ಕೇರಳ ರಾಜ್ಯ ಮಹಿಳಾ ಆಯೋಗ ಅದಾಲತ್
58 ದೂರುಗಳ ಪರಿಗಣನೆ : 27 ದೂರುಗಳು ಇತ್ಯರ್ಥ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೇರಳ ರಾಜ್ಯ ಮಹಿಳಾ ಆಯೋಗವು ನಡೆಸಿದ ಮೆಗಾ ಅದಾಲತ್ನಲ್ಲಿ 27 ದೂರುಗಳನ್ನು ಇತ್ಯರ್ಥಗೊಳಿಸಲಾಯಿತು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಆಯೋಗದ ಸದಸ್ಯೆ ಶಾಹಿದಾ ಕಮಾಲ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜರಗಿದ ಅದಾಲತ್ನಲ್ಲಿ ಒಟ್ಟು 58 ದೂರುಗಳನ್ನು ಪರಿಗಣಿಸಲಾಯಿತು. ಇದರಲ್ಲಿ 12 ದೂರುಗಳಿಗೆ ಸಂಬಂಧಿಸಿದಂತೆ ಪೊಲೀಸರು ಹಾಗೂ ವಿವಿಧ ಇಲಾಖೆಗಳಿಂದ ವರದಿ ಕೇಳಲಾಯಿತು. 4 ದೂರುಗಳಿಗೆ ಆರ್ಡಿಓರಿಂದ ವರದಿ ಕೇಳಲಾಗಿದೆ. 13 ದೂರುಗಳಿಗೆ ಸಂಬಂಧಿಸಿದಂತೆ ಅಗತ್ಯದ ಕ್ರಮ ಕೈಗೊಂಡು ಮುಂದಿನ ಸಭೆಯಲ್ಲಿ ಪರಿಗಣಿಸಲಾಗುವುದು. ಲೀಗಲ್ ಪ್ಯಾನಲ್ ಸದಸ್ಯೆಯರಾದ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ, ನ್ಯಾಯವಾದಿ ಕೆ.ಜಿ.ಬೀನಾ, ಮಹಿಳಾ ಸೆಲ್ ಎಸ್ಐ ಎಂ.ಜೆ.ಎಲ್ಸಮ್ಮ ಮೊದಲಾದವರು ಅದಾಲತ್ನಲ್ಲಿ ಭಾಗವಹಿಸಿದ್ದರು.
ಮಕ್ಕಳಿಂದ ಹೆತ್ತ ತಾಯಿ ನಿರ್ಲಕ್ಷ್ಯ :
ಅಸೌಖ್ಯ ಕಾಡುತ್ತಿರುವ ಹೊಸದುರ್ಗದ 78ರ ಹರೆಯದ ತಂಬಾನಿಯಮ್ಮರಿಗೆ ಮಾನಸಿಕ ನೋವು ನೀಡುತ್ತಿರುವುದು ಬೇರೆ ಯಾರೂ ಅಲ್ಲ. ಬೆಳೆಸಿ ದೊಡ್ಡವರನ್ನಾಗಿ ಮಾಡಿದ ಅವರ ಮಕ್ಕಳೇ. ಈ ತಾಯಿಗೆ ಮೂರು ಮಂದಿ ಹೆಣ್ಮಕ್ಕಳ ಸಹಿತ ನಾಲ್ವರು ಮಕ್ಕಳಿದ್ದಾರೆ. ಇವರಲ್ಲಿ ಆಥರ್ಿಕವಾಗಿ ಹಿಂದುಳಿದ ಕಿರಿಯ ಪುತ್ರಿಯೇ ಆಶ್ರಯ. ಇತರ ಮಕ್ಕಳೆಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ.
ಒಬ್ಬ ಪುತ್ರಿ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಇತರ ಮಕ್ಕಳು ಆಥರ್ಿಕವಾಗಿ ಸದೃಢರಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ತಮ್ಮ ಹೆತ್ತ ತಾಯಿಯನ್ನೇ ಕಡೆಗಣಿಸುತ್ತಿದ್ದಾರೆ. ಸ್ವಂತ ಹೆಸರಿನಲ್ಲಿರುವ ಮೂರೂವರೆ ಸೆಂಟ್ಸ್ ಭೂಮಿಯನ್ನು ಮಾರಾಟ ಮಾಡಲು ಕೂಡ ಇವರು ಬಿಡುವುದಿಲ್ಲ ಎಂದು ಮಹಿಳಾ ಆಯೋಗದ ಮುಂದೆ ಈ ತಾಯಿ ಕಣ್ಣೀರಿಟ್ಟರು.
ಶಾಲೆಯಲ್ಲಿ ಅಡುಗೆಯಾಳು ಮೊದಲಾದ ಕೆಲಸಗಳನ್ನು ಮಾಡಿ ಮಕ್ಕಳೆಲ್ಲರಿಗೂ ಶಿಕ್ಷಣ ನೀಡಿದ್ದರು. ಆದರೆ ವೃದ್ಧಾಪ್ಯದಲ್ಲಿ ತನಗೆ ಅವರಿಂದ ಯಾವುದೇ ಸಹಾಯ ಲಭಿಸುತ್ತಿಲ್ಲ ಎಂದು ಕಿರಿಯ ಪುತ್ರಿಯೊಂದಿಗೆ ಅದಾಲತ್ಗೆ ಆಗಮಿಸಿದ್ದ ತಂಬಾನಿಯಮ್ಮ ದೂರಿಕೊಂಡರು. ಅದನ್ನು ಸಮಗ್ರವಾಗಿ ಕೇಳಿಸಿಕೊಂಡ ಆಯೋಗವು ಎಲ್ಲಾ ಮಕ್ಕಳಿಗೆ ಮುಂದಿನ ಅದಾಲತ್ನಲ್ಲಿ ಹಾಜರಾಗುವಂತೆ ನೋಟೀಸ್ ಕಳುಹಿಸಲು ನಿರ್ಧರಿಸಲಾಯಿತು. ನಾಲ್ವರು ಮಕ್ಕಳು ತಾಯಿಯನ್ನು ನೋಡಿಕೊಳ್ಳಬೇಕು. ತಾಯಿಯ ಹೆಸರಿನಲ್ಲಿರುವ ಭೂಮಿ ಮಾರಾಟ ಮಾಡಲು ಅಡ್ಡಿ ಮಾಡಬಾರದು ಎಂದು ಆಯೋಗವು ಸ್ಪಷ್ಟಪಡಿಸಿದೆ.
ಅದಾಲತ್ನಲ್ಲಿ ಪರಿಗಣನೆಗೆ ಬಂದ ಹೆಚ್ಚಿನ ಪ್ರಕರಣಗಳು ಆಸ್ತಿಗೆ ಸಂಬಂಧಿಸಿದ ವಾಗ್ವಾದಗಳಾಗಿದ್ದವು. ಪರಸ್ಪರ ಸಹೋದರರೊಳಗೆ, ತಂದೆ - ತಾಯಿ ಮತ್ತು ಮಕ್ಕಳೊಳಗೆ, ನೆರೆಕರೆಯವರೊಂದಿಗೆ ಆಸ್ತಿ ವಿಷಯದಲ್ಲಿ ವಾಗ್ವಾದ ಎಂಬುದಾಗಿ ಮಹಿಳಾ ಆಯೋಗದ ಸದಸ್ಯೆ ಶಾಹಿದಾ ಕಮಾಲ್ ಹೇಳಿದರು.
ತಂಬಾನಿಯಮ್ಮರ ವಿಷಯದಲ್ಲಿ ಮೂವರು ಮಕ್ಕಳು ತಿರುಗಿ ಕೂಡ ನೋಡುವುದಿಲ್ಲ. ಆದರೆ ಇವರಿಗೆ ತಾಯಿಯ ಹೆಸರಿನಲ್ಲಿರುವ ಆಸ್ತಿಯ ಪಾಲು ಬೇಕು. ಹಲವರ ಬದುಕು ಆಸ್ತಿಯನ್ನೇ ಆಶ್ರಯಿಸಿಕೊಂಡಿರುತ್ತದೆ. ಉತ್ತಮ ಶಿಕ್ಷಣ, ಒಳ್ಳೆಯ ನೌಕರಿ ಇದೆ. ಆದರೆ ಹಲವರಿಗೆ ಒಳ್ಳೆಯ ಜೀವನ ಇಲ್ಲ ಎಂದು ಆಯೋಗವು ಅಭಿಪ್ರಾಯಪಟ್ಟಿತು.
ತನ್ನನ್ನು ಹಾಗೂ ತನ್ನ ಪತಿಯನ್ನು ಬದುಕಲು ಬಿಡದ ರೀತಿಯಲ್ಲಿ ಪತಿಯ ತಂದೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಮಾತ್ರವಲ್ಲದೆ ತಮ್ಮಿಬ್ಬರನ್ನು ಮನೆಯಿಂದ ಹೊರಹಾಕಿದ್ದು, ಬಟ್ಟೆಬರೆಗಳನ್ನು ಕೂಡ ತೆಗೆದುಕೊಳ್ಳಲು ಬಿಡುತ್ತಿಲ್ಲ ಎಂದು ಪತಿಯೊಂದಿಗೆ ಅದಾಲತ್ನಲ್ಲಿ ಹಾಜರಾದ ಆಯುವರ್ೇದ ವೈದ್ಯೆಯೋವರ್ೆ ದೂರು ನೀಡಿದರು. ಮೂರು ದಿನಗಳೊಳಗೆ ಇವರ ಬಟ್ಟೆಬರೆ ಪುಸ್ತಕಗಳನ್ನು ತೆಗೆದುಕೊಳ್ಳಲು ಬಿಡಬೇಕು ಎಂದು ದೂರವಾಣಿ ಮೂಲಕ ಪತಿಯ ತಂದೆಗೆ ಆಯೋಗವು ನಿದರ್ೇಶಿಸಿದೆ. ಅಲ್ಲದೆ ಮುಂದಿನ ಅದಾಲತ್ನಲ್ಲಿ ನೇರವಾಗಿ ಹಾಜರಾಗುವಂತೆ ಅವರಿಗೆ ಆದೇಶಿಸಲಾಯಿತು.
ಪೊಲೀಸರಿಂದ ಸಮರ್ಪಕ ವರದಿ ಇಲ್ಲ :
ಪೊಲೀಸರು ಸಮರ್ಪಕವಾಗಿ ವರದಿ ಸಲ್ಲಿಸದಿರುವುದರಿಂದ ಜಿಲ್ಲೆಯಲ್ಲಿ ಹಲವು ಪ್ರಕರಣಗಳನ್ನು ಪರಿಗಣಿಸಲು ಸಾಧ್ಯವಾಗುತ್ತಿಲ್ಲ ಎಂದು ಮಹಿಳಾ ಆಯೋಗ ಅಭಿಪ್ರಾಯಪಟ್ಟಿದೆ. ಕೇರಳದಲ್ಲಿ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿ ಪೊಲೀಸರ ವಿರುದ್ಧವೇ ಪ್ರಕರಣಗಳು ಸಾಕಷ್ಟಿವೆ. ಸರಿಯಾದ ಸಮಯಕ್ಕೆ ವರದಿ ನೀಡುವುದಿಲ್ಲ. ಅಲ್ಲದೆ ಹಾಜರಾಗುವುದೂ ಇಲ್ಲ. ಇದನ್ನು ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿರುವುದಾಗಿ ಆಯೋಗದ ಸದಸ್ಯೆ ಶಾಹಿದಾ ಕಮಾಲ್ ತಿಳಿಸಿದರು.
ಪೊಲೀಸರು ವರದಿ ಸಲ್ಲಿಸದಿರುವುದರಿಂದ ಈ ಅದಾಲತ್ನಲ್ಲಿ 4 ಪ್ರಕರಣಗಳನ್ನು ಮುಂದಿನ ಕ್ರಮಗಳಿಗಾಗಿ ಪರಿಗಣಿಸಲು ಸಾಧ್ಯವಾಗಲಿಲ್ಲ. ಇದು ಉತ್ತಮ ಬೆಳವಣಿಗೆಯಲ್ಲ. ಕೇರಳ ಮಹಿಳಾ ಸ್ನೇಹಿ ರಾಜ್ಯವಾಗಿದ್ದು, ಮಹಿಳೆಯರಿಗೆ ನ್ಯಾಯ ಲಭಿಸುವುದಕ್ಕಾಗಿ ರಾಜ್ಯ ಸರಕಾರ ಮತ್ತು ಮಹಿಳಾ ಆಯೋಗವು ಕಾರ್ಯವೆಸಗುತ್ತಿದೆ. ಆದ್ದರಿಂದ ಮಹಿಳೆಯರ ದೂರಿನ ಕುರಿತು ಪೊಲೀಸರು ನಿಖರವಾದ ವರದಿ ನೀಡಬೇಕು ಎಂದು ಆಯೋಗವು ಹೇಳಿತು.
ಯುವತಿಗೆ ವಾಟ್ಸ್ಆ್ಯಪ್ ಕಿರುಕುಳ :
ಮಹಿಳೆಯರ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಮಹಿಳೆ ಎಂದು ಹೇಳಿ ಪ್ರವೇಶಿಸಿದ ಪ್ರಕರಣ ಆರೋಪಿ ಹಾಗೂ ಸ್ನೇಹಿತ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ತನ್ನ ವಿವಾಹ ಸಂಬಂಧಗಳನ್ನು ತಡೆಯುತ್ತಿದ್ದಾನೆ ಎಂದು ಯುವತಿಯ ದೂರಿನಂತೆ ತಿಂಗಳೊಳಗೆ ತನಿಖೆ ನಡೆಸಿ ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಆಯೋಗವು ಸೈಬರ್ಸೆಲ್ ಎಸ್ಐಗೆ ನಿದರ್ೇಶಿಸಿದೆ. ಸಾಲ ಪಡೆದ ಹಣ ಹಿಂತಿರುಗಿಸಬೇಕು ಎಂದು ಹೇಳಿ ಮನೆಗೆ ನುಗ್ಗಿದ ಯುವಕ ತನ್ನನ್ನು ಮತ್ತು ಮಕ್ಕಳನ್ನು ಹಲ್ಲೆಗೈದಿದ್ದಾನೆ ಎಂಬ 85ರ ಹರೆಯದ ಮರಿಯಮ್ಮರ ದೂರಿನಂತೆ 15 ದಿನಗಳೊಳಗೆ ತನಿಖೆ ಕೈಗೊಂಡು ವರದಿ ನೀಡಲು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಯಿತು. ತೀರಾ ಅಸ್ವಸ್ಥರಾದ ಮರಿಯಮ್ಮ ಅವರಿಂದ ವಾಹನದ ಹತ್ತಿರ ತೆರಳಿ ಮಹಿಳಾ ಆಯೋಗದ ಸದಸ್ಯೆಯರು ದೂರು ಸ್ವೀಕರಿಸಿದರು.