HEALTH TIPS

No title

                       ಸೇವಾ ನಿವೃತ್ತಿಯಾಗಿ 2 ವರ್ಷಗಳ ಬಳಿಕ ಡಿಇಓ ಆಗಿ ಪದೋನ್ನತಿ!
                                 


ಕೇರಳದಲ್ಲೇ ಮೊದಲ ಪ್ರಕರಣ
    ಕುಂಬಳೆ: ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡಿಗರ ಮೇಲಿನ ಮಲತಾಯಿ ಧೋರಣೆಯ ಪರಿಣಾಮ ಸೇವಾ ನಿವೃತ್ತಿಯಾಗಿ ಎರಡು ವರ್ಷಗಳ ಬಳಿಕ ಮುಖ್ಯೋಪಾಧ್ಯಾಯಿನಿಯೋರ್ವರಿಗೆ ಇದೀಗ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಭಡ್ತಿ ನೀಡಿರುವ ಅಪೂರ್ವ ಘಟನೆ ನಡೆದಿದ್ದು, ಇದು ರಾಜ್ಯದಲ್ಲೇ ಮೊತ್ತಮೊದಲ ಪ್ರಕರಣವೆಂದು ದಾಖಲಿಸಲ್ಪಟ್ಟಿದೆ.
   ಹಿರಿಯ ಶಿಕ್ಷಣ ತಜ್ಞ, ಸಾಹಿತಿ, ನಿವೃತ್ತ ಶಿಕ್ಷಕ ವಿ.ಬಿ.ಕುಳಮರ್ವರ ಪತ್ನಿ ಲಲಿತಾಲಕ್ಷ್ಮೀ ಎಸ್.ಕುಳಮರ್ವ 2007 ರಿಂದ 2014ರ ವರೆಗೆ ಮುಖ್ಯೋಪಾಧ್ಯಾಯಿನಿಯಾಗಿ ಸರಕಾರಿ ಫ್ರೌಢಶಾಲೆ ಪೈವಳಿಕೆ ಕಾಯರ್ಕಟ್ಟೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದರು. ಈ ಮಧ್ಯೆ 2008ರಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಕರ ಹಿರಿತನ(ಸೀನಿಯಾರಿಟಿ) ಪಟ್ಟಿಯನ್ನು ಗಮನಿಸಿದಾಗ ಲಲಿತಾಲಕ್ಷ್ಮೀ ಯವರ ಹೆಸರು ಇವರಿಗಿಂತ ಕಿರಿಯವರಾದವರ ಬಳಿಕ ಕಂಡುಬಂದಿದ್ದು, ಲಲಿತಾಲಕ್ಷ್ಮೀಯವರು ಈ ಬಗ್ಗೆ ಕೂಡಲೇ ಶಿಕ್ಷಣ ಉಪನಿದರ್ೇಶಕರ ಸಹಿತ ಉನ್ನತ ಅಧಿಕಾರಿಗಳಿಗೆ ಮನವಿ ನೀಡಿ ಸರಿಪಡಿಸಲು ಕೇಳಿಕೊಂಡಿದ್ದರು. ಆದರೆ ಲಲಿತಾಲಕ್ಷ್ಮಿಯವರ ಮನವಿಯನ್ನು ನಿರ್ಲಕ್ಷ್ಯಿಸಿದ ಇಲಾಖೆ ಇವರಿಗಿಂತ ಕಿರಿಯರನ್ನು ಭಡ್ತಿಗೊಳಿಸಿತ್ತು. ಇದರಿಂದ 2013-14ರ ಸಂದರ್ಭ ಜಿಲ್ಲಾ ಶಿಕ್ಷಣಾಧಿಕಾರಿಗಳಾಗುವ ಅವಕಾಶದಿಂದ ವಂಚಿತರಾಗಬೇಕಾಯಿತು. ಇದರಿಂದ ಮನನೊಂದ ಲಲಿತಾಲಕ್ಷ್ಮಿ 2014 ಫೆ. 