HEALTH TIPS

No title

                  ಶೀಘ್ರದಲ್ಲೇ ಎಲ್ಲಾ ರೈಲುಗಳಲ್ಲಿ ಸಿಸಿಟಿವಿ, ವೈಫೈ: ಪಿಯೂಷ್ ಗೋಯಲ್
     ಲಖನೌ: ಶೀಘ್ರದಲ್ಲೇ ದೇಶದ ಎಲ್ಲಾ ರೈಲುಗಳಲ್ಲಿ ಸಿಸಿಟಿವಿ ಮತ್ತು ವೈಫೈ ಸೌಲಭ್ಯ ಒದಗಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಭಾನುವಾರ ಹೇಳಿದ್ದಾರೆ.
  ಭಾನುವಾರ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೈಲ್ವೆ ಸಚಿವರು, ದೇಶದ ಎಲ್ಲಾ ರೈಲ್ವೇ ನಿಲ್ದಾಣಗಳು ಸ್ವಚ್ಛ, ಸುರಕ್ಷಿತ ಮತ್ತು ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿವೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಸಕರ್ಾರ ನಿರ್ಧರಿಸಿದೆ. ಅಲ್ಲದೆ ಎಲ್ಲಾ ರೈಲುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲು ನಿರ್ಧರಿಸಿದ್ದೇವೆ ಮತ್ತು ವೈಫೈ ಸೌಲಭ್ಯವನ್ನು ಒದಗಿಸುತ್ತೇವೆ ಎಂದು ಗೋಯಲ್ ತಿಳಿಸಿದರು.
   ರಾಯಬರೇಲಿ ರೈಲ್ವೆ ಕೋಚ್ ಫ್ಯಾಕ್ಟರಿಯನ್ನು ವಿಶ್ವದ ಅತಿ ದೊಡ್ಡ ರೈಲ್ವೆ ಕೋಚ್ ಫ್ಯಾಕ್ಟರಿಯನ್ನಾಗಿ ಪರಿವತರ್ಿಸಲಾಗುವುದು ಎಂದು ರೈಲ್ವು ಸಚಿವರು ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೆ ಭಾರತೀಯ ರೈಲ್ವೆ ತೇಜಸ್ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳಲ್ಲಿನ ಎಲ್ಲಾ ಎಲ್ ಸಿಡಿ ಟಿವಿಗಳನ್ನು ತೆರವುಗೊಳಿಸುವದಾಗಿ ಘೋಷಿಸಿತ್ತು. ಈಗ ಹೊಸದಾಗಿ ಸಿಸಿಟಿವಿ ಮತ್ತು ವೈಫೈಸೌಲಭ್ಯ ಒದಗಿಸುವುದಾಗಿ ಹೇಳಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries