HEALTH TIPS

No title

                ಹಿಂದೂ ಸಮಾಜೋತ್ಸವ ಯಶಸ್ವಿಗೆ ಮುಳ್ಳೇರಿಯ ಹವ್ಯಕ ಮಂಡಲ ಕರೆ
     ಪೆರ್ಲ: ಏಪ್ರಿಲ್ 27ರಂದು ಬದಿಯಡ್ಕದಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಎಲ್ಲಾ ವಲಯದ ಪ್ರತೀ ಮನೆಯ ಹೆಚ್ಚಿನ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮುಳ್ಳೇರಿಯ ಹವ್ಯಕ ಮಂಡಲದ ಸಭೆಯಲ್ಲಿ ಕರೆನೀಡಲಾಯಿತು.
ಕಾಟುಕುಕ್ಕೆಯ ಕುಂಚಿನಡ್ಕ ಗಣೇಶ ಕುಮಾರರ ಮನೆಯಲ್ಲಿ ಜರಗಿದ ಸಭೆಯನ್ನುದ್ದೇಶಿಸಿ ಮಂಡಲ ಉಪಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಪೈಸಾರಿ ಮಾತನಾಡಿದರು. ಮಂಡಲಾಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶ್ವಹಿಂದೂ ಪರಿಷತ್ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಉಳುವಾನ ಶಂಕರ ಭಟ್ ಹಿಂದೂಸಮಾಜೋತ್ಸವದ ಕುರಿತು ವಿವರವನ್ನು ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಸಂಘಚಾಲಕ ಗುಣಾಜೆ ಶಿವಶಂಕರ ಭಟ್ ಉಪಸ್ಥಿತರಿದ್ದರು. ಮಂಡಲ ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಏ.29ರಿಂದ ಮೇ.6ರ ತನಕ ಹೊಸನಗರದಲ್ಲಿ ನಡೆಯಲಿರುವ ಶ್ರೀ ಚಂದ್ರಮೌಳೀಶ್ವರ ಕ್ಷೇತ್ರದ ಪ್ರತಿಷ್ಠಾ-ಅಷ್ಟಬಂಧ -ಬ್ರಹ್ಮಕಲಶೋತ್ಸವದ ವಿವರಣೆಯನ್ನು ನೀಡಿ ಪಾಲ್ಗೊಳ್ಳಲು ಕರೆಯಿತ್ತರು. ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಬಾಲಸುಬ್ರಹ್ಮಣ್ಯ ಪರಪ್ಪೆ, ಕುಸುಮ ಪೆಮರ್ುಖ, ಡಾ|.ಡಿ.ಪಿ. ಭಟ್ ಕುಂಬಳೆ, ದೇವಕಿ ಪನ್ನೆ, ವೈ.ಕೆ. ಗೋವಿಂದ ಭಟ್ ತಮ್ಮ ವಿಭಾಗ ವರದಿಗಳನ್ನು ಮಂಡಿಸಿದರು. ಶಂಖನಾದ ಗುರುವಂದನೆಯೊಂದಿಗೆ ಪ್ರಾರಂಭವಾದ ಸಭೆಯು ಶಾಂತಿಮಂತ್ರ, ಶಂಖನಾದದೊಂದಿಗೆ ಮುಕ್ತಾಯವಾಯಿತು.
    ಏನಂತಾರೆ:
   ಏ.27ರಂದು ಹಿಂದೂ ಸಮಾಜೋತ್ಸವದ ಸಂದರ್ಭದಲ್ಲಿ ಗೋಹತ್ಯಾ ನಿಷೇಧಕ್ಕಾಗಿ ಶ್ರೀರಾಮಚಂದ್ರಾಪುರ ಮಠದ ವತಿಯಿಂದ `ಅಭಯಾಕ್ಷರ' ಸಹಿಸಂಗ್ರಹ ಅಭಿಯಾನ ನಡೆಸಲಾಗುವುದು. ಮಾತೆಯರು, ಮಹನೀಯರು ಇದರಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಾರತೀಯ ಗೋ ಸಂತತಿಯ ಸಂರಕ್ಷಣಾ ಕಾರ್ಯದಲ್ಲಿ ಕೈಜೋಡಿಸಬೇಕು.
   - ಪ್ರೊ.ಶ್ರೀಕೃಷ್ಣ ಭಟ್, ಮುಳ್ಳೇರಿಯ ಮಂಡಲ ಅಧ್ಯಕ್ಷರು.
   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries