HEALTH TIPS

No title

              ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ದಾಖಲಾದ ಸಿರಿಬಾಗಿಲು ಪ್ರತಿಷ್ಠಾನದ 'ಅಥರ್ಾಂತರಂಗ-6'
       ಕುಂಬಳೆ:  ಗಡಿನಾಡಿನ ಪ್ರಸಿದ್ದ ಸಾಂಸ್ಕೃತಿಕ ಸಂಸ್ಥೆ "ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು" ಇವರು ಯಕ್ಷಗಾನ ತಾಳಮದ್ದಳೆ ಹಿರಿಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ನಿದರ್ೇಶನದಲ್ಲಿ ನಡೆಸಿಕೊಂಡು ಬರುತ್ತಿರುವ ಸರಣಿ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕಾ ಅಧ್ಯಯನ ಶಿಬಿರದ ಆರನೇ ಕಾರ್ಯಕ್ರಮ "ಅಥರ್ಾಂತರಂಗ-6" ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನಾಧ್ಯಯನ ಕೇಂದ್ರದ ಸಹಯೋಗದೊಂದಿಗೆ ಮಂಗಳಗಂಗೋತ್ರಿ ಸೆನೆಟ್ ಹಾಲ್ನಲ್ಲಿ  ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನಾಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯೋಜಕತ್ವದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಜರಗಿತು.
    ಸಿರಿಬಾಗಿಲು ಪ್ರತಿಷ್ಠಾನದ ನೇತೃತ್ವದಲ್ಲಿ ಪ್ರಸಿದ್ದ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ಸಮರ್ಥ ನಿದರ್ೇಶನದೊಂದಿಗೆ  ಅಥರ್ಾಂತರಂಗ ಸರಣಿ ಕಾರ್ಯಕ್ರಮ ನಾಡಿನ ಉದ್ದಗಲಕ್ಕೂ ಕಾರ್ಯಕ್ರಮಗಳನ್ನು ನಡೆಸಿ ವಿದ್ವಾಂಸರಿಂದ ಪ್ರಶಂಸೆಗೊಳಗಾಗಿದ್ದು ಇದೀಗ ವಿದ್ವಾಂಸರ ಗರಡಿಯೆಂದೇ ಕರೆಯಲ್ಪಡುವ ವಿಶ್ವವಿದ್ಯಾನಿಲಯದಲ್ಲಿ ಯಶಸ್ವಿಯಾಗಿ ನಡೆಸಲ್ಪಟ್ಟದ್ದು ಕಾರ್ಯಕ್ರಮದ ಮಹತ್ವವವನ್ನು ತೋರಿಸಿತ್ತದೆ.
   ಕಾಲಮಿತಿಯಲ್ಲಿ ಪ್ರಸಂಗಗಳು ಹ್ರಸ್ವಗೊಳ್ಳುತ್ತಿರುವುದನ್ನು ಮನಗಂಡು ಹೇಗೆ ಕಾಲಮಿತಿಯೊಳಗೆ ಪೂರ್ಣಪ್ರಮಾಣದಲ್ಲಿ ಪ್ರಸಂಗ ಆಡಿತೋರಿಸಬಹುದು ಎಂಬುದನ್ನು ತೋರಿಸುವರೆ ಅಥರ್ಾಂತರಂಗದ ಭಾಗವಾಗಿ "ಕರ್ಣಪರ್ವ" ತಾಳಮದ್ದಳೆ ಪೂರ್ಣ ಪ್ರಮಾಣದಲ್ಲಿ  ಪ್ರದಶರ್ಿಸಲಾಯಿತು.
   ಕಲಾವಿದರಾಗಿ ಮುಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಸುಬ್ರಾಯ ಸಂಪಾಜೆ, ಗೋಪಾಲಕೃಷ್ಣ ನಾವಡ ಮಧೂರು, ಗಣೇಶ ಭಟ್ ನೆಕ್ಕರೆಮೂಲೆ,  ಉದಯ ಕಂಬಾರು,  ಮುರಲೀ ಮಾಧವ ಮಧೂರು, ಮಾ. ಅಮೋಘ ಸುರತ್ಕಲ್, ಪಾತ್ರಧಾರಿಗಳಾಗಿ  ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ರವಿರಾಜ ಭಟ್ ಪನೆಯಾಲ, ವಿಷ್ಣು ಶರ್ಮ ವಾಟೆಪಡ್ಪು, ವಿಜಯ ಶಂಕರ ಆಳ್ವ ಭಾಗವಹಿಸಿದ್ದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಮಾತನಾಡಿ ಮಾತಿನ ಮೂಲಕವೇ ಮೆರೆಯುತ್ತಿರುವ ತಾಳಮದ್ದಳೆಯಂತಹ ಕಲೆಗೆ ಸರಿ ಸಮಾನವಾದ ಕಲೆ ಬೇರೊಂದಿಲ್ಲ, ತಾಳಮದ್ದಳೆಯ ಅರ್ಥಧಾರಿಗಳು ಇಂದು ವಿಮಶರ್ೆಗಳಿಗೆ ಒಗ್ಗಿಕೊಂಡು ಶ್ರೀಮಂತ ಕಲೆಯ ಬೆಳವಣಿಗೆಗೆ ಸಾಕ್ಷಿಯಾಗ ಬೇಕು. ಅರ್ಥಧಾರಿಗಳು ಪ್ರತ್ಯಕ್ಷವಾಗಿ ಸಿಗುವ ಪ್ರಶಂಸೆಗಿಂತ ಪರೋಕ್ಷವಾಗಿ ವಿಮಶರ್ೆಗಳಿಗೆ ಒಗ್ಗಿಕೊಂಡು ಮುನ್ನಡೆಯುವುದು ಜವಾಬ್ದಾರಿಯಾಗಿದೆ ಎಂದರು ಎಂದರು.
   ವಿಶೇಷ ಆಹ್ವಾನಿತರಾಗಿ ಸರಕಾರಿ ಪ್ರಥಮದಜರ್ೆ ಕಾಲೇಜು ಮಂಗಳೂರು ಇದರ ಪ್ರಾಧ್ಯಾಪಕಿ ಡಾ. ನಾಗವೇಣಿ ಮಂಚಿ, ರಂಗಕಮರ್ಿ ಮೂತರ್ಿ ದೇರಾಜೆ, ಶ್ರೀಪತಿ ಕಲ್ಲೂರಾಯ, ವಿಮರ್ಶಕ  ಯಸ್.ಯನ್.ದಾಮೋದರ ಶರ್ಮ ಬಾರಕೂರು, ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧಕಿ ಡಾ. ರಾಜಶ್ರೀ ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದರು.
    ಮಂಗಳೂರು ವಿ.ವಿ. ಯಕ್ಷಗಾನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಹರೀಶ್ ಬಳಂತಿಮೊಗರು ನಿರೂಪಿಸಿ ರಾಮಕೃಷ್ಣ ಮಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೋಣಾಜೆ, ಜೆಸ್ಸಿಮೇರಿ ಡಿ ಸೋಜ, ಯಕ್ಷಮಂಗಳ ತಂಡದ ವಿದ್ಯಾಥರ್ಿಗಳು, ಪ್ರಾಧ್ಯಾಪಕರು ಸಂಶೋಧನಾ ವಿದ್ಯಾಥರ್ಿಗಳು ಭಾಗವಹಿಸಿದ್ದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries