HEALTH TIPS

No title

              ಕೈಕಂಬದಲ್ಲೀಗ ಮೂಗಿಗೆ ಕೈ
    ಉಪ್ಪಳ: ರಾಷ್ಟ್ರೀಯ ಹೆದ್ದಾರಿ 66 ರ ಉಪ್ಪಳ ಸನಿಹದ ಕೈಕಂಬ ಎಂಬಲ್ಲಿನ ಬಸ್ ನಿಲ್ದಾಣದ ಪರಿಸರ ಮಾಲಿನ್ಯಗಳ ರಾಶಿಯಿಂದ ಪ್ರಯಾಣಿಕರ ಹತಾಶೆಗೆ ಕಾರಣವಾಗುತ್ತಿದೆ.
  ಕೈಕಂಬ ಜಂಕ್ಷನ್ ಜನನಿಬಿಡ ಪ್ರದೇಶವಾಗಿದ್ದು,  ಬಾಯಾರು,ಕುರುಡಪದವು,ಬಳ್ಳೂರು ಸಹಿತ ಕನರ್ಾಟಕದ ವಿಟ್ಲ, ಪುತ್ತೂರು, ಅಡ್ಯನಡ್ಕ, ಪೆರುವಾಯಿ ಪ್ರದೇಶಗಳಿಗೆ ಸಂಚರಿಸುವ ಅಂತರಾಜ್ಯ ರಸ್ತೆಯೂ ಆಗಿದ್ದು, ಮಂಗಳೂರಿಗೂ ನೂರಾರು ಜನರು ಈ ಮೂಲಕ ಸಂಚರಿಸುತ್ತಾರೆ.   ದಿನನಿತ್ಯ ನೂರಾರು ಪ್ರಯಾಣಿಕರು ಇದೇ ಬಸ್ ನಿಲ್ದಾಣದಿಂದಲೇ ಮಂಗಳೂರಿನ ಬಸ್ಸಿಗೆ ಕಾಯಬೇಕಿದೆ.
   ಆದರೆ ಕೈಕಂಬದ ಬಸ್ ನಿಲ್ದಾಣ ಸಹಿತ ಸುತ್ತಮುತ್ತಲಿನ ಪರಿಸರ ಅಕ್ಷರಶಃ ಕಸದ ತೊಟ್ಟಿಯ ಮಧ್ಯ ವಿರಾಜಮಾನವಾಗಿದೆ. ವ್ಯಾಪಕ ದುನರ್ಾತದಿಂದ ಪ್ರಯಾಣಿಕರಿಗೆ ಕಿರಿಕಿರಿ ನೀಡುವ ಇಲ್ಲಿಯ ಕಸದ ವಿಲೇವಾರಿಗೆ ಸ್ಥಳಿಯ ಮಂಗಲ್ಪಾಡಿ ಗ್ರಾ.ಪಂ. ಆಗಲಿ, ಸ್ಥಳೀಯ ಸಂಘಟನೆಗಳಾಗಲಿ ಕ್ರಮ ಕೈಗೊಳ್ಳುತ್ತಿಲ್ಲ. ಜೊತೆಗೆ ಕಸಗಳನ್ನು ಒಂದೆಡೆ ಶೇಖರಿಸಲು ಕಸದ ತೊಟ್ಟಿಯಂತು ಇಲ್ಲಿ ಇಲ್ಲವೇ ಇಲ್ಲ. ಇನ್ನೇನು ಕೆಲವೇ ವಾರಗಳಲ್ಲಿ ಮಳೆಗಾಲದ ಆರಂಭ ಸಾಧ್ಯತೆಯಿದ್ದರೂ ಸಂಬಂಧಪಟ್ಟವರು ಎಚ್ಚರಿಕೆಯಿಂದ ಇಲ್ಲಿಯ ಮಾಲಿನ್ಯಕ್ಕೆ ಕ್ರಮಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳ ಸಹಿತ ವಿವಿಧ ಸವಾಲುಗಳು ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಲಿದೆ. ಇನ್ನದರೂ ಸಂಬಂಧಪಟ್ಟವರು ಕೈಕಂಬ ಪರಿಸರದ ಕಸ, ಮಾಲಿನ್ಯ ನಿರ್ವಹಣೆಗೆ ಕ್ರಮಕೈಗೊಳ್ಳಬೇಕಿದೆ.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries