HEALTH TIPS

No title

           ಪಕ್ಷಿ ನಕ್ಷೆ ಸಮೀಕ್ಷೆ ಪೂರ್ಣ: 230 ಪ್ರಬೇಧಗಳು ದಾಖಲು
     ಕಾಸರಗೋಡು:  ಜಿಲ್ಲೆಯ ನಗರ-ಗ್ರಾಮೀಣ ಪ್ರದೇಶಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದ ಪಕ್ಷಿಗಳ ಪ್ರಬೇಧಗಳು ಇನ್ನು ಪಕ್ಷಿ ಭೂಪಟದಲ್ಲಿ ದಾಖಲಾಗಲಿದೆ.
  ಭಾರತದಲ್ಲೇ ಮೊತ್ತ ಮೊದಲ ಬಾರಿಗೆ ಕೇರಳದಲ್ಲಿ ಪಕ್ಷಿಗಳಿಗಳ ಲೋಕದ ಭೂಪಟವೊಂದು ಸಿದ್ಧಗೊಳ್ಳುತ್ತಿದೆ. ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಪಕ್ಷಿ ನಕಾಶೆ ಸಮೀಕ್ಷೆ ಪೂರ್ಣಗೊಂಡಿದ್ದು, 230 ಪಕ್ಷಿ ಪ್ರಬೇಧಗಳು ಪತ್ತೆಯಾಗಿವೆ.
  ಪಕ್ಷಿ ಭೂಪಟ ಯೋಜನೆ ಅಂಗವಾಗಿ ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಸಮೀಕ್ಷೆ ನಡೆದಿತ್ತು. ಕರಾವಳಿಯಿಂದ ಮಲೆನಾಡಿನವರೆಗೆ ಎಲ್ಲ ಆವಾಸ ಸ್ಥಳಗಳನ್ನು ಕೇಂದ್ರೀಕರಿಸಿ ಆಯ್ದ 187 ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಪಕ್ಷಿಗಳ ಮಾಹಿತಿ ಮಾತ್ರವಲ್ಲದೆ ಪಕ್ಷಿಗಳ ವಾಸಕ್ಕೆ ಅನುಕೂಲವಾಗುವಂತಹ ಜಲಾಶಯಗಳು, ಹಣ್ಣಿನ ಮರಗಳ ಲಭ್ಯತೆ, ಆಕ್ರಮಣಕಾರಿ ಸಸ್ಯಗಳ ಇರುವಿಕೆ ಮೊದಲಾದವುಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಸಮೀಕ್ಷೆಗಾಗಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಲಾಗಿದ್ದು, ಜಿಪಿಎಕ್ಸ್ ವ್ಯೂವರ್, ಲೋಕಸ್ ಫ್ರೀ ಮ್ಯಾಪ್, ಇ-ಬಡರ್್ ಆಪ್ಲಿಕೇಶನ್ಗಳನ್ನು ಬಳಸಿ ಆಯ್ದ ಸ್ಥಳಗಳ ಸವರ್ೇ ಲೊಕೇಶನ್ ಪತ್ತೆ ಹಚ್ಚಿ ಸಮೀಕ್ಷೆ ನಡೆದಿದೆ. 
   ಜಿಲ್ಲೆಯಲ್ಲಿ ಒಂದು ವರ್ಷದೊಳಗೆ ಎರಡು ಹಂತಗಳಲ್ಲಿ ಪಕ್ಷಿ ನಕ್ಷೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿದ್ದು, ಪಕ್ಷಿ ನಿರೀಕ್ಷಕರ ಬಹು ದೊಡ್ಡ ಸಾಧನೆಯಾಗಿದೆ. ಮ್ಯಾಕ್ಸಿಮ್ ರೋಡ್ರಿಗಸ್ ಕೊಲ್ಲಂಗಾನ ಹಾಗೂ ಪ್ರಶಾಂತ್ಕೃಷ್ಣ ಗುಂಪೆ ಸಂಯೋಜಕರಾಗಿ ಸವರ್ೆಗೆ ನೇತೃತ್ವ ನೀಡಿದ್ದರು.
  ಕಾಸರಗೋಡಿನ ಪಕ್ಷಿ ಭೂಪಟವನ್ನು ಪುಸ್ತಕ ರೂಪದಲ್ಲಿ ಹೊರ ತರಲು ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್ನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಪಕ್ಷಿ ಭೂಪಟ ಪುಸ್ತಕದಲ್ಲಿ ಯಾವ್ಯಾವ ಪಕ್ಷಿಗಳು ಎಲ್ಲೆಲ್ಲಿ ಕಂಡು ಬಂದಿವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಳು ಲಭಿಸಲಿವೆ.
  ಜಿಲ್ಲೆಯಲ್ಲಿ ನಡೆದ ಸಮೀಕ್ಷೆಯಲ್ಲಿ ಒಟ್ಟು 230 ಪಕ್ಷಿ ಪ್ರಬೇಧಗಳು ಪತ್ತೆಯಾಗಿದ್ದು, ಇವುಗಳಲ್ಲಿ ಕೆಲವು ಪಕ್ಷಿಗಳು ಇದುವರೆಗೂ ವರದಿಯಾಗಿರದ ಪಕ್ಷಿಗಳಿವೆ. ಕಂದು ಹೊಟ್ಟೆಯ ಗಿಡುಗ, ಪಾಚಿಬೆನ್ನಿನ ಪಿಪಿಳೀಕ, ಹಳದಿ ಕೆನ್ನೆಯ ಚೇಕಡಿ ಮೊದಲಾದ ಇದುವರೆಗೆ ಪತ್ತೆಯಾಗದ ಹೊಸ ಹಕ್ಕಿಗಳು ಪತ್ತೆಯಾಗಿವೆ.
  ಜಿಲ್ಲೆಯಲ್ಲಿರುವ ಪಕ್ಷಿಗಳು, ಅವುಗಳ ಆವಾಸ ವ್ಯವಸ್ಥೆಗಳು ಮೊದಲಾದವುಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಈ ಸಮೀಕ್ಷೆಯಿಂದ ಸಾಧ್ಯವಾಗಿದೆ. ಬಹಳಷ್ಟು ಸ್ಥಳಗಳಲ್ಲಿ ಪಕ್ಷಿಗಳ ಆವಾಸ ಸ್ಥಳಗಳು ನಾಶವಾಗಿರುವುದಾಗಿಯೂ, ರಬ್ಬರ್ ಕೃಷಿ ಹೆಚ್ಚಿರುವ ಪ್ರದೇಶಗಳಲ್ಲಿ ಅತಿ ಕಡಿಮೆ ಪಕ್ಷಿ ಪ್ರಬೇಧಗಳು ಪತ್ತೆಯಾಗಿವೆ ಎಂದು ಪಕ್ಷಿ ನಿರೀಕ್ಷಕರು ಹೇಳಿದ್ದಾರೆ.
   ಈ ಪಕ್ಷಿ ಭೂಪಟ ತಯಾರಿಯಲ್ಲಿ ವಿದ್ಯಾಥರ್ಿಗಳು, ಅಧ್ಯಾಪಕರು, ಸಂಶೋಧಕರು ಭಾಗವಹಿಸಿದ್ದರು. ಪಕ್ಷಿ ಭೂಪಟ ಸಮೀಕ್ಷೆಯಲ್ಲಿ ಜಿಲ್ಲೆಯ ಅರಣ್ಯ ಇಲಾಖೆ ಪೂರ್ಣ ಪ್ರೋತ್ಸಾಹ ಹಾಗೂ ಸಹಕಾರ ನೀಡಿರುವುದಾಗಿ ಸಂಯೋಜಕ ಮ್ಯಾಕ್ಸಿಮ್ ರೋಡ್ರಿಗಸ್ ಕೊಲ್ಲಂಗಾನ ಹೇಳಿದ್ದಾರೆ.
  ಜಿಲ್ಲೆಯ ಪ್ರಮುಖ ಪಕ್ಷಿ ನಿರೀಕ್ಷಕರಾದ ರಾಜು ಕಿದೂರು, ರಾಯನ್ ಪ್ರದೀಪ್, ಪ್ರದೀಪ್ ಚಂದ್ರನ್ ಮತ್ತಿತರರು ವಿವಿದ ಸ್ಥಳಗಳಲ್ಲಿ ಸಮೀಕ್ಷೆಗೆ ನೇತೃತ್ವ ನೀಡಿದ್ದರು.
   ಏನಂತಾರೆ: -ಮ್ಯಾಕ್ಸಿಮ್ ರೋಡ್ರಿಗಸ್ ಕೊಲ್ಲಂಗಾನ
   ಪಕ್ಷಿ ಭೂಪಟ ಯೋಜನೆಯ ಮುಖಾಂತರ ಹಾಗೂ ಅದಕ್ಕಿಂತ ಮುನ್ನ ವರದಿಯಾದವುಗಳನ್ನು ಸೇರಿಸಿ ಜಿಲ್ಲೆಯಲ್ಲಿ ಒಟ್ಟು 327 ಪಕ್ಷಿ ಪ್ರಬೇಧಗಳಿವೆ. 120 ದಿನಗಳ ಕಾಲ ಪ್ರತಿ ದಿನ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮತ್ತು ಸಂಜೆ 4ರಿಂದ 6ಗಂಟೆವರೆಗೆ ನಡೆದ ಭೂಪಟ ಸಮೀಕ್ಷೆಯಲ್ಲಿ 230 ಪಕ್ಷಿ ಪ್ರಬೇಧಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಇನ್ನು ಕೆಲ ವರ್ಷಗಳ ಬಳಿಕ ಇದೇ ರೀತಿಯ ಯೋಜನೆಯ ಮೂಲಕ ಪಕ್ಷಿ ಸಮೀಕ್ಷೆ ನಡೆಸಿದರೆ ಪಕ್ಷಿಗಳ ಸಂಖ್ಯೆ, ಪ್ರಬೇಧ ಹಾಗೂ ಆವಾಸ ವ್ಯವಸ್ಥೆಗಳಲ್ಲಿ ಉಂಟಾದ ಬದಲಾವಣೆ ಕುರಿತು ಹೆಚ್ಚಿನ ವಿಶ್ಲೇಷಣೆ ನಡೆಸಬಹುದಾಗಿದೆ. ಇದೊಂದು ಮಹತ್ತರವಾದ ಯೋಜನೆಯಾಗಿದೆ. ಪಕ್ಷಿಗಳ ಕುರಿತಾದ ಸಂಶೋಧನೆಗೆ ಇದೊಂದು ಅಡಿಪಾಯವಾಗಿದ್ದು, ಮುಂದೆ ಇನ್ನಷ್ಟು ಅಧ್ಯಯನಕ್ಕೆ ದಾರಿಮಾಡಿಕೊಡಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries