HEALTH TIPS

No title

              ಸ್ವರ್ಗ ಸದೃಶ ತಂಗುದಾಣ ಇನ್ನು ಸ್ವರ್ಗದಲ್ಲೂ: ಸರಕಾರದ ಅನುದಾನಕ್ಕೆ ಕಾಯದೇ ಸ್ವರ್ಗದಲ್ಲಿ ನಿಮರ್ಾಣಗೊಂಡಿದೆ ನಯನ ಮನೋಹರ ಬಸ್ ತಂಗು ನಿಲ್ದಾಣ
    ಪೆಲ9 : ಕಲಾತ್ಮಕ ದೃಶ್ಯಗಳು ಮನಸ್ಸು, ಬುದ್ದಿಗಳ ಧನಾತ್ಮಕತೆಗೆ ಕಾರಣವಾಗಿ ವಿಶಾಲತೆ ಮೂಡಿಸುತ್ತದೆ ಎಂಬ ಅನುಭವಿಗಳ ನುಡಿಯಂತೆ ಯುವಕ ಸಂಘಟನೆಯೊಂದರ ನಡೆ ಇತರೆಡೆಗಳಿಗೆ ಮಾದರಿಯಾಗಲಿದೆ.
   ಇತ್ತೀಚೆಗೆ ನವನಿಮರ್ಾಣದೊಂದಿಗೆ ಬ್ರಹ್ಮಕಲಶೋತ್ಸವ ನಡೆದ ಸ್ವರ್ಗ ಮಲ್ಲೆತ್ತಡ್ಕ ಜಟಾಧಾರಿ ಮೂಲಸ್ಥಾನಕ್ಕೆ ತಿರುಗುವ ರಸ್ತೆ ಬದಿಯಲ್ಲಿ ಶಾಸ್ತಾ ಯೂತ್ ಕ್ಲಬ್ ಎಂಬ ಯುವ ಸಂಘಟನೆಯು ಪ್ರಕೃತಿಯ ಸೊಬಗಿನಲ್ಲಿ ಕಂಗೊಳಿಸುತ್ತಿರುವ ಪ್ರದೇಶದಲ್ಲೇ ನಯನ ಮನೋಹರ ಚಿತ್ತಾರದೊಂದಿಗೆ ಬಸ್ ತಂಗು ನಿಲ್ದಾಣವನ್ನು ನಿಮರ್ಿಸಿ ಮಲೆತ್ತಡ್ಕ , ಪೆರಿಕ್ಕಾನ , ದುಗ್ಗಜ್ಜಮೂಲೆ ಪ್ರದೇಶಗಳ ಬಸ್ ಅಥವಾ ಇತರ ವಾಹನಗಳನ್ನು ಕಾಯುವ  ಜನರಿಗೆ ಮಳೆ ಬಿಸಿಲಿನಿಂದ ಮುಕ್ತಿಯನ್ನು ನೀಡಿದೆ ಮಾತ್ರವಲ್ಲದೆ ಈ ತಂಗು ನಿಲ್ದಾಣ ಸಂಪೂರ್ಣ ವರ್ಣ ರಂಜಿತ ಚಿತ್ತಾರದಿಂದ ಕೂಡಿದ್ದು "ಸೇವ್ ವಾಟರ್" ಎಂಬ ಚಿತ್ರ ಸಂದೇಶ ಶಾಸ್ತಾ ಯೂತ್ ಕ್ಲಬ್ ನ ಸದಸ್ಯರ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ.
     ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಆಲಂಕಾರಿಕವಾಗಿ ನಿಮರ್ಾಣಗೊಂಡ  ಈ ಬಸ್ ತಂಗುದಾಣ ನಿಮರ್ಾಣದ ರುವಾರಿಗಳು ಬಿ.ಎ ಪದವೀಧರ ಸದ್ಯ ಪಿ ಎಸ್ ಸಿ ಕೋಂಚಿಂಗ್ ತರಬೇತಿಗೆ ಹೋಗುತ್ತಿರುವ ಉದಯ ರಾಜ್, ಬೆಂಗಳೂರು ಟೂಲ್ ಆಂಡ್ ಡೈ ತರಬೇತಿ ಮುಗಿಸಿ ಕೆಲಸ ಹುಡುಕುತ್ತಿರುವ ಮಹೇಶ್  ,ಮಂಗಳೂರು ಖಾಸಗೀ ಸಂಸ್ಥೆಯೊಂದರ  ಧ್ವನಿ-ಬೆಳಕು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ಯಿರುವ ರಮೇಶ್ ಸೇರಿ ಹತ್ತು ಮಂದಿ ಜತೆಗೂಡಿ ನಿಮರ್ಿಸಿದ ಈ ಬಸ್ಸು ತಂಗುದಾಣವನ್ನು ಅದ್ಭುತ  ಚಿತ್ರಗಳನ್ನು ರಚಿಸಿ ನಯನ ಮನೋಹರ ವಾಗಿಸಿದವರು ಮಂಗಳೂರಿನಲ್ಲಿ ಮಹಾಲಸ ವಿಶುವಲ್ ಆಟ್ಸರ್್ ಕೋಚಿಂಗ್ ವಿದ್ಯಾಥರ್ಿ  ಸುನಿಲ್ ಭರಣ್ಯ .
    ಬಿದಿರು, ಕಂಗಿನ ಸಲಾಕೆ, ಸೋಗೆ, ಮಡಲುಗಳನ್ನು ಉಪಯೋಗಿಸಿ ನಿಮರ್ಿಸಿದ ಈ ಬಸ್ ತಂಗುದಾಣವು ಮಳೆ ನೀರು ಒಳಗೆ ನುಸುಳದಂತೆ ಟಪರ್ಾಲ್ ಅಳವಡಿಸಲಾಗಿದ್ದು ಬಿಸಿಲು ಮಳೆಗಳೆರಡರಿಂದಲೂ ರಕ್ಷಣೆ ನೀಡುತ್ತಿದೆ. ಅಗತ್ಯವಾದ ಕಂಗು, ಬಿದಿರು ಮೊದಲಾಗಿ ಸ್ಥಳೀಯರಾದ ಸ್ವರ್ಗ ಶಾಲಾ ವ್ಯವಸ್ಥಾಪಕ ಹಾಗೂ ಜಟಾಧಾರಿ ಮೂಲಸ್ಥಾನದ ಜೀಣರ್ೋದ್ಧಾರ ಸಮಿತಿ ಸದಸ್ಯರಾದ ಹೃಷಿಕೇಶ್ ವಿ ಎಸ್ , ಗೋವಿಂದ ಭಟ್ ಮೊಳಕ್ಕಾಲು ಹಾಗೂ ವಿವೇಕಾನಂದ ಬಿ.ಕೆ ಅವರು ನೀಡಿದ್ದರೆ ಮೇಲ್ಛಾವಣಿಗೆ ಹೊದಿಸಲಾದ  ಟಪರ್ಾಲ್ ಅನ್ನು ನವೀನ್ ವಿ.ಎಸ್ ಅವರು ನೀಡಿರುತ್ತಾರೆ.
   ಮಳೆ ಬಿಸಿಲಿನಿಂದ ರಕ್ಷಣೆಗೆ  ಬಸ್ಸು  ತಂಗು ನಿಲ್ದಾಣಕ್ಕಾಗಿ ನಿರಂತರ ಮೌಖಿಕ ಮನವಿ ನೀಡಿದ್ದರೂ ಮೌನವೇ ಉತ್ತರವಾದಾಗ ಅದನ್ನೇ ಪ್ರೇರಣೆಯನ್ನಾಗಿಸಿ  ಕೇವಲ ಹತ್ತು ದಿನಗಳಲ್ಲಿ ಬಿಡುವಿನ ವೇಳೆಯಲ್ಲಿ ನಿಮರ್ಾಣಗೊಂಡ ಈ ಬಸ್ ತಂಗುದಾಣಕ್ಕೆ  ರೂಪಾಯಿ ಮುನ್ನೂರು ಸಾಗಾಟ ವೆಚ್ಚ ಹಾಗೂ ಒಂಭೈನೂರು ರೂಪಾಯಿಯ ಬಣ್ಣ ಸೇರಿ ಸರಿ ಸುಮಾರು ಮೊತ್ತ ರೂ ಒಂದೂವರೆ ಸಾವಿರದಷ್ಟು   ವ್ಯಯವಾಗಿರುವುದಾಗಿ ತಂಗುನಿಲ್ದಾಣದ  ನಿಮರ್ಾಣ ತಂಡದ  ರುವಾರಿಯಲ್ಲೊಬ್ಬರಾದ  ಉದಯರಾಜ್ ಅವರು ನಮ್ಮ ಪ್ರತಿನಿಧಿಗೆ ತಿಳಿಸಿರುತ್ತಾರೆ.
   ಬಿಡುವಿನ ವೇಳೆಗಳಲ್ಲಿ ಶಾಸ್ತಾ ನಾಸಿಕ್ ಬೇಂಡ್ ಟ್ರೂಪ್ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ , ಧಾಮರ್ಿಕ , ಆಟೋಟ ಕಲಾ ಮೇಳಗಳಲ್ಲಿ ಚೆಂಡೆ ಮೇಳೈಸುವುದರಲ್ಲಿ ಸಕ್ರಿಯರಾಗಿರುತ್ತಾರೆ 
ಆಥರ್ಿಕವಾಗಿಯೂ ಸಾಮಾಜಿಕವಾಗಿಯೂ ಹಿಂದುಳಿದ ವಿಭಾಗಕ್ಕೊಳಪಟ್ಟ
ಈ ಸಂಘದ ಸದಸ್ಯರು. 
ಒಟ್ಟಿನಲ್ಲಿ ವಾಹನದಲ್ಲಿ ಪ್ರಯಾಣಿಕರನ್ನು "ಒಂದು ಕ್ಷಣ ಆಗಮಿಸಿ ಉಪವಿಷ್ಟರಾಗಿ  ದಣಿವಾರಿಸಿ ತೆರಳಿ" ಎಂಬ ಮೌನ ಆಹ್ವಾನದೊಂದಿಗೆ ಕೈ ಬೀಸಿ ಕರೆಯುವಂತಿದೆ.
  ಚಿತ್ರಕಾರ ಸುನಿಲ್ ಭರಣ್ಯ ಅವರ ಸಂಪರ್ಕ ಸಂಖ್ಯೆ :  9535185693




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries