HEALTH TIPS

No title

            ಕಕ್ವೆ  ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಜೀಣರ್ೋದ್ಧಾರ ಸಮಿತಿ ರಚನಾ ಸಭೆ
     ಉಪ್ಪಳ: ಭಜನಾ ಮಂದಿರಗಳು ಭಕ್ತಿ ಶ್ರದ್ಧೆಯ ಪ್ರತೀಕ. ಭಜನಾ ಮಂದಿರಗಳ ನಿಮರ್ಾಣ ಮತ್ತು ಜೀಣರ್ೋದ್ಧಾರದಿಂದ ಧಾಮರ್ಿಕ ಅಭ್ಯುದಯ ಸಾಧ್ಯವಿದೆ ಎಂದು ಉದ್ಯಮಿ, ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ಹೇಳಿದರು.
   ಧರ್ಮತ್ತಡ್ಕ ಕಕ್ವೆ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಜೀಣರ್ೋದ್ದಾರ ಸಮಿತಿ ರಚನಾ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
  ಭಜನಾ ಮಂದಿರದ ಸಮಿತಿ ರಚನಾ ಸಭೆಯು ಭಜನಾ ಮಂದಿರದ ಪರಿಸರದಲ್ಲಿ ನಡೆಯಿತು. ಸಮಾಜದ ಒಳಿತು ಹಾಗೂ ಏಕತೆಗೆ ಭಜನಾ ಮಂದಿರಗಳು ಸಹಕಾರಿ. ಜಾತಿ ಬೇಧವನ್ನು ಬಿಟ್ಟು ಎಲ್ಲರೂ ಸೇರಿ ಭಜಿಸುವುದರಿಂದ ಹೊಸ ದೈವೀ ಶಕ್ತಿಯ ಸಂಚಯನವಾಗುತ್ತದೆ ಎಂದರು. ಜೀವನದಲ್ಲಿ ಹಣವೊಂದೆ ಮುಖ್ಯವಲ್ಲ. ಸಾಮಾಜಿಕ ಕಳಕಳಿಯೊಂದಿಗೆ ಧರ್ಮ ಮಾರ್ಗದಲ್ಲಿ ಮುನ್ನಡೆದು ಎಲ್ಲರೂ ಮಾದರಿಯಾಗಬೇಕಿದೆ ಎಂದರು.
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ರಾಮಪ್ಪ ಮಂಜೇಶ್ವರ ಮಾತನಾಡಿ ಕಕ್ವೆ ಪರಿಸರದಲ್ಲಿ ಎಲ್ಲರ ಸಹಕಾರದೊಂದಿಗೆ ನಿಮರ್ಾಣಗೊಳ್ಳಲಿರುವ ಭಜನಾ ಮಂದಿರವು ಭಕ್ತಿ ಶ್ರದ್ಧೆಯ ಪ್ರತೀಕವಾಗಿ ಸಮಾಜದ ಐಕ್ಯತೆಯ ಪ್ರತೀಕವಾಗಲಿ ಎಂದು ಹಾರೈಸಿದರು. ಧಾಮರ್ಿಕ ಕ್ಷೇತ್ರಗಳ ಪುನರುತ್ಥಾನಕ್ಕೆ ಅವಿರತ ಶ್ರಮಿಸುತ್ತಿರುವ ಹಾಗೂ ಆಥರ್ಿಕ ಸಹಾಯದೊಂದಿಗೆ ಜಿಲ್ಲೆಯ ಹಲವು ದೇವಸ್ಥಾನ, ಮಂದಿರಗಳ ಜೀಣರ್ೋದ್ಧಾರಕ್ಕೆ ನಿರಂತರ ಸಹಕರಿಸುತ್ತಿರುವ ವಸಂತ ಪೈಗಳ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೋಳಾರು ಸತೀಶ್ಚಂದ್ರ ಭಂಡಾರಿ ಕಕ್ವೆ ಪರಿಸರಕ್ಕೆ ಮೊದಲ ಬಾರಿ ಆಗಮಿಸುತ್ತಿದ್ದೇನೆ. ಪೊಸಡಿ ಗುಂಪೆ ತಪ್ಪಲಿನಲ್ಲಿರುವ ಈ ಪ್ರದೇಶ ಮನಸಿಗೆ ಹೆಚ್ಚಿನ ಮುದ ಹಾಗೂ ಆನಂದ ನೀಡಿದೆ. ಈ ಪರಿಸರದಲ್ಲಿ ಜೀಣರ್ೋದ್ಧಾರಗೊಳ್ಳಲಿರುವ ಭಜನಾ ಮಂದಿರವು ಶ್ರದ್ಧೆ ಮತ್ತು ನಂಬಿಕೆಯ ಭವ್ಯ ಪ್ರತೀಕವಾಗಲಿ ಎಂದು ಆಶಿಸಿ, ಜೀಣರ್ೋದ್ಧಾರ ಕಾರ್ಯಕ್ಕೆ ಧನಸಹಾಯವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಣಿಯೂರು ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಭಜನಾ ಮಂದಿರ ಸಮಿತಿಯ ಅಧ್ಯಕ್ಷ ವಿವೇಕಾದಿತ್ಯ ಕನಿಯಾಲ ಪ್ರಾಸಾವಿಕವಾಗಿ ಮಾತನಾಡಿದರು.  ಮಂದಿರ ಸಮಿತಿಯ ಗೌರವಾಧ್ಯಕ್ಷ ಧರ್ಮತ್ತಡ್ಕ ಹಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್ ಜೀಣರ್ೋದ್ಧಾರ ಸಮಿತಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ  ಘೋಸಿದರು.
    ಕಕ್ವೆ ಶಂಕರರಾವ್ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ, ಕಟ್ಟದಕಾಡು ಶಂಕರ ಗೌಡ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಗೌರವ ಕಾರ್ಯದಶರ್ಿಯಾಗಿ ರವಿಕಾಂತ ಕೇಸರಿ ಕಡಾರು ಆಯ್ಕೆಗೊಂಡಿದ್ದು, ಕೋಶಾಧಿಕಾರಿಯಾಗಿ ಚಾಕಟೆಗುಳಿ ವಿಷ್ಣು ಭಟ್ ಅವರನ್ನು ಅಯ್ಕೆ ಮಾಡಲಾಗಿದೆ. ಜನಾರ್ಧನ ಕಕ್ವೆ, ಚಂದಪ್ಪ ಕಕ್ವೆ, ರವೀಂದ್ರ ಕಕ್ವೆ ಅವರನ್ನು ಕಾರ್ಯದಶರ್ಿ ಹಾಗೂ ಜೊತೆ ಕಾರ್ಯದಶರ್ಿಗಳಾಗಿ ಆಯ್ಕೆಗೊಂಡಿದ್ದಾರೆ. ಸಮಿತಿಯಲ್ಲಿ ಎಡಕ್ಕಾನ ರಾಮ ಭಟ್, ಎಡಕ್ಕಾನ ಮಹಾಲಿಂಗ ಭಟ್, ಮಾಧವ ಭಟ್ ಮೇಲಿನಮೂಲೆ, ಸಾಮಾಜಿಕ ಕಾರ್ಯಕರ್ತ ರಾಮಪ್ಪ ಮಂಜೇಶ್ವರ, ವಿಶ್ವ ಹಿಂದೂ ಪರಿಷತ್ತಿನ ಶ್ರೀಪಾದ ಅಂಗಾರ ರಕ್ಷಾಧಿಕಾರಿಗಳಾಗಿ ಆಯ್ಕೆಗೊಂಡಿದ್ದಾರೆ. ಮಾಣಿಲ ಶ್ರೀ ಧಾಮದ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿ, ಒಡಿಯೂರು ಶ್ರೀ ದತ್ತ ಸಂಸ್ಥಾನದ ಸ್ವಾಮೀಜಿ, ಕೊಂಡೆಯೂರು ನಿತ್ಯಾನಂದ ಸಂಸ್ಥಾನದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಾಣಿಯೂರು ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಧಮರ್ಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಧಾಮರ್ಿಕ ಮಾರ್ಗದರ್ಶಕರಾಗಿ ಜೀಣರ್ೋದ್ಧಾರ ಕೈಂಕರ್ಯದಲ್ಲಿ ಭಾಗಿಗಳಾಗಿರುವರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಪುಷ್ಪಾ ಅಮೆಕ್ಕಳ, ಸದಾಶಿವ ಚೇರಾಲು, ಗೋವಿಂದ ಭಟ್ ಬದಿಯಾರು, ಪುಷ್ಪಾಲಕ್ಮೀ, ಗಣೇಶ್, ಗೋಪಾಲ, ಅನಂತರಾಜ ವಾಟೆತ್ತಿಲ, ಶ್ರೀಕಾಂತ್ ಭಟ್ ವಾಟೆತ್ತಿಲ, ಭಜನಾ ಮಂದಿರದ ಧಾಮರ್ಿಕ ಮಾರ್ಗದರ್ಶಕ ತಂತ್ರಿ ಸತ್ಯನಾರಾಯಣ ಭಟ್, ಶಂಕರನಾರಾಯಣ ಭಟ್, ಡಾ.ಮನು ಭಟ್ ಕೆದುಕೋಡಿ ಮೊದಲಾದವರು ಶುಭಾಶಂಸನೆಗೈದರು. ಮಂದಿರ ನಿಮರ್ಾಣಕ್ಕೆ ಸ್ಥಳದಾನಗೈಯ್ಯಲಿರುವ ಕುಂಜಾಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರವೀಂದ್ರ ಸ್ವಾಗತಿಸಿ, ರಾಮಮೋಹನ ಚಕ್ಕೆ ಕಾರ್ಯಕ್ರಮ ನಿರೂಪಿಸಿದರು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries