HEALTH TIPS

No title

                   ಹಲಸು ಕೇರಳದ ಅಧಿಕೃತ ಹಣ್ಣಾಗಿ ಘೋಷಣೆ
    ಕುಂಬಳೆ: ಕೇರಳ ಸರಕಾರವು ಹಲಸಿನ ಹಣ್ಣನ್ನು ರಾಜ್ಯದ ಅಧಿಕೃತ ಹಣ್ಣೆಂದು ಘೋಷಣೆ ಮಾಡಿದೆ. ಕೃಷಿ ಸಚಿವ ವಿ.ಎಸ್ ಸುನಿಲ್ ಕುಮಾರ್ ವಿಧಾನಸಭೆಯಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ.
  ಕೇರಳದ ಹಲಸಿಗೆ ದೇಶ-ವಿದೇಶಗಳಲ್ಲೂ ಉತ್ತಮ ಮಾರುಕಟ್ಟೆ ಸೃಷ್ಟಿಸುವ ನಿಟ್ಟಿನಲ್ಲಿ, ಹಲಸಿನ ಸಾವಯವ ಮತ್ತು ಪೌಷ್ಟಿಕಾಂಶಯುಕ್ತ ಗುಣವನ್ನು ಸಾದರಪಡಿಸುವಲ್ಲಿ ಈ ಕ್ರಮ ಸಹಾಯಕವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.ಹಲಸಿಗೆ ಉತ್ತಮ ಮಾರುಕಟ್ಟೆ, ಹೆಚ್ಚಿನ ಮೌಲ್ಯ ಸಹಿತ, ಮೌಲ್ಯ ವಧರ್ಿತ ಉತ್ಪನ್ನಗಳಿಗೆ ಬೇಡಿಕೆಯು ಹೆಚ್ಚಲಿದೆ. ಪ್ರತಿ ವರ್ಷ ಸುಮಾರು 32 ಕೋಟಿ ಹಲಸಿನ ಹಣ್ಣುಗಳು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಇದರಲ್ಲಿ 30 ಶೇಕಡಾ ಹಣ್ಣುಗಳು ಬಳಕೆಯಾಗದೆ ನಷ್ಟವಾಗುತ್ತಿವೆ. ಹಲಸನ್ನು ಬ್ರಾಂಡ್ ಮಾಡುವ ಮೂಲಕ ಒಟ್ಟು 15,000 ಕೋಟಿ ರೂ. ಮೌಲ್ಯದ ಹಲಸು ಮತ್ತು ಹಲಸಿನ ಉತ್ಪನ್ನಗಳನ್ನು ಮಾರಾಟ ಮಾಡುವಗುರಿ ಸರಕಾರದ ಮುಂದಿದೆ ಎಂದು ಸಚಿವರು ತಿಳಿಸಿದ್ದಾರೆ. ಕೇರಳದ ಹಲಸು ಸಾವಯವ ರೀತಿಯಲ್ಲಿ ಬೆಳೆಸಲಾಗುತ್ತಿದೆ. ರಾಸಾಯನಿಕ ಮತ್ತು ಕ್ರಿಮಿನಾಶಕಗಳನ್ನು ಸಿಂಪಡಿಸದೆ ಬೆಳೆದ ನೈಸಗರ್ಿಕ ಹಲಸಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆಯು ಹೆಚ್ಚಿದೆ. ಹಲಸು ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಸ್ತುತ ವರ್ಷ ಹಲಸಿನ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಯೋಜನೆಯು ರಾಜ್ಯ ಸರಕಾರದ ಮುಂದಿದೆ ಎಂದು ಸಚಿವರು ತಿಳಿಸಿದ್ದಾರೆ.
   ವಯನಾಡುಜಿಲ್ಲೆಯ ಅಂಬಲವಯಲಿನಲ್ಲಿ ಹಲಸು ಹಣ್ಣಿನ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.ಆನೆಯು ಕೇರಳದ ರಾಜ್ಯ ಪ್ರಾಣಿಯಾಗಿದ್ದು, ಕರಿಮೀನ್ ರಾಜ್ಯದ ಅಧಿಕೃತ ಮೀನಾಗಿದೆ. ಹಾನರ್್ ಬಿಲ್(ಮಂಗಟ್ಟೆ) ಕೇರಳದ ಅಧಿಕೃತ ರಾಜ್ಯ ಪಕ್ಷಿಯಾಗಿದೆ.ಇದೀಗ ಹಲಸು ರಾಜ್ಯದ ಅಧಿಕೃತ ಹಣ್ಣು ಎಂದು ಘೋಷಿಸುವುದರೊಂದಿಗೆ ಸಾಂಪ್ರದಾಯಿಕ ಹಲಸು ವ್ಯವಸಾಯಕ್ಕೆ ಹೆಚ್ಚಿನ ಒತ್ತು ಲಭಿಸುವ ನಿರೀಕ್ಷೆ ಇರಿಸಲಾಗಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries