ರಂಗಚಿನ್ನಾರಿ ಕಾಸರಗೋಡು ಇದರ 12 ನೇ ವಾಷರ್ಿಕೋತ್ಸವ
`ರಂಗಚಿನ್ನಾರಿ ಪ್ರಶಸ್ತಿ' ಪ್ರದಾನ ಸಮಾರಂಭ
ಕಾಸರಗೋಡು: ಸಾಮಾಜಿಕ - ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಕಾಸರಗೋಡು ಇದರ ಹನ್ನೆರಡನೇ ವಾಷರ್ಿಕೋತ್ಸವ ಮತ್ತು `ರಂಗಚಿನ್ನಾರಿ ಪ್ರಶಸ್ತಿ' ಪ್ರದಾನ ಸಮಾರಂಭ ಎ.28 ಮತ್ತು 29 ರಂದು ಕಾಸರಗೋಡು ನಗರ ಸಭಾ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿದೆ.
ಎ.28 ರಂದು ಸಂಜೆ 3 ಗಂಟೆಗೆ ಖ್ಯಾತ ಗಾಯಕ ರಾಮಕೃಷ್ಣ ಕಾಟುಕುಕ್ಕೆ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಆ ಬಳಿಕ ಇಚ್ಲಂಪಾಡಿ ಶ್ರೀ ಮಹಾದೇವಿ ಭಜನಾ ಮಂಡಳಿ, ತ್ರಿಕ್ಕನ್ನಾಡು ಶಿವಪ್ರಿಯ ಮಹಿಳಾ ಭಜನಾ ಮಂಡಳಿ, ಬಾಯಾರು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಮತ್ತು ಚಿಪ್ಪಾರು ಶ್ರೀ ವಿಷ್ಣುಮೂತರ್ಿ ಭಜನಾ ಮಂಡಳಿಯಿಂದ ಸಂಕೀರ್ತನೆ ನಡೆಯಲಿದೆ.
ಸಂಜೆ 5.30 ಕ್ಕೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಉದ್ಘಾಟಿಸುವರು. ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ, ರಂಗ ನಟ, ಉದ್ಯಮಿ ಸುಭಾಷ್ ಕಾಮತ್ ಕಾರ್ಕಳ ಅವರು ಅತಿಥಿಗಳಾಗಿ ಉಪಸ್ಥಿತರಿರುವರು. 6.15 ಕ್ಕೆ ಡಾ.ದೀಪಾ ಮಾಧವನ್ ಪೊಡವೂರ್ ಅವರಿಂದ ಮೋಹಿನಿಯಾಟ್ಟಂ, 7 ರಿಂದ ಗಾನಭೂಷಣ ವಿಪಿನ್ ರಾಗವೀಣಾ ನೀಲೇಶ್ವರ ಅವರಿಂದ ರಾಗಸುಧಾ ನಡೆಯಲಿದೆ. ಕಾಸರಗೋಡು ಡಿವೈಎಸ್ಪಿ ಪ್ರಭಾಕರನ್ ಮೃದಂಗ, ಗಾನಭೂಷಣ ರಾಜೇಶ್ ವಡಗರ ಪಿಟೀಲು, ರಾಜೀವ ವೆಳ್ಳಿಕ್ಕೋತು ಮೋಸರ್ಿಂಗ್ನಲ್ಲಿ ಸಹಕರಿಸುವರು. ಸಹಗಾಯನದಲ್ಲಿ ಅಜಿನ್ ಅಶೋಕ, ಸೂರ್ಯಕಿರಣ್ ಭಾಗವಹಿಸುವರು.
ಎ.29 ರಂದು ಸಂಜೆ 3 ಗಂಟೆಗೆ ಶ್ರೀ ಕೃಷ್ಣಾನುಗ್ರಹ ಪುರಸ್ಕೃತ ಜಯಾನಂದ ಕುಮಾರ್ ಹೊಸದುರ್ಗ ಅವರು ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಆ ಬಳಿಕ ವಾಮಂಜೂರು ಶ್ರೀ ಶಾಸ್ತಾವೇಶ್ವರ ಮಹಿಳಾ ಭಜನಾ ಮಂಡಳಿ, ಮುಳ್ಳೇರಿಯಾ ಹರಿಪ್ರಿಯ ಮಹಿಳಾ ಭಜನಾ ಮಂಡಳಿ, ಅಡೂರು ಶ್ರೀ ಪ್ರಿಯ ಮಹಿಳಾ ಭಜನಾ ಮಂಡಳಿ, ಆರಿಕ್ಕಾಡಿ ಶ್ರೀ ಹನುಮ ಭಕ್ತ ಭಜನಾ ಸಂಘದಿಂದ ಸಂಕೀರ್ತನೆ ನಡೆಯುವುದು.
ಸಂಜೆ 5.30 ರಿಂದ `ರಂಗಚಿನ್ನಾರಿ ಪ್ರಶಸ್ತಿ' ಪ್ರದಾನ ಸಮಾರಂಭ ನಡೆಯಲಿದ್ದು ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಬಿ.ಎ.ವಿವೇಕ ರೈ ಸಮಾರೋಪ ಭಾಷಣ ಮಾಡುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ನಾ.ದಾಮೋದರ ಶೆಟ್ಟಿ ಅಭಿನಂದನಾ ಭಾಷಣ ಮಾಡಲಿದ್ದಾರೆ.
6.45 ರಿಂದ ಅಸಾವರಿ, ರಜನಿ ಮತ್ತು ಶ್ರಾವ್ಯ ಅವರಿಂದ ಕಥಕ್ ನೃತ್ಯ, ರಾತ್ರಿ 7.15 ರಿಂದ ಶಂಕರ್ ಶ್ಯಾನುಭಾಗ್ ಅವರಿಂದ ಭಾವ ಸಿಂಚನ ಕಾರ್ಯಕ್ರಮ ನಡೆಯಲಿದೆ. ತಬಲಾದಲ್ಲಿ ರಾಜೇಶ್ ಭಾಗವತ್, ಹಾಮರ್ೋನಿಯಂನಲ್ಲಿ ಸತ್ಯನಾರಾಯಣ ಐಲ ಸಹಕರಿಸುವರು.
ಖ್ಯಾತ ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿದರ್ೇಶಕ ಶಿವಧ್ವಜ್ ಶೆಟ್ಟಿ, ಪ್ರಶಸ್ತಿ ವಿಜೇತ ಗಾಯಕಿ ಶಿವರಂಜಿನಿ ಐ.ಭಟ್, ಖ್ಯಾತ ನೃತ್ಯಪಟು ಸಾತ್ವಿಕ್ರಾಜ್ ಪಟ್ಟಾಜೆ ಅವರನ್ನು `ರಂಗಚಿನ್ನಾರಿ ಪ್ರಶಸ್ತಿ' ನೀಡಿ ಗೌರವಿಸಲಾಗುವುದು.