ಎರಡು ದಿನಗಳ ಸಾಹಿತ್ಯೋತ್ಸವ ಸಮಾರೋಪ-ಠರಾವು ಮಂಡನೆ
ಮುಳ್ಳೇರಿಯ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಎರಡು ದಿನಗಳ ಕಾಲ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ ನಡೆದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾನುವಾರ ಸಂಜೆ ಸಮ್ಮೇಳನದ ಸವರ್ಾಧ್ಯಕ್ಷ ಡಾ. ನಾ. ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ಜರಗಿತು. ಕನ್ನಡದ ಪ್ರಸಿದ್ದ ವಿಮರ್ಶಕ, ಅಂಕಣಕಾರ ಎಸ್.ಆರ್.ವಿಜಯಶಂಕರ್ ಸಮಾರೋಪ ಭಾಷಣಗೈದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಮಾಜಿ ಅಧ್ಯಕ್ಷ ನ್ಯಾಯವಾದಿ ಐ.ವಿ. ಭಟ್ ಅವರು ಗಣ್ಯರು ಹಾಗೂ ಕನ್ನಡಾಭಿಮಾನಿಗಳ ಉಪಸ್ಥಿತಿಯಲ್ಲಿ ಠರಾವು ಮಂಡಿಸಿ ಬಳಿಕ ಈ ಕೆಳಗಿನ ನಿರ್ಣಯಗಳನ್ನು ಅಂಗೀಕರಿಸಿತು.
1.ಕೇರಳ ರಾಜ್ಯ ಸರಕಾರದ ಮಲೆಯಾಳ ಹೇರಿಕೆಯ ನೀತಿಯಿಂದ ಕಾಸರಗೋಡಿನ ಬಹುಭಾಷೆ ಹಾಗೂ ಸಂಸ್ಕೃತಿಗಳಿಗೆ ಅಪಾಯವಿರುವುದರಿಂದ ಕೇಂದ್ರ ಸರಕಾರವು ಕೂಡಲೇ ಮಹಾಜನವರದಿಯನ್ನು ಜಾರಿಗೊಳಿಸಿ ಕಾಸರಗೋಡನ್ನು ಕನರ್ಾಟಕದಲ್ಲಿ ವಿಲೀನಗೊಳಿಸಬೇಕು.
2. ಕೇರಳ ಸರಕಾರದಿಂದಲೇ ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶವೆಂದು ಅಂಗೀಕೃತಗೊಂಡ ಕಾಸರಗೋಡು ತಾಲೂಕಿನಲ್ಲಿರುವ ಎಲ್ಲ ಕೇಂದ್ರ ಸರಕಾರಿ ಕಚೇರಿಗಳಲ್ಲಿ ರಾಜ್ಯಭಾಷೆ ಮಲೆಯಾಳದೊಂದಿಗೆ ಸ್ಥಳೀಯ ಭಾಷೆಯಾದ ಕನ್ನಡವನ್ನೂ ಅಧಿಕೃತ ಪ್ರಾದೇಶಿಕ ಭಾಷೆಯನ್ನಾಗಿ ಪರಿಗಣಿಸಿ ಕೇಂದ್ರ ಸರಕಾರವು ಆದೇಶ ಹೊರಡಿಸಬೇಕು.
3. ಭಾಷೆಗಳನ್ನು ಕಲಿಯುವುದು ಪರಸ್ಪರ ಪ್ರೀತಿ- ವಿಶ್ವಾಸದಿಂದ ನಡೆಯಬೇಕೇ ಹೊರತು ಒತ್ತಾಯದಿಂದಲೋ ಒತ್ತಡದಿಂದಲೋ ಅಲ್ಲ. ಆದುದರಿಂದ ಕೇರಳ ಸರಕಾರವು ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾಕರ ಮೇಲೆ ಶಿಕ್ಷಣ, ಆಡಳಿತ ಸಹಿತ ಎಲ್ಲ ರಂಗಗಳಲ್ಲೂ ಮಲೆಯಾಳವನ್ನು ಕಡ್ಡಾಯವಾಗಿ ಹೇರುವುದನ್ನು ಕೈಬಿಡಬೇಕು.
4. ಕೇರಳ ರಾಜ್ಯಸರಕಾರವು ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡು ತಾಲೂಕಿನಲ್ಲಿ ಎಲ್ಲ ಸಾರ್ವಜನಿಕ ಮಾಹಿತಿಗಳನ್ನು ಅಧಿಕೃತ ಅಲ್ಪಸಂಖ್ಯಾಕ ಭಾಷೆಯಾದ ಕನ್ನಡದಲ್ಲೂ ಒದಗಿಸಬೇಕು.
5. ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾಕರಿಗೆ ಶಿಕ್ಷಣ ಹಾಗೂ ಉದ್ಯೋಗ ರಂಗಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳಬೇಕು.
6. ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಮಂಜೂರು ಮಾಡಬೇಕು.
7. ಕಾಸರಗೋಡು ತಾಲೂಕಿನಿಂದ ಬೇರ್ಪಡಿಸಿ ನೂತನವಾಗಿ ರಚಿಸಲಾದ ಮಂಜೇಶ್ವರ ತಾಲೂಕನ್ನೂ ಕನ್ನಡ ಭಾಷಾ ಅಲ್ಪಸಂಖ್ಯಾಕ ಪ್ರದೇಶವೆಂದು ಕೂಡಲೇ ಘೋಷಿಸಬೇಕು ಎಂಬ ಬೇಡಿಕೆ ಸಲ್ಲಿಸಲು ತೀಮರ್ಾನಿಸಲಾಯಿತು.
ಸಮಾರೋಪ ಸಮಾರಂಭದ ಬಳಿಕ ಸಾಮಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಭೂಮಿಕಾ ಪ್ರತಿಷ್ಠಾನದ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆಯವರ ಶಿಷ್ಯವೃಂದದವರಿಂದ ನೃತ್ಯಸಿಂಚನ ಪ್ರದರ್ಶನಗೊಂಡಿತು. ಬಳಿಕ ಜಿಲ್ಲೆಯ ಪ್ರತಿಭಾವಂತ ವಿದ್ಯಾಥರ್ಿಗಳಿಂದ ಮಹಿಷಾಸುರ ವಧೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಡಾ.ಶಿವಕುಮಾರ ಅಡ್ಕ ಕಾರ್ಯಕ್ರಮ ನಿರೂಪಿಸಿದರು.