ಬೇಸಿಗೆಯ ನಾಶನಷ್ಟ 1.75 ಕೋಟಿ ರೂ= ಪ್ರಾಥಮಿಕ ವರದಿ
ಕಾಸರಗೋಡು: ಕಳೆದ ಎರಡು ವಾರಗಳಲ್ಲಿ ಜಿಲ್ಲೆಯ ಅಲ್ಲಲ್ಲಿ ಸುರಿದ ಬೇಸಿಗೆ ಮಳೆ, ಗಾಳಿಗೆ ಲಭ್ಯವಾದ ಪ್ರಾಥಮಿಕ ವರದಿಯನುಸಾರ 1.75 ಕೋಟಿ ರೂ.ಗಳ ಕೃಷಿ ನಾಶ ಉಂಟಾಗಿದೆಯೆಂದು ಕೃಷಿ ಇಲಾಖೆಯ ಕ್ರೆಡಿಟ್ ವಿಭಾಗದ ಸಹಾಯಕ ನಿದರ್ೇಶಕ ವಿಜಯೇಶ್ವರಿ ನಂಬೀಶನ್ ಜಿಲ್ಲಾಧಿಕಾರಿಗಳಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ. ಆದರೆ ಇದರ ಇಮ್ಮಡಿಯಷ್ಟು ಕೃಷಿ ನಾಶ ನಷ್ಟ ಉಂಟಾಗಿರುವ ಸಾಧ್ಯತೆಯಿದೆಯೆಂದು ಕೃಷಿ ಇಲಾಖೆ ತಿಳಿಸಿದೆ.
ಎರಡು ಸಾವಿರ ನೇಂದ್ರ ಬಾಳೆ, 200 ತೆಂಗು, 500 ರಬ್ಬರ್, 1 ಸಾವಿರ ಅಡಿಕೆ ಮರಗಳು, ಗಾಳಿ ಮಳೆಗಳಿಗೆ ಧರಾಶಾಯಿಯಾಗಿವೆ ಎಂದು ಪ್ರಾಥಮಿಕ ವರದಿ ಗುರುತಿಸಿದೆ. ಬದಿಯಡ್ಕ, ಕುಂಬ್ಡಾಜೆ, ಪಳ್ಳಿಕ್ಕೆರೆ, ಪುಲ್ಲೂರ್ ಪೆರಿಯ, ಬೇಡಡ್ಕ, ಕುತ್ತಿಕೋಲ್ ಕೃಷಿ ಭವನಗಳಿಂದ ಬಂದಿರುವ ಅಧಿಕೃತರ ವರದಿಯನ್ನು ಕ್ರೋಢೀಕರಿಸಿ ಪ್ರಾಥಮಿಕ ಹಂತದ ವರದಿ ತಯಾರಿಸಲಾಗಿದೆ. ಇವುಗಳ ಜೊತೆಗೆ ಇನ್ನಷ್ಟು ಕೃಷಿ ಭವನಗಳ ವರದಿಗಳು ಲಭ್ಯವಾಗಲು ಬಾಕಿಯಿದೆ. ಶನಿವಾರ ಸಂಜೆಯ ವೇಳೆಗೆ ಜಿಲ್ಲೆಯ ವಿವಿಧೆಡೆಗಳ 50 ಮಂದಿ ಕೃಷಿಕರು ಕೃಷಿ ನಾಶ ಸಂಬಂಧಿ ಪರಿಹಾರಕ್ಕೆ ಅಜರ್ಿ ಸಲ್ಲಿಸಿರುವರು. ಇವುಗಳ ಜೊತೆಗೆ ಮನೆ, ಕಟ್ಟಡಗಳ ಹಾನಿಯ ಬಗೆಗೂ ಇನ್ನಷ್ಟೆ ವರದಿಗಳು ಲಭ್ಯವಾಗಬೇಕಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.