HEALTH TIPS

No title

                         ಎಂಡೋಸಲ್ಫಾನ್: ನಬಾಡರ್್ ಹಣ ನೀಡದ ಸರಕಾರ
    ಕಾಸರಗೋಡು: ಎಂಡೋಸಲ್ಫಾನ್ ಪ್ಯಾಕೇಜ್ನಲ್ಲಿ ವಿವಿಧ ಯೋಜನೆಗಳಿಗಾಗಿ ನಬಾಡರ್್ ನೀಡಿದ 10 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ಗುತ್ತಿಗೆದಾರರಿಗೆ ನೀಡದೆ ಸರಕಾರ ಆಟ ವಂಚಿಸುತ್ತಿರುವುದು ಕಂಡುಬಂದಿದೆ.
   21 ಯೋಜನೆಗಳಿಗಾಗಿ ನಬಾಡರ್್ ಈಗಾಗಲೇ ಸರಕಾರಕ್ಕೆ ಹಣ ಹಸ್ತಾಂತರಿಸಿತ್ತು. ಇತರ ಯೋಜನೆಗಳಿಗಿಂತ ವ್ಯತ್ಯಸ್ತವಾಗಿ ಎಂಡೋಸಲ್ಫಾನ್ ಯೋಜನೆಗಳ ಹೊಣೆಗಾರಿಕೆ ಜಿಲ್ಲಾಧಿಕಾರಿಗಳ ಮೇಲಿದೆ. ಅವರ ಹೆಸರಿನಲ್ಲಿ ಹಣ ಮೀಸಲಿಟ್ಟಿರುವುದಾಗಿ ಸರಕಾರ ತಿಳಿಸಿದೆ. ಸಂಬಂಧಿಸಿದ ಕಾಮಗಾರಿ ಪೂರ್ಣಗೊಂಡ ನಂತರವೇ ಹಣ ಬಿಡುಗಡೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದರು.
   ಈ ಮಧ್ಯೆ ಬಿಲ್ ಸಹಿತ ಖಜಾನೆಗೆ ಹೋದಾಗ ಹಣ ತಲುಪಿಲ್ಲ ಎಂಬುದು ತಿಳೀದು ಬಂದಿದೆ ಎಂಬುದು ಗುತ್ತಿಗೆದಾರರ ಅವಲತ್ತುಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ಖಜಾನೆ ಕಚೇರಿಯನ್ನು ಜಿಲ್ಲಾಧಿಕಾರಿಗಳೂ ಸಹ ಪ್ರಶ್ನಿಸಿದ್ದರು. ಆಥರ್ಿಕ ಬಿಕ್ಕಟ್ಟಿನಿಂದಾಗಿ ಬಿಲ್ಲ್ಗಳನ್ನು 'ಕ್ಯೂ'ಗೆ ಮಾಪರ್ಾಡುಗೊಳಿಸಲು (ಬಳಿಕ ಪಾಸ್ ಮಾಡಲು) ಸರಕಾರ ನಿದರ್ೇಶಿಸಿರುವುದಾಗಿ ಟ್ರೆಶರಿ ಅಧಿಕಾರಿಗಳು ಉತ್ತರಿಸಿದ್ದರು. ಇದರಿಂದ ಜಿಲ್ಲಾಧಿಕಾರಿ ಸಹ ನಿಸ್ಸಾಹಯಕರಾದರು.
   ಸರಕಾರ ಇತರ ಯಾವುದಾದರೂ ಇಲಾಖೆಯಲ್ಲಿ ಹಣ ಗುರುತಿಸಿದ ಬಳಿಕವಷ್ಟೇ ಅನುದಾನ ನೀಡಬಹುದಾಗಿದೆ. ಅದುವರೆಗೆ ಎಂಡೋಸಲ್ಫಾನ್ ಪ್ಯಾಕೇಜ್ನಲ್ಲಿರುವ ಯೋಜನೆಗಳು ಮೊಟಕುಗೊಳ್ಳಲಿವೆ.ಅನುದಾನವನ್ನು ಇತರ ಅಗತ್ಯಗಳಿಗೆ ವಿನಿಯೋಗಿಸಿರುವುದು ನಬಾಡರ್್ಗೂ ಅತೃಪ್ತಿಯುಂಟಾಗಿದೆ.
      ಸರಕಾರ ನೀಡುವ ನಿದರ್ೇಶನದ ಅನುಸಾರ ತಮಗೆ ಕಾಯರ್ಾಚರಿಸಲಾಗುತ್ತದೆ, ನೂತನ ಬಿಲ್ಲ್ಗಳನ್ನು ಸಲ್ಲಿಸಲು ಆಗ್ರಹಿಸಲಾಗಿದೆ. ವಿಳಂಬಗೊಳ್ಳದೆ ಅನುದಾನ ನೀಡಬಹುದಾದ ನಿರೀಕ್ಷೆ ಇದೆ ಎಂದು ಟ್ರೆಶರಿ ಅಧಿಕಾರಿಗಳು ಹೇಳುತ್ತಿದ್ದಾರೆ.
     10 ಕೋಟಿ ಹೆಚ್ಚು ಮೊತ್ತ ಸ್ಥಗಿತ : ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡುವ ಸೌಕರ್ಯಕ್ಕೆ 49.77ಲಕ್ಷ ರೂ, ಪೂಡಂಕಲ್ಲ್ ಆಸ್ಪತ್ರೆ ಕಟ್ಟಡಕ್ಕೆ 1.44ಕೊಟಿ ರೂ., ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕಂಡರಿ ಶಾಲಾ ಕಟ್ಟಡಕ್ಕೆ 69ಲಕ್ಷ ರೂ., ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರ ಸಿಬ್ಬದಿಗಳ ಕ್ವಾರ್ಟಸರ್್ಗೆ 73.14ಲಕ್ಷ ರೂ., ಬೆಳ್ಳೂರು ಸರಕಾರಿ ಹೈಯರ್ ಸೆಕಂಡರಿ ಶಾಲಾ ಕಟ್ಟಡಕ್ಕೆ 1.57 ಕೋಟಿ ರೂ., ಮುಳ್ಳೇರಿಯ ಸರಕಾರಿ ಹೈಯರ್ ಸೆಕಂಡರಿ ಶಾಲಾ ಕಟ್ಟಡಕ್ಕೆ 128 ಕೋಟಿ ರೂ, ನೀಲೇಶ್ವರ ತಾಲೂಕು ಆಸ್ಪತ್ರೆ ಕಟ್ಟಡಕ್ಕೆ 84.74ಲಕ್ಷ ರೂ., ಮುಳ್ಳೇರಿಯ ಸರಕಾರಿ ಹೈಯರ್ ಸೆಕಂಡರಿ ಶಾಲಾ ಕಟ್ಟಡ ವಿದ್ಯುತ್ತೀಕರಣಕ್ಕೆ 3.66 ಲಕ್ಷ ರೂ., ಮುಳ್ಳೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವಿದ್ಯುತ್ತೀಕರಣಕ್ಕೆ 3.48ಲಕ್ಷ ರೂ., ಪಾಣತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ 42.54ಲಕ್ಷ ರೂ., ಬಳಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ 1.13ಕೋಟಿ ರೂ., ಕಾರಡ್ಕ ವೊಕೇಶನಲ್ ಹೈಯರ್ ಸೆಕಂಡರಿ ಶಾಲಾ ಕಟ್ಟಡಕ್ಕೆ 10.67ಲಕ್ಷ ರೂ., ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ 40.92ಲಕ್ಷ ರೂ., ಕಾರಡ್ಕ ಬಡ್ಸ್ ಶಾಲಾ ಕಟ್ಟಡಕ್ಕೆ 19ಲಕ್ಷ ರೂ., ಕಲ್ಯೋಟ್ ಸರಕಾರಿ ಹೈಯರ್ ಸೆಕಂಡರಿ ಶಾಲಾ ಕಟ್ಟಡಕ್ಕೆ 44.4ಲಕ್ಷ ರೂ., ಮಾಡಕ್ಕಾಲ್ ಬಡ್ಸ್ ಶಾಲಾ ಕಟ್ಟಡಕ್ಕೆ 96 ಲಕ್ಷ ರೂ., ಕಯಾರ್ಪದವು ಅಂಗನವಾಡಿ ಕೊಳವೆಬಾವಿ ನಿಮರ್ಾಣಕ್ಕೆ 82000ರೂ., ಪಾಣತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳವೆ ಬಾವಿ ನಿಮರ್ಾಣಕ್ಕೆ 1.9ಲಕ್ಷ ರೂ., ಅಡೂರು ಸರಕಾರಿ ಹೈಯರ್ ಸೆಕಂಡರಿ ಶಾಲಾ ಕಟ್ಟಡ ವಿದ್ಯುತ್ತೀಕರಣಕ್ಕೆ 3.55ಲಕ್ಷ ರೂ. ಸಹಿತ ಒಟ್ಟು 10,31,56,052ರೂ.ನ ಯೋಜನೆಗಳ ಮೊತ್ತ ಸ್ಥಗಿತಗೊಂಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries