ಪಡಿಞಾರೇಕುಳಂನಲ್ಲಿ ಭಾಗವತ ಸಪ್ತಾಹ
ಕುಂಬಳೆ: ಮುಜುಂಗಾವು ಪಡಿಞಾರೇಕುಳಂ ಶ್ರೀ ಕುಳಂಗರೆ ಭಗವತೀ ಧರ್ಮದೈವಗಳ ಹಾಗೂ ಪರಿವಾರ ದೈವಗಳ ಮತ್ತು ನಾಗಬ್ರಹ್ಮರ ಸನ್ನಿಧಿ ಪಡಿಞಾರೆಕುಳಂ ತರವಾಡು ನಲ್ಲಿ ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ಮಾರ್ಗದರ್ಶನದಲ್ಲಿ ಭಾಗವತ ಸಪ್ತಾಹ ಆಚಾರ್ಯರಾದ ಬ್ರಹ್ಮಶ್ರೀ ಪೆರಿಗಮನ ಶ್ರೀಧರನ್ ನಂಬೂದಿರಿಯವರ ನೇತೃತ್ವದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ - ಮಾಚರ್್ 29ರಂದು ಪ್ರಾರಂಭವಾಗಿದ್ದು ಎಪ್ರಿಲ್ 5ರ ವರೆಗೆ ನಡೆಯಲಿದೆ. ಪರಮಪಾವನ ಹಾಗೂ ಮುಕ್ತಿದಾಯಕವಾದ ಈ ಯಜ್ಞದ ಅಂಗವಾಗಿ ಶ್ರೀಮದ್ಭಾಗವತ ಪಾರಾಯಣ ಹಾಗೂ ಪ್ರವಚನ ಕಥಾಮೃತವು ಸತತ ಏಳುದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ವಿಷ್ಣು ಸಹಸ್ರನಾಮ ಪಾರಾಯಣ, ನಾಮ ಸಂಕೀರ್ತನೆ, ಪ್ರದಕ್ಷಣೆ ಹಾಗೂ ಭಾಗವತ ಪಾರಾಯಣ ಹಾಗೂ ಪ್ರವಚನ ನಡೆಯುತ್ತಿದೆ. ನಾಲ್ಕನೇ ದಿನವಾದ ಸೋಮವಾರ ಗಜೇಂದ್ರ ಮೋಕ್ಷ, ಕ್ಷೀರಸಾಗರ ಮಥನ - ಶಂಕರಮೋಹನ -ವಾಮನಾವತಾರ - ಮತ್ಸ್ಯಾವತಾರ - ಅಂಬರೀಷ ಚರಿತ್ರೆ - ಶ್ರೀರಾಮಾವತಾರ ಹಾಗೂ ಶ್ರೀ ಕೃಷ್ಣಾವತಾರದ ಕಥೆಯನ್ನು ವಾಚನ ಹಾಗೂ ವ್ಯಾಖ್ಯಾನ ಮಾಡಲಾಯಿತು. ಮಂಗಳವಾರ ಪೂತನೀ ಮೋಕ್ಷ- ಬಾಲಲೀಲೆ, ಕಾಳೀಯಮರ್ದನ-ಗೋವರ್ಧನೋದ್ಧರಣ- ಗೋವಿಂದಾಭಿಷೇಕ - ರಾಸನೃತ್ಯ, ಅಕ್ರೂರನ ಗೋಕುಲಾಗಮನ - ಕಂಸವಧೆ, ಉದ್ಧವ ದೌತ್ಯ - ರುಕ್ಮಿಣಿ ಸ್ವಯಂವರದ ಕಥಾಭಾಗದ ಪಾರಾಯಣ ನಡೆಯಲಿದೆ. ಆ ಬಳಿಕ ಸವರ್ೈಶ್ವರ್ಯ ದೀಪ ಪೂಜೆ ನಡೆಯಲಿದೆ.
ಮಾಚರ್್ 4ರಂದು ಸ್ಯಮಂತಕೋಪಖ್ಯಾನ, ರುಕ್ಮಿಣಿ-ಶ್ರೀಕೃಷ್ಣ ಪ್ರಣಯಕಲಹ, ಬಾಣಾಸುರನ ಕಥೆ, ನಾರದ ಪರೀಕ್ಷೆ, ರಾಜಸೂಯ, ಕುಚೇಲವೃತ್ತಾಂತ, ವೃಷ್ಣಿಗೋಪ ಸಂಗಮ, ದೇವಸ್ತುತಿ (ಶ್ರುತಿಗೀತೆ), ಸಂತಾನಗೋಪಾಲ, ಉದ್ಭವೋಪದೇಶ, ಹಂಸಾವತಾರದ ಕಥಾಭಾಗವನ್ನು ಪಾರಾಯಣ ಮಾಡಲಿದ್ದು ಅಂದು ಸಂಜೆ ಆರಕ್ಕೆ ಸವರ್ೈಶ್ವರ್ಯ ಪೂಜೆ, ಅವಲಕ್ಕಿ ಗಂಟು, ಪೀತಾಂಬರ, ಅವಲಕ್ಕಿ ಸಮರ್ಪಣೆ ನಡೆಯಲಿದೆ.
ಕೊನೆಯ ದಿನವಾದ ಏ. 5 ಗುರುವಾರ ಉದ್ಧವೋಪದೇಶ, ಭಿಕ್ಷು ಗೀತೆ,ಉದ್ಧವನ ಬದರೀಯಾತ್ರೆ, ಭಗವಂತನ ಸ್ವಧಾಮಗಮನ, ಬ್ರಹ್ಮೋಪದೇಶ, ಪರೀಕ್ಷಿತನ ಮುಕ್ತಿ, ಮಾಕರ್ಾಂಡೇಯ ಚರಿತ್ರೆ, ಭಾಗವತ ಸಮರ್ಪಣೆಯೊಂದಿಗೆ ಪಾರಾಯಣವು ಕೊನೆಗೊಳ್ಳುವುದು. ಆ ದಿನ ಮದ್ಯಾಹ್ನ 12ಕ್ಕೆ ಕಲಶಾಭಿಷೇಕ, ದೀಪಾರಾಧನೆ, ಆಚಾರ್ಯದಕ್ಷಿಣೆ ಜರಗಲಿದ್ದು ಬೆಲ್ಲದ ಪಾಯಸ ಮುಖ್ಯ ನೈವೇದ್ಯವಾಗಿರುತ್ತದೆ.