HEALTH TIPS

No title

               15ನೇ ಹಣಕಾಸು ಆಯೋಗದ ಟಿಒಆರ್ ನಲ್ಲಿ ದಕ್ಷಿಣ-ಉತ್ತರ ರಾಜ್ಯಗಳ ನಡುವೆ ತಾರತಮ್ಯ ಇಲ್ಲ: ಮೋದಿ
    ಚೆನ್ನೈ: 15 ನೇ ಹಣಕಾಸು ಆಯೋಗದ ಟಮ್ಸರ್್ ಆಫ್ ರೆಫರೆನ್ಸ್(ಟಿಒಆರ್) ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದ್ದು, ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಂಡ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದ್ದಾರೆ.
    ಚೆನ್ನೈ ನಲ್ಲಿ ಗುರುವಾರ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ 15 ನೇ ಹಣಕಾಸು ಆಯೋಗದ ಟಮ್ಸರ್್ ಆಫ್ ರೆಫರೆನ್ಸ್  ಪಕ್ಷಪಾತದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಅದು ಆಧಾರ ರಹಿತ" ಎಂದು ಹೇಳಿದ್ದು, ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಂಡ ರಾಜ್ಯಗಳನ್ನು ಉತ್ತೇಜಿಸುವಂತೆ ಕೇಂದ್ರ ಸಕರ್ಾರ ಹಣಕಾಸು ಆಯೋಗಕ್ಕೆ ಸಲಹೆ ನೀಡಿತ್ತು. ಈ ಮಾನದಂಡದ ಆಧಾರದಲ್ಲಿ, ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ತಮಿಳುನಾಡಿನಂತಹ ರಾಜ್ಯಗಳಿಗೆ ಪ್ರಯೋಜನವಾಗಲಿದೆ, ಆದರೆ ಈ ವಿಷಯದ ಬಗ್ಗೆ ಆರೋಪ ಮಾಡುತ್ತಿರುವವರು ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. 
    ಈ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ, ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಉತ್ತಮ ಆಥರ್ಿಕ ಬೆಳವಣಿಗೆ ಸಾಧಿಸಿದರೂ, ಹಣಕಾಸು ಆಯೋಗದ ಟಿಒಆರ್ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗುವಂತೆ ಸಂಪನ್ಮೂಲಗಳ ಹಂಚಿಕೆಯಾಗುತ್ತಿತ್ತು ಎಂಬ ಕೂಗು ಕೇಳಿಬರುತ್ತಿತ್ತು ಎಂದು ಮೋದಿ ಹೇಳಿದ್ದಾರೆ.
   ಟಮ್ಸರ್್ ಆಫ್ ರೆಫರೆನ್ಸ್(ಟಿಒಆರ್) ಕುರಿತು ಮೊದಲು ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು, ನಂತರ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಸೇರಿದಂತೆ ದಕ್ಷಿಣ ಭಾರತದ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದರು. ಮೋದಿ ಸ್ಪಷ್ಟನೆ ನೀಡುವುದಕ್ಕೂ ಮುನ್ನ ಕೇರಳ ಹಣಕಾಸು ಸಚಿವ ಥಾಮಸ್ ಐಸ್ಯಾಕ್ ನಡೆಸಿದ್ದ ದಕ್ಷಿಣ ಭಾರತದ ಹಣಕಾಸು ಸಚಿವರ ಸಭೆಯಲ್ಲಿ ಟಿಒಆರ್ ನ್ನು ಒಕ್ಕೂಟಕ್ಕೆ ಮಾರಕ ಎಂಬ ನಿಲುವನ್ನು ಪ್ರಕಟಿಸಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries