HEALTH TIPS

No title

                    ಮೇ 1ರಂದು ಪಗ್ಗು ಪದಿನೆನ್ಮ -ಸಿರಿದಿನ ಮತ್ತು ಸಿರಿದಾನ್ಯ ಮೇಳ
     ಕಾಸರಗೋಡು: ತುಳುನಾಡಿನಿಂದ ಮರೆಯಾಗುತ್ತಿರುವ ಆಚರಣೆಗಳಲ್ಲಿ ಒಂದು ಪಗ್ಗು-18 (ಪಗ್ಗು-18 ಪದಿನೆನ್ಮ). ಪಗ್ಗು ಹದಿನೆಂಟರಂದು ಸಿರಿದಾನ್ಯಗಳನ್ನು ಬಿತ್ತುವುದು ಪ್ರಧಾನ. ಈ ದಿನವನ್ನು ತುಳುನಾಡಿನ ಚರಿತ್ರೆಯಲ್ಲಿ ಅಗ್ರಗಣ್ಯ ಪಾತ್ರ ವಹಿಸಿದ ದೈವತ್ವಕ್ಕೇರಿದ ಸಿರಿಯನ್ನು ನೆನಪಿಸುವ ದಿನವನ್ನಾಗಿಸಬೇಕೆಂಬ ಉದ್ದೇಶದಿಂದ ತುಳುವೆರೆ ಆಯನೊ ಕೂಟವು ಕಳೆದ ನಾಲ್ಕೂ ವರ್ಷಗಳಿಂದ ಪಗು ಪದಿನೆನ್ಮ-ಸಿರಿದಿನವೆಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅಲ್ಲದೆ ಪಗ್ಗು-18  ಏಳ್ವೆರ್ ಸಿರಿಗಳಾದ ಅಬ್ಬಗೆ ದಾರಗೆಯರ ಜನ್ಮದಿನವು ಆಗಿದೆ. ಇದನ್ನು ಸಾರ್ವತ್ರಿಕವಾಗಿಸಬೇಕೆಂಬ ನಿಟ್ಟಿನಲ್ಲಿ ಈ ವರ್ಷ ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗ `ಶಕ್ತಿ' ಇದರ ನೆತೃತ್ವದಲ್ಲಿ ಹಾಗೂ ದೇಶಿ ಉತ್ಥಾನ ಸಾವಯವ ರೈತ ಬಂಧು ಟ್ರಸ್ಟ್ ಆರೋಗ್ಯ ಭಾರತಿ ಮಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೇ 1ರಂದು ಮಧ್ಯಾಹ್ನ 2ರಿಂದ ಮಂಗಳೂರಿನ ಬಂಟ್ಸ್ಹಾಸ್ಟೆಲ್ ಪರಿಸರದಲ್ಲಿ ನಡೆಸಲು ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಅವರು ತಿಳಿಸಿದ್ದಾರೆ.
    ಸಮಾರಂಭದಲ್ಲಿ ಸಮಾಜದ ವಿವಿಧ ಸ್ತರಗಳಲ್ಲಿ ಸಾಧನೆಗೈದ ಏಳುಜನ ಮಹಿಳೆಯರಿಗೆ ಏಳ್ವೆರ್ ಸಿರಿ ಪ್ರಶಸ್ತಿನೀಡಿ ಗೌರವಿಸಲಾಗುವುದು. ಅಲ್ಲದೆ  ಸಿರಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ದೃಷ್ಟಿಯಿಂದ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪಧರ್ೆ, `ಸಿರಿ-2018' ಎಂಬ ಸಿರಿವೇಷ ಸ್ಪಧರ್ೆ ಹಾಗೂ ಸಿರಿ ಪಾಡ್ದನ ಹಾಡುವ ಸ್ಪಧರ್ೆ ನಡೆಯಲಿವೆ.
ಕಾರ್ಯಕ್ರಮದ ಅಂಗವಾಗಿ ಸಿರಿದಾನ್ಯಗಳ ಪ್ರದರ್ಶನ, ಸಿರಿದಾನ್ಯ ಆಹಾರ ಉತ್ಪನ್ನಗಳ ಮಾರಾಟ ಹಾಗೂ ಪ್ರಾತ್ಯಕ್ಷಿಕೆ, ಆರೋಗ್ಯ ಸಿರಿ, ಸಾವಯವ ಹಾಗೂ ಸಿರಿದಾನ್ಯಗಳ ವಿಚಾರ ಗೋಷ್ಠಿಗಳು ನಡೆಯಲಿವೆ. ಈ ಬಗ್ಗೆ ನಡೆದ ಸಿದ್ಧತಾ ಸಭೆಯಲ್ಲಿ ಡಾ.ಕಿಶೋರ್ ಕುಮಾರ್ ರೈ ಶೇಣಿ, ದಿವಾಕರ ಸಾಮಾನಿ, ರಾಮಕೃಷ್ಣ ಕೆ.ಎಂ.,  ನಿವೇದಿತ ಶೆಟ್ಟಿ, ಸುಲತಾ ಶೆಟ್ಟಿ ಮತ್ತು ಡಾ.ರಾಜೇಶ ಆಳ್ವ ಬದಿಯಡ್ಕ ಮುಂತಾದವರು ಸಲಹೆ ಸೂಚನೆಗಳನ್ನಿತ್ತರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries