HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ನಾಟ್ಯ ಸಾರ್ವಭೌಮನಿಂದ ನೃತ್ಯೋಜನಿಗೆ ಗುರು ನಮನ
         ಮಂಜೇಶ್ವರದಲ್ಲಿ ಗಮನ ಸೆಳೆದ ವಿಭಿನ್ನ ಕಾರ್ಯಕ್ರಮ: ನಮೋ ಮೋಹನ-2018
     ಮಂಜೇಶ್ವರ: ಗುರುವಿಲ್ಲದೆ ವಿದ್ಯೆ ಗುರಿಮುಟ್ಟದು. ಗುರುವಿಲ್ಲದ ಬಾಳು ಗೋಳು. ಗುರು ಬದುಕನ್ನು ಬೆಳಗಿಸುವ ದೀಪವಿದ್ದಂತೆ. ಸೊಗಸಾದ ಬದುಕನ್ನು ಸಂಪನ್ನವಾಗಿಸಬಲ್ಲ, ಬದುಕುವ ಕಲೆಯನ್ನು ಕಲಿಸಬಲ್ಲ ಕಲಾವಿದ ನಿಜವಾದ ಗುರು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
    ಅವರು ನಾಟ್ಯನಿಲಯಂ ಶಾಸ್ತ್ರೀಯ ನೃತ್ಯ ಸಂಸ್ಥೆ ಮಂಜೇಶ್ವರದ ಆಶ್ರಯದಲ್ಲಿ ಶನಿವಾರ ಸಂಜೆ ಮಂಜೇಶ್ವರ ಹಳೆ ಪೋಸ್ಟಾಪೀಸ್ ಪರಿಸರದಲ್ಲಿ ನಡೆದ ನಮೋ ಮೋಹನ-2018 ಅಭಿನಂದನಾ ಕಾರ್ಯಕ್ರಮದಲ್ಲಿ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ, ಕಲಾ ತಿಲಕ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್  ಅವರನ್ನು ಅಭಿನಂದಿಸಿ ಮಾತನಾಡುತ್ತಿದ್ದರು.
   ಶಿಕ್ಷಣದ ಮೂಲಕ ತಾನು ತಿದ್ದಿ ತೀಡಿದ ವಿದ್ಯಾಥರ್ಿಗಳು ಬೆಳೆದು ಸಾಧನೆಯ ಗರಿ ಏರಿಸಿಕೊಂಡಾಗ ಹಿಗ್ಗುವ ಮನಸ್ಸಿರುವುದು ಗುರುವಿಗೆ ಮಾತ್ರ. ತಾನು ಅತ್ಯಂತ ಆಸ್ಥೆ ವಹಿಸಿ ಕಲಿಸಿದ ವಿದ್ಯೆಯನ್ನು ಶ್ರದ್ಧೆಯಿಂದ ಅರಗಿಸಿಕೊಂಡ ವಿದ್ಯಾಥರ್ಿಗಳೆಂದರೆ ಗುರುವಿಗೆ ಎಂದೆಂದೂ ಅಚ್ಚುಮೆಚ್ಚು. ಅದರಲ್ಲೂ ನೃತ್ಯವನ್ನೇ ಜೀವನವಾಗಿಸಿಕೊಂಡಿರುವ ಗುರುವಿನ ಶಿಷ್ಯ ತನ್ನದೇ ಹಾದಿಯಲ್ಲಿ ಸಾಗಿ ತಾನೂ ನೃತ್ಯದ ಸೊಗಡನ್ನೇ ಜೀವನವನ್ನಾಗಿ ಮಾಡಿರುವುದು ಪ್ರಶಂಸನೀಯ. ಆ ನಿಟ್ಟಿನಲ್ಲಿ ನಾಟ್ಯಗುರು ಕಲಾಸಿಂಧು ಬಾಲಕೃಷ್ಣ ಮಾಸ್ಟರ್ನಂತಹ ಶಿಷ್ಯನನ್ನು ಪಡೆದ, ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ನೃತ್ಯ ಗುರು ಮೋಹನ್ ಕುಮಾರ್ ಅವರನ್ನು ಎಷ್ಟು ಅಭಿನಂದಿಸುವುದು ಕಲೆಗೆ ನೀಡುವ ಅತ್ಯುನ್ನತ ಗೌರವ ಎಂದು ಅವರು ಹೇಳಿದರು.
   ಭವ್ಯವಾಗಿ ಅಲಂಕರಿಸಿದ ದಿ. ಶ್ರೀಮತಿ ಕಮಲ ಟೀಚರ್ ವೇದಿಕೆಯಲ್ಲಿ ಜರುಗಿದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯರು ಹಾಗೂ ಸಾಹಿತಿ ಡಾ. ರಮಾನಂದ ಬನಾರಿಯವರು ಮಾತನಾಡಿ ಗುರುವಿಗೆ ನೀಡಿದ ಅತ್ಯಂತ ಆಪ್ತವಾದ ಗೌರವ ಇದಾಗಿದ್ದು ಒಬ್ಬ ಶಿಷ್ಯನ ಈ ಪ್ರೀತ್ಯಾದಾರ, ಗುರುವಿಗೆ ತೋರುವ ಈ ಗೌರವ ಅತ್ಯಂತ ಸಮರ್ಪಕವಾದುದು ಮತ್ತು ಸೂಕ್ತವಾದುದು. ಎದೆಯ ದೀಪದಲ್ಲಿ ಅಕ್ಷರದೀಪ ಉರಿಸಿ ಬಾಳಿಗೆ ಬೆಳಕು ನೀಡುವ ಗುರುಗಳು ಸದಾ ಸ್ಮರಣೀಯರು. ಅಂತೆಯೇ ತನ್ನ ಶಿಷ್ಯನ ಮೂಲಕ ಈಗ ಸಾವಿರಾರು ಕಲಾವಿದರ ಬಾಳಹಣತೆಯನ್ನು ಬೆಳಗಿ ಜೀವನ ಮಾರ್ಗವನ್ನು ರೂಪಿಸುತ್ತಿರುವ ಈ ಅಪರೂಪದ ವ್ಯಕ್ತಿತ್ವಕ್ಕೆ , ಗುರುವಿಗೆ ಸಾಟಿಯಿಲ್ಲ ಎಂದವರು ಸಂತಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಅವರು ಬಾರತದ ಗುರು ಪರಂಪರೆ ಹಾಗೂ ಗುರುವಿಗೆ ನಮ್ಮ ಸಂಸ್ಕೃತಿಯಲ್ಲಿ ನೀಡಲಾಗುವ ಸ್ಥಾನಮಾನಗಳ ಕುರಿತು ಮಾಹಿತಿ ನೀಡಿದರು.
   ಈ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಡನೀರು ಶ್ರೀಗಳಿಂದ ಭಕ್ತಿ-ಭಾವ-ಗಾನ  ಸಂಗೀತ ಕಾರ್ಯಕ್ರಮವು ಜನಮನದಲ್ಲಿ ಭಕ್ತಿಯ ಮಳೆಗರೆಯಿತು. ಕಾರ್ಯಕ್ರಮದಲ್ಲಿ ನಾಟ್ಯನಿಲಯಂನ ನಾಟ್ಯಮಯೂರಿ ಸಾತ್ವಿಕಾ ಕೃಷ್ಣ ಸ್ವಾಗತಿಸಿ ಕಿರಣ್ ಮಂಜೇಶ್ವರ ಧನ್ಯವಾದವಿತ್ತರು. ಶಮರ್ಿಳಾ ಬಾಲಕೃಷ್ಣ, ಕಿರಣ್ ಕುಮಾರ್, ಉಣ್ಣಿಕೃಷ್ಣನ್ ಮೊದಲಾದ ಸಂಚಾರಿ ತಂಡದ ಸದಸ್ಯರು ಉಪಸ್ಥಿತರಿದ್ದರು.
  ಕಾರ್ಯಕ್ರಮಕ್ಕೆ ಆಗಮಿಸಿದ ಸ್ವಾಮೀಜಿ ಹಾಗೂ ಗುರು ಮೋಹನ್ ಕುಮಾರ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಹಬ್ಬದ ಹುರುಪಿನಿಂದ ಓಡಾಡುತ್ತಿದ್ದ ನಾಟ್ಯನಿಲಯಂನ ವಿದ್ಯಾಥರ್ಿ ಬಳಗ, ಉತ್ಸಾಹದಿಂದ ಭಾಗವಹಿಸಿದ ಹೆತ್ತವರು ಹಾಗೂ ಕಲಾಭಿಮಾನಿಗಳಿಂದ ಆಕರ್ಷಕವಾಗಿ ಶೃಂಗಾರಗೊಂಡ ಸಭಾಂಗಣವು ತುಂಬಿ ತುಳುಕುತ್ತಿತ್ತು. ವ್ಯವಸ್ಥಿತವಾದ, ಅಚ್ಚುಕಟ್ಟಾದ ಮಾದರಿ ಕಾರ್ಯಕ್ರಮವಾಗಿ ಕಂಡುಬಂತು. ಬಾಲಕೃಷ್ಣ ಮಾಸ್ಟರ್ ಅವರ ಶಿಷ್ಯಂದಿರು ಗುರುವಿನ ಗುರುಗಳಾದ ಉಳ್ಳಾಲ ಮೋಹನ್ ಕುಮಾರ್ ಅವರಿಗೆ ಫಲಪುಷ್ಪಗಳನ್ನು ನೀಡಿ ಆಶೀವರ್ಾದ ಪಡೆದುಕೊಂಡರು.
  ಗುರು ಉಳ್ಳಾಲ ಮೋಹನ್  ಕುಮಾರ್ ಅವರನ್ನು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರು ಶಾಲು ಹೊದಿಸಿ, ಫಲ ಪುಷ್ಪ ಹಾಗೂ ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಪ್ರಿಯ ಶಿಷ್ಯ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಗುರುಗಳಿಗೆ ಚಿನ್ನದ ಬಳೆಯನ್ನು ಕಾಣಿಕೆಯಾಗಿ ನೀಡಿ ಆಶೀವರ್ಾದವನ್ನು ಪಡೆದುಕೊಂಡರು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries