HEALTH TIPS

No title

                ಅವಕಾಶವನ್ನು ಸದುಪಯೋಗಪಡಿಸಿ ಜೀವನವನ್ನು ಪಾವನಗೊಳಿಸಬೇಕು-ರವೀಂದ್ರನಾಥ ಹಂದೆ
   ಬದಿಯಡ್ಕ: ಹಿರಿಯರ ಕಾಲದಲ್ಲಿ ಪೂಜಿಸಲ್ಪಟ್ಟ ದೇವರು ಇಂದು ನಾವೆಲ್ಲಿದ್ದರೂ ನಮ್ಮನ್ನು ತನ್ನತ್ತ ಸೆಳೆದು ಆತನ ಸೇವೆ ಮಾಡಲು ಅವಕಾಶವನ್ನು ನೀಡುತ್ತಾನೆ. ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಜೀವನವನ್ನು ಪಾವನಗೊಳಿಸೋಣ ಎಂದು ಮಂಗಳೂರು ಕನರ್ಾಟಕ ಬ್ಯಾಂಕ್ ಡೆಪ್ಯೂಟಿ ಜನರಲ್ ಮೆನೇಜರ್ ರವೀಂದ್ರನಾಥ ಹಂದೆ ಹೇಳಿದರು.
   ಅವರು ಮಂಗಳವಾರ ಜೀಣರ್ೋದ್ಧಾರಗೊಳ್ಳುತ್ತಿರುವ ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ  ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಜೀಣರ್ೋದ್ಧಾರ ಸಮಿತಿ ಇತ್ತೀಚೆಗೆ ಹಮ್ಮಿಕೊಂಡ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
   ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಊರಿನ ಜನರ ಸಹಕಾರದಿಂದ ಬ್ಯಾಂಕ್ ಉದ್ಧಾರವಾಗುತ್ತದೆ. ಇದರಿಂದಾಗಿ ಸಮಾಜಮುಖಿ ಕಾರ್ಯಗಳಿಗೆ ಬ್ಯಾಂಕ್ಗೆ ಸೂಕ್ತವಾಗಿ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕನರ್ಾಟಕ ಬ್ಯಾಂಕ್ ಶ್ರೀ ಕ್ಷೇತ್ರದ ಜೀಣರ್ೋದ್ಧಾರಕ್ಕೆ ನೀಡಿದ ರೂ. 2ಲಕ್ಷ ಅನುದಾನದಲ್ಲಿ ನೂತನವಾಗಿ ನಿಮರ್ಿಸಿದ ಭೋಜನ ಶಾಲೆಯನ್ನು ಅವರು ಲೋಕಾರ್ಪಣೆಗೊಳಿಸಿದ್ದರು.
   ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಕೆ.ಜಿ.ಗೌರೀಶಂಕರ ರೈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನರ್ಾಟಕ ಬ್ಯಾಂಕ್ ಚೀಫ್ ಮೆನೇಜರ್(ಪಬ್ಲಿಕ್ ರಿಲೇಶನ್ಸ್)ನ ಶ್ರೀನಿವಾಸ ದೇಶಪಾಂಡೆ ಮಾತನಾಡುತ್ತಾ ಋಷಿಮುನಿಗಳು ತಪಸ್ಸನ್ನಾಚರಿಸಿದ ಪುಣ್ಯ ಭೂಮಿಯಲ್ಲಿ ನಂಬಿದ ದೇವತಾ ಸಾನ್ನಿಧ್ಯಗಳು ಅಪಾರವಾದ ಸಾನ್ನಿಧ್ಯವುಳ್ಳವುಗಳಾಗಿವೆ. ಈ ಕ್ಷೇತ್ರದಲ್ಲಿ ಯಾವುದೋ ಒಂದು ಸೆಳೆತವು ನಮ್ಮನ್ನು ಸೆಳೆಯುತ್ತಿರುವುದು ಇಲ್ಲಿನ ಸಾನ್ನಿಧ್ಯವನ್ನು ತೋರ್ಪಡಿಸುತ್ತದೆ ಎಂದರು.
   ಜೀಣರ್ೋದ್ಧಾರ ಸಮಿತಿ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ ಮಾತನಾಡಿ, ಭಗವಂತನ ಕೆಲಸಕ್ಕೆ ಉಪಯೋಗಿಸುವ ಸಂಪತ್ತಿನಿಂದ ನಮಗೆ ಪುಣ್ಯ ಲಭಿಸುತ್ತದೆ. ಅಜೀರ್ಣವಾದ ದೇವಸ್ಥಾನಗಳನ್ನು ಜೀಣೋದ್ಧಾರಗೊಳಿಸಲು ನಮಗೆ ಸಿಕ್ಕಿರುವ ಅವಕಾಶಗಳಿಂದ ನಾವು ವಂಚಿತರಾಗಬಾರದು. ನಮ್ಮ ಪೂರ್ವಜರ ಪುಣ್ಯದ ಫಲ ನಮಗೆ ಲಭಿಸಿದೆ ಎಂದು ಅಭಿಪ್ರಾಯಪಟ್ಟರು.
   ಕನರ್ಾಟಕ ಬ್ಯಾಂಕ್ ನೀಚರ್ಾಲು ಶಾಖೆಯ ಪ್ರಬಂಧಕ ಶ್ರೀಶ ಕೆ., ಹಿರಿಯರಾದ ಪಡಿಯಡ್ಪು ಶಂಕರ ಭಟ್, ಉದ್ಯಮಿ ಪ್ರಶಾಂತ ಪೈ ನೀಚರ್ಾಲು ಮಾತನಾಡಿದರು. ಜೀಣರ್ೋದ್ಧಾರ ಸಮಿತಿ ಪ್ರಧಾನ ಕಾರ್ಯದಶರ್ಿ ಮಹೇಶ ಪಡಿಯಡ್ಪು ಸ್ವಾಗತಿಸಿ, ಕಾಯರ್ಾಧ್ಯಕ್ಷ ಟಿ.ಶ್ಯಾಮ ಭಟ್ ಏವುಂಜೆ ವಂದಿಸಿದರು. ಅಚಲಾ ಪ್ರಾರ್ಥನೆಯನ್ನು ಹಾಡಿ, ಸೇವಾಸಮಿತಿ ಕಾರ್ಯದಶರ್ಿ ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries