HEALTH TIPS

No title

              ಕನ್ನಡ ಯುವಬಳಗದ ವಿನೂತನ ಹೆಜ್ಜೆ
             ಎಪ್ರಿಲ್ 14 ರಂದು ಯಕ್ಷ ನುಡಿಸರಣಿ ತಾಳಮದ್ದಳೆ ಮನೆ ಮನೆ ಅಭಿಯಾನ ಪ್ರಾರಂಭ
    ಮುಳ್ಳೇರಿಯ: ಕಾಸರಗೋಡಿನ ಪ್ರತಿಯೊಂದು ಮನೆಯ ಬಾಗಿಲು ತಟ್ಟಿದರೂ ಅಲ್ಲಿಂದೊಬ್ಬ ಯಕ್ಷಗಾನ ಕಲಾವಿದನೆದ್ದು ಬರುತ್ತಾನೆ ಎಂಬ ಮಾತು ಸರ್ವವಿದಿತ. ಜಾಗತಿಕತೆಯ ಪ್ರಭಾವ, ಆಧುನಿಕ ತಂತ್ರಜ್ಞಾನದ ಭರಾಟೆಯೆಡೆಯಲ್ಲಿ ಬದುಕಿಗೆ ಅರ್ಥನೀಡುವ ಮಣ್ಣಿನ ಕಲೆಗಳ ಸೊಗಸು ಕ್ಷೀಣವಾಗಿ ಆ ಸ್ಥಾನವನ್ನು ಅರ್ಥಹೀನ ನಡೆನುಡಿಗಳು ಆಕ್ರಮಿಸುವಾಗ, ಮಣ್ಣಿನ ಕಲೆ, ಸವರ್ಾಂಗೀಣ ಕಲೆಯಾದ ಯಕ್ಷಗಾನವು, ಒಳಿತಿನ ಹಿರಿಮೆಯನ್ನು, ಮಾನವೀಯತೆಯ ಅರ್ಥವನ್ನು ವಿಸ್ತರಿಸಿ ಹೇಳುತ್ತದೆ. ಇದರಲ್ಲಿ ನುಡಿಗೆ ಒತ್ತುಕೊಟ್ಟು ಭೌದ್ಧಿಕ ಪರಿಜ್ಞಾನ ಮತ್ತು ತಾತ್ವಿಕತೆಯ ಒಳನೋಟದ ಮಹತ್ವವನ್ನು ತಿಳಿಸುವ 'ತಾಳಮದ್ದಳೆ' ಪ್ರಕಾರವನ್ನು ತಿಂಗಳಿಗೊಂದರಂತೆ ಮನೆ ಮನೆಯ ಮನಸ್ಸುಗಳಿಗೆ ತಲುಪಿಸುವ ವಿನೂತನ ಯೋಜನೆ 'ಯಕ್ಷನುಡಿಸರಣಿ ಮನೆ ಮನೆ ಅಭಿಯಾನ' ವನ್ನು ಕನ್ನಡ ಯುವಬಳಗವು ಕೈಗೆತ್ತಿಕೊಂಡಿದೆ. ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಮತ್ತು ಯಕ್ಷಗಾನ ಗುರುಗಳಾದ  ಶಿವ ಶಂಕರ ದಿವಾಣರ ಗರಡಿಯಿಂದ ಹೊರಬಿದ್ದ ಒಂದಷ್ಟು ಶಿಷ್ಯರು ಈಗ ನಾಡಿನ ಬೇರೆ ಬೇರೆ ಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಈ ಅಭಿಯಾನದ ಮೂಲಕ ಅವರು ಮತ್ತೆ ಒಂದಾಗುವ ಸಂದರ್ಭ ಸನ್ನಿಹಿತವಾಗುತ್ತಿದೆ. ಈ ಮೂಲಕ ಕಾಸರಗೋಡಿನ ಸಾಂಸ್ಕೃತಿಕ ವತರ್ುಲದಲ್ಲಿ ಒಂದು ವಿನೂತನ ಹೆಜ್ಜೆ ಮೂಡಿಬರಲಿದೆ.
   ಏಪ್ರಿಲ್ 14 ರಂದು ಅಪರಾಹ್ನ 1.30 ರಿಂದ ಮುಳ್ಳೇರಿಯಾ ಸಮೀಪದ ಮವ್ವಾರು ಬಳಿಯ ಮಲ್ಲಮೂಲೆ ಕೌಸ್ತುಭ ನಿವಾಸದಲ್ಲಿ ಯಕ್ಷನುಡಿಸರಣಿ ತಾಳಮದ್ದಳೆ ಮನೆ ಮನೆ ಅಭಿಯಾನ ವನ್ನು ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರರಾವ್ ಉದ್ಘಾಟಿಸಲಿರುವರು. ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿಯವರು ದಿಕ್ಸೂಚಿ ಭಾಷಣ ಮಾಡುವರು. ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಮಾಜಿ ಶಾಸಕ ಸಿ ಎಚ್ ಕುಂಞಂಬು, ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಶ್ರೀಕಾಂತ್ ಕೆ, ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ ಭಾಗವಹಿಸುವರು. ಕುಂಬ್ಟಾಜೆ ಗ್ರಾಮ ಪಂಚಾಯತು ಅಧ್ಯಕ್ಷೆ ಫಾತಿಮತ್ಝುಹರ, ಸದಸ್ಯ ರವೀಂದ್ರ ರೈ ಗೋಸಾಡ, ಪಾತರ್ಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಜಯರಾಮ ಎಡನೀರು, ಹಿರಿಯ ರಂಗಕಮರ್ಿ, ಸಾಹಿತಿ ಥೋಮಸ್ ಡಿಸೋಜ, ವಿಶ್ರಾಂತ ಉಪನೋಂದಾವಣಾಧಿಕಾರಿ ಮಹಮ್ಮದಾಲಿ ಪೆರ್ಲ, ಕವಿ, ಸಾಹಿತಿ ಸುಂದರ ಬಾರಡ್ಕ, ಸವಾಕ್ ಕಾರ್ಯದಶರ್ಿ ಸುಶ್ಮಿತಾ ಆರ್, ವಿಶ್ರಾಂತ ಸೈನಿಕ ಕೃಷ್ಣ ಮಣಿಯಾಣಿ ಮಲ್ಲಮೂಲೆ ಶುಭನುಡಿಗಳನ್ನಾಡುವರು. ಯುವಬಳಗದ ಮಾರ್ಗದರ್ಶಕ ಡಾ.ರತ್ನಾಕರ ಮಲ್ಲಮೂಲೆ, ಯುವಬಳಗದ ಪದಾಧಿಕಾರಿಗಳಾದ ರಕ್ಷಿತ್ ಪಿ ಎಸ್, ಪ್ರಶಾಂತ ಹೊಳ್ಳ ಎನ್, ಸೌಮ್ಯಾ ಪ್ರಸಾದ್, ರಾಜೇಶ್ ಎಸ್ ಪಿ, ವಿನೋದ್ಕುಮಾರ್ ಸಿ ಎಚ್ ಮುಂತಾದವರು ಉಪಸ್ಥಿತರಿರುವರು.
   ಸಭಾ ಕಾರ್ಯಕ್ರಮದ ಬಳಿಕ ನಾಟ್ಯಗುರು ದಿವಾಣ ಶಿವಶಂಕರ ಅವರ ಮಾರ್ಗದರ್ಶನದಲ್ಲಿ, ಯುವಬಳಗದ ಸದಸ್ಯರಿಂದ ಕಣರ್ಾಜರ್ುನ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಪುಣಿಂಚಿತ್ತಾಯ ಪೆರ್ಲ, ಚೆಂಡೆಯಲ್ಲಿ ರಾಘವ ಬಲ್ಲಾಳ್, ಮದ್ದಳೆಯಲ್ಲಿ ಶ್ರೀಸ್ಕಂದ ದಿವಾಣ ಸಹಕರಿಸುವರು. ಮುಮ್ಮೇಳದಲ್ಲಿ ದಿವಾಕರ ಬಲ್ಲಾಳ್ ಎ ಬಿ, ನವೀನ ಕುಂಟಾರು, ಪ್ರಶಾಂತ ಪಡ್ರೆ, ಮನೋಜ್ ಎಡನೀರು, ಶಶಿಧರ ಕುದಿಂಗಿಲ, ಮಣಿಕಂಠ ಪಾಂಡಿಬಯಲು, ಶ್ರದ್ಧಾ ಭಟ್ ನಾಯರ್ಪಳ್ಳ ಪಾಲ್ಗೊಳ್ಳುವರು.
   ಈಗಾಗಲೇ ಒಂದು ವರುಷದ ತಾಳಮದ್ದಳೆ ಕಾರ್ಯಕ್ರಮವು ನಿಗದಿಯಾಗಿದ್ದು ಪ್ರತಿ ತಿಂಗಳು ಆಯ್ಕೆಯಾದ, ಜಿಲ್ಲೆಯ ವಿವಿಧ ಮನೆಗಳಲ್ಲಿ ಕನ್ನಡ ಯುವ ಬಳಗದ ಕಲಾವಿದರು ತಾಳಮದ್ದಳೆಯನ್ನು ನಡೆಸುವರು. ಜೊತೆಗೆ ಕನ್ನಡ ಜಾಗೃತಿಯೂ ನಡೆಯಲಿದೆ.  ಸೂರಂಬೈಲು ಸಮೀಪದ ನೂಚನಗುಳಿ, ಮುಳಿಯಾರು ಸಮೀಪದ  ಬಳ್ಳಮೂಲೆ, ಕೂಡ್ಲು ಸಮೀಪದ ಪಾರೆಕಟ್ಟೆ, ಮುಳ್ಳೇರಿಯಾದ ಭಾಗ್ಯಶ್ರೀ ನಿಲಯ, ಅನಂತಪುರದ ಶ್ರೀಕೃಪಾ ನಿವಾಸ, ವಾಣಿನಗರದ ಪಡ್ರೆ, ಎಡನೀರಿನ ಬನದಡಿ, ಉಪ್ಪಳದ ಅಗತರ್ಿಮೂಲೆ, ಅಮೈಯ ಕೃಷ್ಣನಗರ, ಎಡನೀರಿನ ನರಿಕಡಪ್ಪು, ಕಾಸರಗೋಡಿನ ಕೋಟೆಕಣಿ, ಪಾಣಾಜೆಯ ಕೆದಂಬಾಡಿ ಹಾಗೂ ಯಕ್ಷಬೊಂಬೆಮನೆ ಪಿಲಿಕುಂಜೆ  ಮುಂತಾದೆಡೆ ಕ್ರಮವಾಗಿ ಸರಣಿ ಕಾರ್ಯಕ್ರಮ ನಡೆಯಲಿದೆ. ಸರಣಿಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕನ್ನಡ ಯುವಬಳಗವು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದೆ.
   ಏನಂತಾರೆ:
  ಯಕ್ಷ ನುಡಿ ಸರಣಿ ಯೋಜನೆಯ ಮೂಲಕ ಈ ಮಣ್ಣಿನ ಭಾಷೆ ಸಂಸ್ಕೃತಿಯ ಬಗ್ಗೆ ಮನೆ ಮನೆಗಳಲ್ಲಿ ಅರಿವು ಅಭಿಮಾನ ಮೂಡಿಸುವುದರ ಜೊತೆಗೆ ಜಿಲ್ಲೆಯಾದ್ಯಂತ ಯುವ ಮನಸ್ಸುಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಆ ಮೂಲಕ ಸಾಮಾಜಿಕ ಜಾಗೃತಿ, ಪರಿಸರ ಕಾಳಜಿ, ಸಮಾಜದ ಆಗುಹೋಗುಗಳನ್ನು ಅನುಭವದಿಂದ ಅರ್ಥಮಾಡಿಕೊಳ್ಳುವ ಪರಿಜ್ಞಾನವನ್ನು ಅವರಲ್ಲಿ ಮೂಡಿಸುವ, ಆ ಮೂಲಕ ಜಾತಿ ಮತ ಪಂಥಗಳಿಗೆ ಅತೀತವಾಗಿ ಬದುಕನ್ನು ರೂಪಿಸಿ, ಸಾಂಘಿಕ ಮನೋಭಾವವನ್ನು ನಾಯಕತ್ವ ಗುಣವನ್ನೂ, ನೈತಿಕ ಧಾಮರ್ಿಕ ಮನೋಭಾವವನ್ನೂ ಅವರಲ್ಲಿ ಬಿತ್ತುವ ಹಾಗೂ ಅದನ್ನು ಪಸರಿಸುವ ಕಾರ್ಯವನ್ನು ಮಾಡಲಾಗುತ್ತದೆ. ಇದಕ್ಕೆಲ್ಲ ಅತ್ಯತ್ತಮ ಮಾಧ್ಯಮವಾದ ಯಕ್ಷಗಾನ ಕಲೆಯನ್ನು ಇಲ್ಲಿ ಆಯ್ಕೆ ಮಾಡಲಾಗಿದೆ. ಆಧುನಿಕ ಕ್ಷಣಿಕ ವ್ಯಾಮೋಹ ಮತ್ತು ಶೋಕಿ ಬದುಕಿನತ್ತ ಮುಖ ಮಾಡುವ, ಅಂಧಾನುಕರಣೆಯ ಬೆನ್ನು ಹತ್ತುವ ಇಂದಿನ ಮನಸ್ಸುಗಳು ಇಂತಹ ಯೋಜನೆಯ ಮೂಲಕ ಬೌದ್ಧಿಕ ಮತ್ತು ವ್ಯಕ್ತಿತ್ವ "ಕಾಸವನ್ನು ಮಾಡಿಕೊಳ್ಳಬಲ್ಲುದೆಂಬ ನಂಬಿಕೆಯಿದೆ. ಇಲ್ಲಿನ ಬಹುತೇಕ ಯುವಕ ಯುವತಿಯರೆಲ್ಲರೂ ತಳಮಟ್ಟದಿಂದ ಮೇಲೆ ಬಂದ ಪ್ರತಿಭಾವಂತರಾಗಿದ್ದು, ಸಮಾಜ, ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಪ್ರೀತಿಸಿ ಗೌರವಿಸುವವರು.
                                          ಡಾ. ರತ್ನಾಕರ ಮಲ್ಲಮೂಲೆ, ಪ್ರಾಧ್ಯಾಪಕ,
                                                     ಅಭಿಯಾನ ಸಂಯೋಜಕ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries