HEALTH TIPS

No title

                     ವರ್ಣರಂಜಿತ  ಬಾಲಸಭೆ  ಸಮಾರೋಪ
   ಬದಿಯಡ್ಕ: ಪಳ್ಳತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕಯಲ್ಲಿ  ಬಾಲಸಭೆ ಸಮಾರೋಪವು  ವಿವಿಧ  ಕಾರ್ಯಕ್ರಮಗಳೊಂದಿಗೆ  ಶನಿವಾರ  ನಡೆಯಿತು. ಗ್ರಾ.ಪಂ. ಸದಸ್ಯೆ  ಪುಷ್ಪ  ಭಾಸ್ಕರ್  ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ದಿನೇಶ್ ಶುಭಹಾರೈಸಿದರು. ಬ್ಲಾಕದ ಸಂಪನ್ಮೂಲ ಕೇಂದ್ರದ ತರಬೇತುದಾರ  ಈಶ್ವರ  ಮಾಸ್ಟರ್ರವರು ಕಾರ್ಯಕ್ರಮವನ್ನು ಮುಕ್ತಕಂಠದಿಂದ  ಪ್ರಶಂಸಿಸಿದರು.
  ಅಧ್ಯಾಪಕರಾದ  ಶರತ್ , ವಿಘ್ನೇಶ್  ಹಾಗೂ  ಸುರೇಂದ್ರರವರು ತಯಾರಿಸಿದ  ಈ  ವರ್ಷದ  ಶಾಲಾ  ಕಾರ್ಯಕ್ರಮವನ್ನೊಳಗೊಂಡ  ವೀಡಿಯೋ  ಪ್ರದರ್ಶನಕ್ಕೆ  ಸದಸ್ಯೆ ಪುಷ್ಪಾ ಭಾಸ್ಕರ್ ಚಾಲನೆ  ನೀಡಿದರು. ಬಳಿಕ  ಮಕ್ಕಳಿಂದ  ವೈವಿಧ್ಯಮಯ  ಸಾಂಸ್ಕೃತಿಕ  ಕಾರ್ಯಕ್ರಮಗಳು ಜರಗಿತು. ನಾಟಕ , ನೃತ್ಯ, ಹಾಡು, ದ್ರೃಶ್ಯಾವಿಷ್ಕಾರ , ಒಪ್ಪನ ,ಪ್ರಹಸನ ,ತಿರುವಾದಿರ , ಜಾನಪದ  ನೃತ್ಯ, ಇನ್ನಿತರ  ಕಾರ್ಯಕ್ರಮಗಳು  ನೋಡುಗರ  ಮನಸೆಳೆದವು. ಕಾರ್ಯಕ್ರಮಗಳ ಯಶಸ್ವಿಗೆ ಅಧ್ಯಾಪಕರ ಹಾಗೂ ಮಕ್ಕಳ ನಿರಂತರ ಪರಿಶ್ರಮವೇ ಸಾಕ್ಷಿಯಾಯಿತು. ಮುಖ್ಯೋಪಾಧ್ಯಾಯ ಮೋಹನನ್ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಲತಾ ವಂದಿಸಿದರು. ಶಾಲಿನಿ ಟೀಚರ್ ಕಾರ್ಯಕ್ರಮವನ್ನು ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries