಇಲಾಖೆ ಪ್ರತಿವರ್ಷ ಸುಮಾರು 50 ಸಾವಿರ ಕೋಟಿ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಣೆ ಮಾಡುತ್ತದೆ. ಅಲ್ಲದೆ 10,000 ಕೋಟಿ ರೂಪಾಯಿ ಬೆಲೆಬಾಳುವ ಹಳಿ ಪೂರೈಕೆ ವಸ್ತುಗಳನ್ನು ಸಂಗ್ರಹಿಸುತ್ತದೆ. ಇನ್ನು 60,000 ಕೋಟಿ ರೂ ಬೆಲೆಬಾಳುವ ಯೋಜನೆಗಳನ್ನು ರೈಲ್ವೆ ಮೂಲಭೂತಸೌಕರ್ಯಗಳ ವಿಸ್ತರಣೆ ಅಥವಾ ಮೇಲ್ದಜರ್ೆಗೇರಿಸುವಿಕೆಗೆ ಕೈಗೊಳ್ಳುತ್ತದೆ.
    ಆರಂಭದಲ್ಲಿ ಎಲ್ಲಾ ಪೂರೈಕೆ ಟೆಂಡರ್ ಗಳನ್ನು 10 ಕೋಟಿ ರೂಪಾಯಿಯಲ್ಲಿ ಎಲೆಕ್ಟ್ರಾನಿಕ್ ರಿವಸರ್್ ಆಕ್ಷನ್ ನಲ್ಲಿ ಸೇರಿಸಲಾಗುತ್ತದೆ. ಅದೇ ರೀತಿ ಎಲ್ಲಾ ಸೇವೆಗಳು ಮತ್ತು ಕೆಲಸಗಳನ್ನು 50 ಕೋಟಿ ರೂಪಾಯಿಗಿಂತ ಹೆಚ್ಚಿನದರಲ್ಲಿ ಸೇರಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
   ಈ ಪ್ರಕ್ರಿಯೆ ಏಪ್ರಿಲ್ 1ರಂದು ಆರಂಭವಾಗಲಿದ್ದು ಶೇಕಡಾ 70ಕ್ಕಿಂತ ಹೆಚ್ಚು ಸಂಗ್ರಹಣೆ ವೆಚ್ಚ ಮತ್ತು ಕೆಲಸವನ್ನು ಒಳಗೊಂಡಿರಲಿದೆ ಎಂದು ಅವರು ಹೇಳಿದ್ದಾರೆ. ಸ್ಪಧರ್ಾತ್ಮಕ ಬೆಲೆಯಲ್ಲಿ ಪೂರೈಕೆಯನ್ನು ಸಂಗ್ರಹಿಸಲು ಇಂದು ಸಕರ್ಾರದ ಹಲವು ಸಚಿವಾಲಯಗಳು ರಿವಸರ್್ ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries