ಎಸ್ಪಿಸಿ ಬೇಸಿಗೆ ಶಿಬಿರ ಆರಂಭ
ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಸ್ಟುಡೆಂಟ್ ಪೋಲೀಸ್ ಕೇಡೆಟ್ 5 ದಿನಗಳ ವಸತಿಸಹಿತದ ಬೇಸಿಗೆ ರಜಾ ಶಿಬಿರವು ಬುಧವಾರ ಆರಂಭಗೊಂಡಿತು. ಶಿಬಿರವನ್ನು ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು ಕೆ ಉದ್ಘಾಟಿಸಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೃಷ್ಣ ಭಟ್ ಕೆ ಎನ್ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಸರಗೋಡು ಡಿವೈಎಸ್ ಪಿ, ವಿಶ್ವನಾಥ್, ಎಸ್ ಪಿ ಸಿ ನೋಡೆಲ್ ಆಫೀಸರ್ ಜ್ಯೋತಿ ಕುಮಾರ್, ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಕಾಸರಗೋಡು ಜಿಲ್ಲೆಯ 23 ಹೈಸ್ಕೂಲ್ ಗಳಿಂದ 650 ಮಕ್ಕಳು, 50 ಮಂದಿ ಅಧ್ಯಾಪಕರು ಮತ್ತು 50 ಮಂದಿ ಪೋಲೀಸ್ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.