12 ರಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಈ ಕಾರಣದಿಂದ ಎಚ್ಚೆತ್ತವರಂತೆ ನಟಿಸಿದ ಇಲಾಖೆ 2014ರ ಫೆಬ್ರವರಿಯಲ್ಲಿ ಲಲಿತಾಲಕ್ಷ್ಮಿಯವರನ್ನು ರಾಜ್ಯ ಶಿಕ್ಷಣ ನಿದರ್ೇಶಕರ ಕಚೇರಿಗೆ ಕರೆಸಿ ಹೇಳಿಕೆ ದಾಖಲಿಸಿ ಕೈತೊಳೆದುಕೊಂಡಿತ್ತು. ಬಳಿಕ ಯಾವುದೇ ಮಾತುಕತೆ, ಕಡತ ವಿಲೇವಾರಿಗೆ ಮುಂದಾಗದ ಇಲಾಖೆಯ ವಿರುದ್ದ ನ್ಯಾಯಾಲಯದ ವಾದ ಪ್ರತಿವಾದಗಳ ಬಳಿಕ ಇದೀಗ 2017 ಡಿಸೆಂಬರ್ ನಲ್ಲಿ ನ್ಯಾಯದೊರಕಿಸಿ ಜಿಲ್ಲಾ ವಿದ್ಯಾಧಿಕಾರಿಯಾಗಿ ಭಡ್ತಿ ನೀಡಿದ ಆದೇಶವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿತು. ಬಳಿಕ ಶಿಕ್ಷಣ ಇಲಾಖೆಯು ಲಲಿತಾಲಕ್ಷ್ಮೀ ಯವರಿಗೆ ನೋಶನಲ್ ಪ್ರಮೋಶನ್ ಆಸ್ ಡಿಇಓ ಎಂಬ ಆದೇಶ ನೀಡಿದೆ.
     ಆದ್ದು ಏನು:
   ಲಲಿತಾಲಕ್ಷ್ಮೀ ಯವರು 1982 ಡಿಸೆಂಬರ್ ನಲ್ಲಿ ರಾಜ್ಯ ಲೋಕಸೇವಾ ಆಯೋಗದ ಮೂಲಕ ಶಿಕ್ಷಕಿಯಾಗಿ ಆಯ್ಕೆಯಾಗಿ ಬಂಗ್ರಮಂಜೇಶ್ವರ ಸರಕಾರಿ ಹೈಸ್ಕೂಲಿನಲ್ಲಿ ವೃತ್ತಿಜೀವನ ಆರಂಭಿಸಿದರು. 1982ರಲ್ಲಿ ವೃತ್ತಿ ನೇಮಕಾತಿ ಆದೇಶ ರ್ಯಾಂಕ್ ಸಂಖ್ಯೆ 811 ಎ ಆಗಿದ್ದು, ಅದು ರ್ಯಾಂಕ್ ಸಂಖ್ಯೆ 567-1983 ಎಂದು ನಮೂದಾಗಿರುವುದು ಇಷ್ಟು ಅವಾಂತರಗಳಿಗೆ ಕಾರಣವಾಯಿತು. 2008ರ ವರೆಗೂ ಮೂಲ ನೇಮಕಾತಿ ಆದೇಶ ರ್ಯಾಂಕ್ ಸಂಖ್ಯೆಗಳು ಸಮರ್ಪವಾಗಿದ್ದುದು ಒಮ್ಮಿಂದೊಮ್ಮೆಗೆ ಬದಲಾಗಿರುವುದರ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕನ್ನಡಿಗರ ಮೇಲೆ ತೋರಿಸುವ ವೃಥಾ ಹಠಗಳೇ ಕಾರಣವೆಂದು ಲಲಿತಾಲಕ್ಷ್ಮಿ ತಿಳಿಸಿದ್ದಾರೆ.
   ಆಗುತ್ತಿದ್ದರು ಮೊದಲ ಅಧಿಕಾರಿಣಿ:
   ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಮಹಿಳೆ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಉದಾಹರಣೆ ಇಲ್ಲ. ಲಲಿತಾಲಕ್ಷ್ಮಿಯವರಿಗೆ ಈ ಅರ್ಹತೆ ಇದ್ದು, ದಾಖಲೆಯ ನಮೂದಿಸುವಿಕೆಯ ತಪ್ಪಿನ ಕಾರಣ ಅಂತಹದೊಂದು ಅವಕಾಶದಿಂದ ವಂಚಿತರಾಗಬೇಕಾಯಿತು. ಇದಕ್ಕೆ ಯಾರು ಹೊಣೆ ಎಂಬುದೇ ಉತ್ತರಿಸುವವರಿಲ್ಲದಂತಾಗಿದೆ.
   ಲಲಿತಾಲಕ್ಷ್ಮೀಯವರು ಜನರಲ್ ಕೆಗರಿಯಲ್ಲಿ ಶಿಕ್ಷಕಿ ಸೇವೆಗೆ ಸೇರ್ಪಡೆಗೊಂಡವರು.( ಎಂದರೆ ಕೇರಳದಲ್ಲಿ ಎರಡು ರೀತಿಯ ಶಿಕ್ಷಣ ನೇಮಕಾತಿಯಿದ್ದು, ಒಂದು- ಗಡಿನಾಡಿನ ಕನ್ನಡಿಗರು ಎಂಬ ನೆಲೆಯಲ್ಲಿ ನೇಮಕಾತಿ ಪಡೆಯುವುದು, ಮತ್ತು ಇವರು ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಸೇವೆ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನೊಂದು-ಜನರಲ್ ಎಂದರೆ ರಾಜ್ಯಾದ್ಯಂತ ನೇಮಕಾತಿ ಆದೇಶ ಪಡೆಯುವುದು. ಇವರು ರಾಜ್ಯದ ಎಲ್ಲೂ ಸೇವೆ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ರಾಜ್ಯಮಟ್ಟದಲ್ಲಿ ಇವರ ರ್ಯಾಂಕ್ ಪಟ್ಟಿ ಇರುತ್ತದೆ.)
    ನಷ್ಟಕ್ಕೆ ಹೊಣೆ ಯಾರು?
   ಲಲಿತಾಲಕ್ಷ್ಮಿ ತಮ್ಮ ಹೋರಾಟ-ದಾವೆಗಳಿಗೆ 1 ಲಕ್ಷಕ್ಕಿಂತಲೂ ಮಿಕ್ಕಿದ ಹಣ ಖಚರ್ುಮಾಡಿದ್ದು, ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ನೀಡಿರುವ ಆದೇಶದಲ್ಲಿ ದಾವೆ ಹೂಡಿದ ದಿನಾಂಕದ ಬಳಿಕ ಜಿಲ್ಲಾ ಶಿಕ್ಷಣ ಅಧಿಕಾರಿಗಳಾಗಿ ನೀಡಬಹುದಾದ ಸೌಲಭ್ಯ ನೀಡುವ ಆದೇಶ ನೀಡಿದ್ದು, ಆದರೆ ದಾವೆ ಹೂಡುವುದಕ್ಕಿಂತ ಹಿಂದಿನ ಸುಮಾರು 6 ತಿಂಗಳ ಬಗೆಗೆ ಏನೂ ಹೇಳದಿರುವುದು ಆಶ್ಚರ್ಯ ಮೂಡಿಸಿದೆ.
   ಕರ್ತವ್ಯದಲ್ಲಿ ಮುಂದೆ:
  ಲಲಿತಾ ಲಕ್ಷ್ಮೀಯವರು ಕಾಯರ್ಕಟ್ಟೆ ಹೈಸ್ಕೂಲಿನಲ್ಲಿ ಸೇವೆಯಲ್ಲಿದ್ದ ವೇಳೆಯೇ ಎಂದರೆ 2010ರಲ್ಲಿ ಆ ಶಾಲೆಗೆ ಪ್ಲಸ್ ವನ್ ಮಂಜೂರಾಯಿತು. ಈ ಸಂದರ್ಭ ನೂತನ ಹೈಯರ್ ಸೆಕೆಂಡರಿಯ ಪ್ರಾಂಶುಪಾಲೆಯಾಗಿಯೂ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿಯ ಸಂಬಳದಲ್ಲಿ ದುಡಿದಿರುವುದೂ ಇವರ ಸೇವಾ ತತ್ಪರತೆಗೆ ಸಾಕ್ಷಿಯಾಗಿದೆ. 
   ರಾಜ್ಯದಲ್ಲೇ ಮೊದಲ ಪ್ರಕರಣ:
   ಲಲಿತಾಲಕ್ಷ್ಮೀಯವರ ಕಾನೂನು ಹೋರಾಟದ ಪರಿಣಾಮ ನಿವೃತ್ತಿಯಾಗಿ ಎರಡು ವರ್ಷಗಳ ಬಳಿಕ ಸೇವಾ ಭಡ್ತಿಹೊಂದಿರುವುದು ರಾಜ್ಯದಲ್ಲೇ ಮೊದಲ ಪ್ರಕರಣವಾಗಿದ್ದು, ಈ ಬಗ್ಗೆ ನ್ಯಾಯಾಲಯವು ಮುಂದೆ ಹೀಗಾಗದಂತೆ ಶಿಕ್ಷಣ ಇಲಾಖೆಗೆ ಎಚ್ಚರಿಕೆಯನ್ನೂ ನೀಡಿರುವುದು ಗಮನಾರ್ಹ.
    ಏನಂತಾರೆ:
     ನಿರಂತರ ಹೋರಾಟದ ಬಳಿಕ ನ್ಯಾಯ ದೊರಕಿರುವುದರಲ್ಲಿ ಸಂತಸವಿದ್ದರೂ ಜಿಲ್ಲಾ ಶಿಕ್ಷಣಾಧಿಕಾರಿಣಿಯಾಗಿ ಸೇವೆ ಸಲ್ಲಿಸಲು ಅವಕಾಶ ಲಭಿಸದಿರುವುದರ ಬಗ್ಗೆ ನೋವಿದೆ. ಕಾಸರಗೋಡಿನ ಅಲ್ಪಸಂಖ್ಯಾತ ಕನ್ನಡಿಗಳು ಎಂಬ ಕಾರಣಕ್ಕೆ ಮೇಲಿನ ಅಧಿಕಾರಿಗಳು ಕಡತಗಳನ್ನು ನಿಲಕ್ಷ್ಯವಾಗಿ ಬದಲಾಯಿಸಿ ತನಗೆ ಮಾಡಿರುವ ಅನ್ಯಾಯವು ಖಂಡನಾರ್ಹವಾಗಿದ್ದು, ಕಾಸರಗೋಡಿನ ಕನ್ನಡಿಗರ ಸ್ಥಿತಿಗತಿಯ ನಿದರ್ಶನವಾಗಿದೆ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯ ತುತರ್ು ಇದ್ದು, ರಾಜ್ಯ ಸೆಕ್ರೆಟರಿಯೇಟ್ ಸಹಿತ ವಿವಿಧೆಡೆ ಸೇವೆಯಲ್ಲಿರುವ ಕನ್ನಡಿಗರಾದ ಅಧಿಕಾರಿಗಳಿದ್ದರೆ ಹೀಗಾಗದಂತೆ ನೋಡಿಕೊಳ್ಳುವ ಅಗತ್ಯವಿದೆ.
               ಲಲಿತಾಲಕ್ಷ್ಮೀ.ಎಸ್ ಕುಳಮರ್ವ.
             ಅನ್ಯಾಯಕ್ಕೊಳಗಾದ ನಿವೃತ್ತ ಮುಖ್ಯೋಪಾಧ್ಯಾಯಿನಿ.
 

  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries