ಅಚ್ಚರಿ ಮೂಡಿಸಿದ ಡಾಗ್ ಸ್ಕ್ವಾಡ್ ಜಾಣ್ಮೆ
ಬದಿಯಡ್ಕ: ನವಜೀವನ ಪ್ರೌಢ ಶಾಲೆ ಬದಿಯಡ್ಕದಲ್ಲಿ ನಡೆದ ಸ್ಕೂಲ್ ಪೊಲೀಸ್ ಕೆಡೆಟ್ ಕಾಸರಗೋಡು ಜಿಲ್ಲಾ ಶಿಬಿರ ಸರ್ಗ ಕಾಹಳಂ-2018 ವಿವಿಧ ಉಪಯುಕ್ತ ಮಾಹಿತಿ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಅಜಿತ್ ಕುಮಾರ್ ಕಳನಾಡು ಅವರು ವ್ಯಕ್ತಿತ್ವ ವಿಕಸನ ತರಗತಿಯಲ್ಲಿ ಪ್ರಕೃತಿ ಹಾಗೂ ತಂದೆ ತಾಯಂದಿರು ಹಾಗೂ ಹಿರಿಯರನ್ನು ಗೌರವದಿಂದ ಹಾಗೂ ಪ್ರೀತಿಯಿಂದ ಕಾಣಬೇಕು, ಹಿರಿಯರಿಗೆ ತೋರುವ ಗೌರವ ನಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದರು. ಈ ಶಿಬಿರದಲ್ಲಿ ಅತ್ಯಂತ ಕ್ರಿಯಾತ್ಮಕವಾಗಿ ಪಾಲ್ಗೊಂಡ ವಿದ್ಯಾಥರ್ಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಅಜಾಗರೂಕತೆ ಹಾಗೂ ಸ್ಪಧರ್ಾತ್ಮಕವಾದ ವೇಗ ಉಂಟು ಮಾಡುವ ಅನಾಹುತಗಳ ಬಗ್ಗೆ ಮೋಟಾರ್ ವೆಹಿಕಲ್ಸ್ ಇನ್ಸ್ಪೆಕ್ಟರ್ ಪ್ರಸಾದ್ ಮಾಹಿತಿ ಒದಗಿಸಿದರು. ಸಾರಿಗೆ ನಿಯಮಗಳು, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ಗಳ ಅಗತ್ಯತೆಯನ್ನು ಸರಳವಾಗಿ, ಸುಲಲಿತವಾಗಿ ಮನದಟ್ಟಾಗುವಂತೆ ವಿವರಿಸಿದರು. ಅಂತೆಯೇ ಪೊಲೀಸ್ ಚೆಕ್ಕಿಂಗ್ನ ಅಗತ್ಯ ಹಾಗೂ ಚಾಲಕರ ಸಹಕಾರದ ಮಹತ್ವವನ್ನು ವಿವರಿಸಿದರು.
ವಾಹನ ಚಲಾವಣೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ವೇಗ ನಿಯಂತ್ರಣದ ಕುರಿತಾದ ಮಾಹಿತಿಯನ್ನು ನೀಡಿದರು. ಆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಯುವಜನಾಂಗ ಎದುರಿಸುವ ಸಮಸ್ಯೆಗಳು ಹಾಗೂ ಮಾಧ್ಯಮಗಳ ಮಹತ್ವ ಎಂಬ ವಿಷಯದ ಕುರಿತು ಚಚರ್ೆ ನಡೆಯಿತು. ಈ ಚಚರ್ೆಯಲ್ಲಿ ಶ್ರೀನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಮೊಬೈಲ್ ಮೊದಲಾದ ಇಲೆಕ್ಟ್ರೋನಿಕ್ ಮಾಧ್ಯಮಗಳ ದುರುಪಯೋಗ ಹಾಗೂ ಅಪ್ರಾಪ್ತರಲ್ಲಿ ಅದು ಸೃಷ್ಟಿಸುವ ಸಮಸ್ಯೆಗಳ ಕುರಿತು ಚಚರ್ಿಸಲಾಯಿತು. ಸೈಬರ್ ಮತ್ತು ಇತರ ಮೋಸದ ಜಾಲದ ಬಗ್ಗೆ ಮಕ್ಕಳಲ್ಲಿ ಎಚ್ಚರ ಮೂಡಿಸಲಾಯಿತು.
ಯುವಜನರು ಎದುರಿಸುವ ಖಿನ್ನತೆ ಹಾಗೂ ಮಾನಸಿಕ ವಿಶ್ರಾಂತಿಯಿಂದ ಹೇಗೆ ದೂರ ಉಳಿಯಬಹುದು ಇಲ್ಲವೇ ಹೊರಬರಬಹುದು ಎಂಬ ವಿಷಯದ ಕುರಿತು ಡಾ.ಕೃಷ್ಣ ಹಾಗೂ ಡಾ.ಸುನಿಲ್ ಮಾಹಿತಿ ನೀಡಿದರು. ಮಕ್ಕಳಲ್ಲಿ ಉಂಟಾಗುವ ಮಾನಸಿಕ ತೊಂದರೆಗಳು, ಖಿನ್ನತೆ, ಸ್ವಭಾವ ರೂಪೀಕರಣದ ಮೇಲೆ ಇದರಿಂದಾಗುವ ಪರಿಣಾಮಗಳ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡಲಾಯಿತು.
ಕಾಸರಗೋಡು ಡಾಗ್ ಸ್ಕ್ವಾಡ್ನ ನಾಲ್ಕು ಪೊಲೀಸ್ ನಾಯಿಗಳ ಉಪಸ್ಥಿತಿಯು ಶಿಬಿರಾಥರ್ಿಗಳಿಗೆ ನೂತನ ಅನುಭವವನ್ನು ನೀಡಿತು. ಕೇರಳ ರಾಜ್ಯ ಚಿನ್ನದ ಪದಕ ವಿಜೇತ ಬಸ್ಸಿ, ರೂನಿಗಳೆಂಬ ನಾಯಿಗಳ ಅನ್ವೇಷಣಾ ರೀತಿಗಳು, ಅಪರಾಧಿಗಳನ್ನು ಗುರುತಿಸುವಲ್ಲಿ ತೋರುವ ಜಾಣ್ಮೆ ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿತು. ನಾಯಿಗಳ ಪೆರೇಡ್ ಕೂಡಾ ಕುತೂಹಲಕಾರಿಯಾಗಿತ್ತು. ಒಟ್ಟಿನಲ್ಲಿ ಮಾಹಿತಿ ಪೂರ್ಣ ಹಾಗೂ ಸ್ಮರಣೀಯ ಶಿಬಿರವಾಗಿ ಸರ್ಗ ಕಾಹಳಂ-2018 ಸಂಪನ್ನಗೊಂಡು ಶಿಬಿರಾಥರ್ಿಗಳಿಗೆ ಹೊಸ ಅನುಭವ ನೀಡಿತು.