ಸಂಭ್ರಮದ "ಬೆಜ್ಜ ಯಕ್ಷೊತ್ಸವ" ಸಂಪನ್ನ
ಮಂಜೇಶ್ವರ : 'ಶ್ರೀ ಧೂಮಾವತೀ ಬಂಟ ದೈವಸ್ಥಾನ ಬೆಜ'್ಜ ಇದರ ಜಾತ್ರೋತ್ಸವ ಸಂದರ್ಭ ಉದ್ಯಮಿ ಮೋಹನ ಹೆಗ್ಡೆ ಬೆಜ್ಜ ಅವರ ನೇತೃತ್ವದ 'ರಾಮಚಂದ್ರ ಹೆಗ್ಡೆ ವೇದಿಕೆ ಬೆಜ್ಜ' ವತಿಯಿಂದ 26ನೇ ವರ್ಷದ ಯಕ್ಷೊತ್ಸವ ಸಲುವಾಗಿ ಸಾಲಿಗ್ರಾಮ ಮೇಳದವರಿಂದ 'ಮಧುರಾ ಮಹೇಂದ್ರ' ಯಕ್ಷಗಾನ ಬಯಲಾಟ ಹಾಗೂ ತೆಂಕು ತಿಟ್ಟಿನ ಹಿರಿಯ ಭಾಗವತ ಕೊರಗಪ್ಪ ನಾಯ್ಕ ಕಾಟುಕುಕ್ಕೆ ಯವರಿಗೆ ಯಕ್ಷೊತ್ಸವ ವಾಷರ್ಿಕ ಸನ್ಮಾನ ಸಮಾರಂಭ ಇತ್ತೀಚೆಗೆ ಬೆಜ್ಜದಲ್ಲಿ ಸಂಭ್ರಮದಿಂದ ಜರಗಿತು.
ರಾಮಚಂದ್ರ ಹೆಗ್ಡೆ ವೇದಿಕೆ ಅಧ್ಯಕ್ಷ ಗೋವಿಂದ ಹೆಗ್ಡೆ ಬೆಜ್ಜ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ನ್ಯಾಯವಾದಿ ಹಾಗೂ ಯಕ್ಷಗಾನ ಅರ್ಥಧಾರಿ ವಿಠಲ ಭಟ್ ಮೊಗಸಾಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಅಧ್ಯಾಪಕ ಹಾಗೂ ವಾಗ್ಮಿ ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣ ಗೈದರು, ಪಾತರ್ಿಸುಬ್ಬ ಯಕ್ಷಗಾನ ಕಲಾ ಕೇಂದ್ರದ ಮಾಜಿ ಅಧ್ಯಕ್ಷ ಶಂಕರ್ ರೈ ಮಾಸ್ತರ್, ಹವ್ಯಾಸಿ ಬರಹಗಾರ ಯೋಗೀಶ ರಾವ್ ಚಿಗುರುಪಾದೆ ಉಪಸ್ಥಿತರಿದ್ದು ಶುಭಹಾರೈಸಿದರು, ಯಕ್ಷಬಳಗ ಹೊಸಂಗಡಿಯ ಸಂಚಾಲಕ ಸತೀಶ ಅಡಪ ಸಂಕಬೈಲು ಕಾರ್ಯಕ್ರಮ ನಿರ್ವಹಿಸಿದರು.
ರಾಮಚಂದ್ರ ಹೆಗ್ಡೆ ವೇದಿಕೆಯ ಪದಾಧಿಕಾರಿಗಳಾದ ಮೋಹನ ಹೆಗ್ಡೆ ಬೆಜ್ಜ, ಕಿಶನ್ ಹೆಗ್ಡೆ ಬೆಜ್ಜ, ಸಚಿನ್ ಹೆಗ್ಡೆ ಬೆಜ್ಜ ಸನ್ಮಾನ ಸಮಾರಂಭ ನಡೆಸಿಕೊಟ್ಟರು. ಸಮಾರಂಭದಲ್ಲಿ ಕಲಾವಿದ ಮಂಥನ್ ಶೆಟ್ಟಿ ಆಡರ್ಿ ಅವರನ್ನು ಗೌರವಿಸಲಾಯಿತು.