HEALTH TIPS

No title

               ಸಾರಿಗೆ ಸುರಕ್ಷತೆ: 2019ರಿಂದ ಹೊಸ ವಾಹನಗಳಿಗೆ ಟೆಂಪರ್ ಪ್ರೂಫ್ ನೊಂದಣಿ ಫಲಕ ಅಳವಡಿಕೆ
    ನವದೆಹಲಿ: ದೇಶದಲ್ಲಿ ಮೋಟಾರು ವಾಹನ ಸುರಕ್ಷತೆ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿರುವ ಸಕರ್ಾರ ಮುಂದಿನ ವರ್ಷದಿಂದ ಎಲ್ಲಾ ಮೋಟಾರು ವಾಹನಗಳಿಗೆ ಉನ್ನತ ಭದ್ರತೆ ವ್ಯವಸ್ಥೆ ಹೊಂದಿರುವ ಟೆಂಪರ್ ಪ್ರೂಪ್ ನೊಂದಣಿ ಫಲಕ (ನಂಬರ್ ಪ್ಲೇಟ್) ಪರಿಚಯಿಸಲು ಯೋಜಿಸಿದೆ.
   ಒಂದು ದಶಕರ ಬಳಿಕ ದೇಶದಲ್ಲಿ ಎಚ್ ಎಸ್ ಆರ್ ಪಿ ಯೋಜನೆ ಜಾರಿಗೆ ತರಲಾಗುತ್ತಿದ್ದರೂ ಇದಕ್ಕೆ ಅನೇಕ ರಾಜ್ಯಗಳ್ಲ್ಲಿ ಇನ್ನೂ ಒಪ್ಪಿಗೆ ಸಿಗಬೇಕಿದೆ. 2019 ರ ಜನವರಿ 1 ರಂದು ಅಥವಾ ನಂತರದ ದಿನಗಳಲ್ಲಿ ತಯಾರಿಸಲಾದ ಎಲ್ಲಾ ವಾಹನಗಳಲ್ಲಿ ಥಡರ್್ ರಿಜಿಸ್ಟ್ರೇಷನ್ ಮಾಕರ್್ ಸೇರಿ ಅನೇಕ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ನೀಡಬೇಕೆಂದುರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೇಳಿದೆ.
   ಹೊಸದಾಗಿ ರಿಜಿಸ್ಟ್ರೇಷನ್ ಮಾಕರ್್ ಹೊಂದುವ ಹಳೆ ವಾಹನಗಳಿಗೂ ವಾಹನದ ತಯಾರಕರು ವಿತರಕರು ಸಹ ಅಂತಹ ಪ್ಲೇಟ್ ಗಳನ್ನು ತಯಾರಿಸಬಹುದು ಎನ್ನಲಾಗಿದೆ. ಮೋಟಾರು ವಾಹನಗಳ  ನೊಂದಣಿ ಫ್ಲಕಗಳಲ್ಲಿ ಎಚ್ ಎಸ್ ಆರ್ ಪಿಗಳ ಬಳಕೆ ಕುರಿತಂತೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿ ತರಲು, ಮೇ 10ರೊಳಗೆ ಸಾರ್ವಜನಿಕರ ಆಕ್ಷೇಪಗಳನ್ನು ಕೇಳುವುದಾಗಿ ಸಚಿವಾಲಯದ ಮೂಲಗಳು ಹೇಳಿದೆ.
  ಈ ತಿಂಗಳ ಪ್ರಾರಂಬದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪಿಟಿಐ ಸುದ್ದಿಸಂಸ್ಥೆಯೊಡನೆ ಮಾತನಾಡಿದ್ದು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ವಾಹನಗಳಿಗೆ ಅತ್ಯಾಧುನಿಕ ನೊಂದಣಿ ಫ್ಲಕ ಅಳವಡಿಸಲಾಗುವುದೆಂದು ಅವರು ತಿಳಿಸಿದ್ದರು.
  ಪ್ರಸ್ತುತ ನೊಂದಣಿ ಸಂಖ್ಯೆಯುಳ್ಳ ಫ್ಲಕವನ್ನು ಆಯಾ ರಾಜ್ಯಗಳ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿ (ಆಟರ್ಿಓ) ನೀಡಿದ್ದು ಆಧುನಿಕ ಫ್ಲಕಗಳಿಂದ ಗ್ರಾಹಕರು ಪ್ರಯೋಜನ  ಹೊಂದುತ್ತಾರೆಈ ಫ್ಲಕಗಳಿಗೆ 15 ವರ್ಷಗಳ ಖಾತರಿ ಇರುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries