ಮೇ 5 ರಂದು ನವೀಕರಿಸಿದ ಪೊವ್ವಲ್ ಕೋಟೆ ಉದ್ಘಾಟನೆ
ಕಾಸರಗೋಡು: ಪರಂಪರಾಗತ ಪ್ರವಾಸೋದ್ಯಮ ಕೇಂದ್ರವಾಗಿ ನವೀಕರಿಸಿದ ಪೊವ್ವಲ್ (ಪೊಳಲಿ) ಕೋಟೆ ಮೇ 4 ರಂದು ಲೋಕಾರ್ಪಣೆಗೊಳ್ಳಲಿದೆ. ದೇಶದ ಪ್ರಮುಖ ರಾಜ ವಂಶಜರಾದ ಇಕ್ಕೇರಿ ನಾಯಕರು 17 ನೇ ಶತಮಾನದಲ್ಲಿ ನಿಮರ್ಿಸಿದ ಪೊವ್ವಲ್ ಕೋಟೆಗೆ ಸುಮಾರು 300 ವರ್ಷಗಳ ಇತಿಹಾಸವಿದೆ. 1985 ರಿಂದ ರಾಜ್ಯ ಪ್ರಾಚೀನ ವಸ್ತು ಇಲಾಖೆಯ ಅಧೀನತೆಯಲ್ಲಿದೆ.
8.44 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರುವ ಈ ಕೋಟೆ ಅವನತಿಯ ಸ್ಥಿತಿಯಲ್ಲಿತ್ತು. ಶಾಸಕ ಕೆ.ಕುಂಞಿರಾಮನ್ ಮತ್ತು ವಿವಿಧ ಸಂಘ ಸಂಸ್ಥೆಗಳ ನಿರಂತರ ಬೇಡಿಕೆಯ ಹಿನ್ನೆಲೆಯಲ್ಲಿ ಕೋಟೆಯನ್ನು ನವೀಕರಿಸಲು 52 ಲಕ್ಷ ರೂ. ಮಂಜೂರು ಮಾಡಲಾಗಿತ್ತು. ಕೋಟೆಯ ದುರಸ್ತಿ, ಕಾಲ್ನಡಿಗೆ ದಾರಿ, ಕೋಟೆಯ ಒಳಭಾಗದಲ್ಲಿರುವ ಕೆರೆ, ಬಾವಿ ಮೊದಲಾದವುಗಳನ್ನು ನವೀಕರಿಸಲಾಗಿದೆ. ಹನುಮಾನ್ ದೇವಸ್ಥಾನವನ್ನೂ ನವೀಕರಿಸಲಾಗಿದೆ. ಕೋಟೆಯ ಹೊರಭಾಗದಲ್ಲಿ ಕುಡಿಯುವ ನೀರು, ಶೌಚಾಲಯ, ಕಚೇರಿ ಕೊಠಡಿಗಳನ್ನು ನಿಮರ್ಿಸಲಾಗಿದೆ.