ಕೂಟಮಹಾಜಗತ್ತು : ವಾಷರ್ಿಕ ಮಹಾಸಭೆಯ ಯಶಸ್ಸಿಗೆ ಕರೆ
ಕಾಸರಗೋಡು: ಕೂಟಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ವಾಷರ್ಿಕ ಮಹಾಸಭೆ ಮೇ 13 ರಂದು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಜರಗಲಿದೆ.
ಎ.28 ರಂದು ಮಧೂರಿನ ಬನ್ನೂರು ಕೃಷ್ಣ ಕಾರಂತರ ಮನೆಯಲ್ಲಿ ಶ್ರೀ ನೃಸಿಂಹ ಜಯಂತಿಯನ್ನು ಆಚರಿಸಲಾಗುವುದು. ಈ ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲಾ ಸಮಾಜ ಬಾಂಧವರು ಸಹಕರಿಸುವಂತೆ ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅವರು ಕರೆಯಿತ್ತರು. ಈ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೇಶಮಂಗಲದ ಸೂರ್ಯನಾರಾಯಣ ಕಾರಂತರ ಮನೆಯಲ್ಲಿ ಜರಗಿದ ಅಂಗಸಂಸ್ತೆಯ ಸಂಪರ್ಕ ಸಭೆಯ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ನೀರಾಳ ಕೃಷ್ಣ ಹೊಳ್ಳ ಅವರು ವಹಿಸಿದರು. ಈ ಸಂದರ್ಭದಲ್ಲಿ ದೇಶಮಂಗಲ ಶಂಕರನಾರಾಯಣ ಕುಟ್ಟಿಚ್ಚಾತ ದೇವಾಲಯದ ಪ್ರಧಾನ ಅರ್ಚಕರಾದ ಶಿವರಾಮ ಕಾರಂತ, ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲಾ ಹಿರಿಯ ಅಧ್ಯಾಪಕರಾದ ನರಸಿಂಹ ಮಯ್ಯ ಎಂ. ಮುಂತಾದವರು ಉಪಸ್ಥಿತರಿದ್ದರು.
ಕುಮಾರ ದೇವಾಲಯದಲ್ಲಿ ಶರವಣ ಟ್ರಸ್ಟ್ನ ಸಹಯೋಗದೊಂದಿಗೆ ಪ್ರಾರಂಭಿಸಿದ ವಸಂತ ವೇದ ಪಾಠ ಶಾಲೆ ಈಗಾಗಲೇ ಪ್ರಾರಂಭವಾಗಿದ್ದು, ಸಮಾಜದವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಭೆಯಲ್ಲಿ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಬೆದ್ರಡ್ಕ ಪೂಮಾಣಿ ಕಿನ್ನಿಮಾಣಿ ದೇಗುಲದ ಅನುವಂಶಿಕ ಮೊಕ್ತೇಸರ ಮನೆತನದ ಉಡುವ ರಾಮಕೃಷ್ಣ ಹೇರಳ ಅವರ ನಿಧನಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ವಿಷ್ಣು ಸಹಸ್ರನಾಮ ಪಠನ ಹಾಗೂ ಭಜನಾ ಸಂಕೀರ್ತನೆಗಳು ಜರಗಿತು. ಸೂರ್ಯನಾರಾಯಣ ಕಾರಂತ ಸ್ವಾಗತಿಸಿ, ಬಿ.ಕೃಷ್ಣ ಕಾರಂತ ವಂದಿಸಿದರು. ಶಂಕರನಾರಾಯಣ ಹೇರಳ ಕಾರ್ಯಕ್ರಮ ನಿರೂಪಿಸಿದರು.