ಬೇಂಗಪದವು : ಶಾಲಾ ಹಿರಿಮೋತ್ಸವ
ಪೆರ್ಲ: ಬೇಂಗಪದವು ಶ್ರೀ ಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2017-18 ನೇ ಸಾಲಿನ ಹಿರಿಮೋತ್ಸವ ಆಚರಿಸಲಾಯಿತು.
ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಬಿ. ಉದ್ಘಾಟಿಸಿದರು. ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಮಾತೃ ಮಂಡಳಿ ಅಧ್ಯಕ್ಷೆ ರೇಖಾ ಕೆ.ಎಸ್. ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶಿವ ಕುಮಾರ್ ಎಸ್. ಸ್ವಾಗತಿಸಿದರು. ಅಧ್ಯಾಪಿಕೆ ಯಕ್ಷಿತಾ ಪ್ರಾರ್ಥನೆ ಹಾಡಿದರು. ನಳಿನಿ ಬಿ. ವಂದಿಸಿದರು. ಹರಿಣಾಕ್ಷಿ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಈ ಸಾಲಿನ ಶಾಲಾ ಚಟುವಟಿಕೆಗಳನ್ನು ಹಾಗೂ ಸಾಧನೆಗಳನ್ನು ವೀಡಿಯೋ ತುಣುಕುಗಳ ರೂಪದಲ್ಲಿ ಪ್ರದಶರ್ಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಶೈಕ್ಷಣಿಕ ಚಟುವಟಿಕೆಗಳು ನಡೆದವು. ಭಾಷಾ ಚಟುವಟಿಕೆಗಳು, ಸರಳ ಪ್ರಯೋಗಗಳು, ಕನ್ನಡ ಮತ್ತು ಇಂಗ್ಲೀಷ್ ಅಭಿನಯ ಗೀತೆಗಳು, ಭಾಷಣ, ನಾಟಕ, ಏಕಪಾತ್ರಾಭಿನಯ ಮುಂತಾದ ಚಟುವಟಿಕೆಗಳು ನಡೆಯಿತು. 2017-18 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲಾ ಮಕ್ಕಳು, ಅಧ್ಯಾಪಿಕೆಯರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಕಲೋತ್ಸವ, ವೃತ್ತಿ ಪರಿಚಯ ಮೇಳ ಇತ್ಯಾದಿಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ್ದು ಊರವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.