ಉದ್ಯಾವರ ಜಮಾಅತಿಗೆ ದೈವಗಳ ಭೇಟಿ= ಅರಸು ಕ್ಷೇತ್ರ ದೈವ ಪಾತ್ರಿಗಳು ಹಾಗೂ ಪ್ರತಿನಿಧಿಗಳಿಂದ ಉದ್ಯಾವರ ಜಮಾಅತ್ಗೆ ಐತಿಹಾಸಿಕ ಭೇಟಿ ನೀಡಿ ಉತ್ಸವಕ್ಕೆ ಆಹ್ವಾನ
ಮಂಜೇಶ್ವರ: ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀ ಅರಸು ದೈವಗಳು ವರ್ಷಂಪ್ರತಿಯ ವಾಡಿಕೆಯಂತೆ ಶುಕ್ರವಾರ ಮಧ್ಯಾಹ್ನ ಅರಸು ದೈವಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗು ಸಹಸ್ರಾರು ಹಿಂದೂ ಬಾಂಧವರು ಉದ್ಯಾವರ ಸಾವಿರ ಜಮಾಅತ್ಗೆ ಭೇಟಿ ನೀಡಿದರು. ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ವಾಷರ್ಿಕ ಜಾತ್ರೋತ್ಸವದ ಸಲುವಾಗಿ ಪ್ರಾಚೀನ ಕಾಲದಿಂದಲೇ ನಡೆದು ಕೊಂಡು ಬರುತ್ತಿರುವ ಅರಸು ದೈವಗಳ ಜಮಾಅತ್ ಭೇಟಿ ಇಂದಿಗೂ ಹಿಂದೂ ಮುಸ್ಲಿಂ ಭಾವೈಕ್ಯಕ್ಕೊಂದು ಪ್ರತೀಕವಾಗಿದೆ.
ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಅನುಷ್ಠಾನ ವಾಡಿಕೆಯಾಗಿದೆ. ಪ್ರಸ್ತುತ ವರ್ಷ ಏಪ್ರಿಲ್ 20 ರಂದು ಶುಕ್ರವಾರ ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು ಮಧ್ಯಾಹ್ನ 1.30 ರ ಹೊತ್ತಿಗೆ ಜಮಾಅತ್ ಗೆ ತಲುಪಿದವು .ಈ ವೇಳೆ ಜುಮಾ ನಮಾಝ್ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಪ್ರತಿನಿಧಿಗಳು ಹಾಗು ಸಹಸ್ರಾರು ಮುಸ್ಲಿಂ ಬಾಂಧವರು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿಯ ಸ್ವಾಗತ ನೀಡಿದರು.ದೈವ ಪಾತ್ರಿಗಳು ಜಮಾಅತ್ನೊಳಗೆ ಪ್ರವೇಶಿಸಿ ಮಸೀದಿ ಮುಂಭಾಗದಲ್ಲಿ ಜಮಾಅತ್ನ ಸರ್ವ ಮುಸ್ಲಿಂ ಬಾಂಧವರನ್ನು ಮಾಡ ಅರಸು ದೈವಗಳ ಜಾತ್ರೋತ್ಸವಕ್ಕೆ ಅಧಿಕೃತ ಆಹ್ವಾನವಿತ್ತಿತು.
ಮೇ 9 ರಿಂದ 12 ರ ತನಕ ಮಾಡ ಕ್ಷೇತ್ರದಲ್ಲಿ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ಸಾವಿರ ಜಮಾಅತ್ ವ್ಯಾಪ್ತಿಯಲ್ಲಿರುವ ಎಲ್ಲಾ ಮುಸ್ಲಿಂ ಬಾಂಧವರು ಕೂಡಾ ಪಾಲ್ಗೊಲ್ಲುವುದು ಇಲ್ಲಿಯ ವಿಶೇಷತೆಯಾಗಿದೆ. ಈ ಕ್ಷೇತ್ರದಲ್ಲಿ ಜಾತ್ರೆ ನಡೆಯುವ ನೇಮೋತ್ಸವ ದಿನ ಜಮಾಅತ್ ಅಧಿಕೃತರು ಕೂರಲು ದೇವಸ್ಥಾನದ ಕಟ್ಟೆಯಲ್ಲಿ ವಿಶೇಷವಾದ ಸ್ಥಳವನ್ನು ನೀಡಲಾಗುತ್ತದೆ.ಜೊತೆಗೆ ದೈವಗಳು ಆಶೀರ್ವದಿಸಿದ ಮಲ್ಲಿಗೆ ಹೂವುಗಳನ್ನು ಕೂಡಾ ಜಮಾಅತ್ ಪ್ರತಿನಿಧಿಗಳಿಗೆ ನೀಡಲಾಗುತ್ತದೆ.
ಕಾಣರ್ಿಕದ ಉದ್ಯಾವರ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಬೇಧಬಾವವಿಲ್ಲದೆ ಹಿಂದೂ ಮುಸಲ್ಮಾನರು ಪಾಲ್ಗೊಳ್ಳುದು ಇಲ್ಲಿಯ ವಿಶೇಷತೆಯಾಗಿದೆ. ಜಮಾಅತ್ ಭೇಟಿಗೆ ಉದ್ಯಾವರ ಸಾವಿರ ಜಮಾಅತ್ ವತಿಯಿಂದ ಸೂಫಿ ಹಾಜಿ, ಅಬೂಬಕ್ಕರ್ ಮಾಹಿನ್ ಹಾಜಿ, ಮುಸ್ತಫ ಉದ್ಯಾವರ, ಪಿ ಎ ಹನೀಫ್ ಇವರ ನೇತೃತ್ವದಲ್ಲಿ ಬರ ಮಾಡಿಕೊಳ್ಳಲಾಯಿತು.
ಉದ್ಯಾವರ ಶ್ರೀ ಅರಸು ದೈವಗಳ ಮುಖ್ಯಸ್ಥರಾದ ಮಂಜು ಭಂಡಾರಿ, ದುಗ್ಗ ಭಂಡಾರಿ, ತಿಮ್ಮ ಭಂಡಾರಿ,ಡಾ.ಜಯಪಾಲ ಶೆಟ್ಟಿ, ರಘು ಶೆಟ್ಟಿ ಹಾಗೂ ಎರಡು ವರ್ಣ ನಾಲ್ಕು ಗ್ರಾಮದವರು ಸಹಿತ ಹಲವರು ಭೇಟಿಯಲ್ಲಿ ಪಾಲ್ಗೊಂಡರು.