HEALTH TIPS

No title

                 ನಿರಾಶ್ರಿತರ ನಿರೀಕ್ಷೆ ಕೆ.ಎಂ.ಸಿ.ಸಿ.- ಸಾಯಿರಾಂ ಭಟ್
    ಬದಿಯಡ್ಕ: ಸಂಕಷ್ಟದಲ್ಲಿರುವವರ ಏಕೈಕ ಆಶಾ ಕಿರಣವಾದ ಕೆ.ಎಂ.ಸಿ.ಸಿ ಸಂಘಟನೆಯ ಸೇವಾ ತತ್ಪರತೆ ಮಾದರಿ. ಯಾವುದೇ ಜಾತಿ-ಮತ ವ್ಯತ್ಯಾಸಗಳಿಲ್ಲದೆ ಅರ್ಹ ಜನರಿಗೆ ಕಾರುಣ್ಯ ಹಸ್ತ ನೀಡುವ ಕೆ.ಎಂ.ಸಿ.ಸಿ. ಹಾಗೂ ಮುಸ್ಲಿಂ ಲೀಗ್ನ ಕಾರುಣ್ಯ ರಾಷ್ಟ್ರೀಯತೆಗೆ ವಿರೋಧಿಗಳೂ ಸೆಲ್ಯೂಟ್ ಹೊಡೆಯುತ್ತಾರೆ ಎಂದು ಪ್ರಮುಖ ಸಮಾಜ ಸೇವಕ ಹಾಗೂ ಬಡವರ ಬಂಧು ಕೊಡುಗೈ ದಾನಿ ಸಾಯಿರಾಂ ಭಟ್ ಅಭಿಪ್ರಾಯ ಪಟ್ಟರು.
ಬದಿಯಡ್ಕ ಪಟ್ಟಾಜೆಯ ಬೇಬಿ ಉಮೇಶ್ರವರಿಗೆ ದುಬೈ ಕೆ.ಎಂ.ಸಿ.ಸಿ ಕಾಸರಗೋಡು ಮಂಡಲ ಸಮಿತಿ ದಾನವಾಗಿ ನೀಡಿದ ವಸತಿಯ(ಬೈತುಲ್ರಹ್ಮಾ) ಅಡಿಪಾಯ ಹಾಕುವ ಕಾರ್ಯವನ್ನು ಭಾನುವಾರ ನಿರ್ವಹಿಸಿ ಅವರು ಮಾತನಾಡುತ್ತಿದ್ದರು.
   ಕೆ.ಎಂ.ಸಿ.ಸಿ.ಯ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಪ್ರತ್ಯಕ್ಷವಾಗಿ ಕಾಣುವ ಭಾಗ್ಯ ನನಗೆ ದೊರೆತಿದ್ದು ದೊಡ್ಡ ದೊಡ್ಡ ಶ್ರೀಮಂತರು ಆಸ್ತಿಯನ್ನು ಕೂಡಿಡುವುದರಲ್ಲೇ ತಲ್ಲೀನರಾಗಿರುವಾಗ ತಮ್ಮ ತಮ್ಮ ಇತಿಮಿತಿಗಳ ನಡುವೆಯೂ ಜತೆಗಿರುವವರ ಮೇಲಿನ ಕಷ್ಟಕಾರ್ಪಣ್ಯಗಳಿಗೆ ತುಡಿಯುವ ಮನಸುಗಳು ಹನಿಹನಿ ಸೇರಿಸಿ ಮನೆ ದಾನ, ಮಾಂಗಲ್ಯ ನಿಧಿ ಹಾಗೂ ಚಿಕಿತ್ಸಾ ಸಹಾಯವನ್ನೂ ಅರ್ಹರಿಗೆ ತಲುಪಿಸುವ ಕೆ.ಎಂ.ಸಿ.ಸಿ.ಯ ಪ್ರಯತ್ನ ಅನುಕರಣೀಯ. ತುಡಿಯುವ ಮನಸುಗಳೇ ಇಂದಿನ ಸಮಾಜದ ಅನಿವಾರ್ಯತೆ ಹಾಗೂ ಅಗತ್ಯ.  ಈ ಸಂಘಟನೆಯ ಮಾದರಿ ಕಾರ್ಯಗಳು ಇನ್ನೂ ಎತ್ತರಕ್ಕೆ ಬೆಳೆಯಲಿ ಹಾಗೂ ಬಡವರ ಪಾಲಿನ ಆಶಾಕಿರಣವಾಗಿ ಮೂಡಿಬರಲಿ ಎಂದು ಆವರು ಆಶೀರ್ವದಿಸಿರು.
ಅನ್ಯ ಸಮುದಾಯದವರಿಗೆ ಕೆ.ಎಂ.ಸಿ.ಸಿ. ನೀಡುವ ಒಂಭತ್ತನೇ ಮನೆ ಇದಾಗಿದ್ದು, ಇಬ್ಬರು ಹೆಣ್ಣು ಮಕ್ಕಳನ್ನೊಳಗೊಂಡಿರುವ ಈ ಕುಟುಂಬದ ಸದಸ್ಯರು ಪ್ರಸ್ತುತ  ಶೆಡ್ಡಿನಲ್ಲಿ ದಿನಕಳೆಯುತ್ತಿದ್ದಾರೆ.
ಸಭೆಯಲ್ಲಿ  ಮಂಡಲ ಮುಸ್ಲಿಂ ಲೀಗ್ ಅಧ್ಯಕ್ಷ ಎ.ಎಂ. ಕಡವತ್ತ್ ಅಧ್ಯಕ್ಷತೆವಹಿಸಿದ್ದರು. ಕೆ.ಎಂ.ಸಿ.ಸಿ. ಮಂಡಲ ಕಾರ್ಯದಶರ್ಿ ಅಬ್ದುಲ್ ರಹಿಮಾನ್ ಪಡಿಜ್ಞಾರ್ ಸ್ವಾಗತಿಸಿ, ಅಬ್ದುಲ್ಲ ಕುಂಞಿ ಚೆರ್ಕಳ, ಮಾಹಿನ್ ಕೇಳೋಟ್, ಟಿ.ಎ.ಇಕ್ಬಾಲ್, ಅಬೂಬಕ್ಕರ್ ಎಡನೀರ್, ಪಟ್ಲ ಅಬ್ದುಲ್ ರಹಿಮಾನ್ ಹಾಜಿ, ಪ್ರೊ.ಎ.ಶ್ರೀನಾಥ್, ಪಿ.ಜಿ.ಚಂದ್ರಹಾಸ ರೈ, ಬದ್ರುದ್ದೀನ್ ತಾಸಿಂ, ಅನ್ವರ್  ಓಝೋನ್, ಅಬ್ದುಲ್ಲ ಚಾಲಕ್ಕರ, ಹಸೈನಾರ್ ಹಾಜಿ ಮಾಲಿಕ್, ಅಬ್ದುಲ್ಲ ಆಡಿಬಾಯಿ, ನಿರಂಜನ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries