HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬಾಯಾರು ಬಂಡಿಮಾರುಜಾತ್ರೆ ಸಮಾಪ್ತಿ, 97 ವರ್ಷಗಳ ನಂತರ ಬಂಡಿಯ ಮೇಲೆ ನಿಂತ ಸುದೆಂಬಳ ಮಾನ್ಯಂತಾಯರು
    ಉಪ್ಪಳ: ಐದು ದಿನಗಳ ಬಾಯಾರು ಬಂಡಿಮಾರು ಜಾತ್ರೆಯು ಸಂಭ್ರಮ ಸಡಗರದೊಂದಿಗೆ ಭಾನುವಾರ ಪೂರ್ಣಗೊಂಡಿತು. ಸ್ಥಳ ದೈವ ಮಲರಾಯ ಸೇರಿದಂತೆ ಸಪರಿವಾರ ದೈವಂಗಳ ನೇಮ ಭಕ್ತಿ ಭಾವದೊಂದಿಗೆ ವಿಜ್ರಂಭಣೆಯಿಂದ ಜರಗಿತು. ಭಾನುವಾರ ಸಾಯಂಕಾಲದಂದು ಮಲರಾಯ ನೇಮ ನಡುಬಂಡಿ ಉತ್ಸವ ನಡೆದು, 97 ವರ್ಷಗಳ ನಂತರ ಪ್ರಥಮ ಬಾರಿಗೆ ಮಾನ್ಯಂತಾಯ ಉಪಾದಿ ಸ್ವೀಕರಿಸಿದ ಸುದೆಂಬಳ ಮನೆತನದ ಗುರಿಕಾರ ಶ್ರೀನಿವಾಸ ಭಟ್ಟರು ಬಂಡಿಯ ಮೇಲೆ ನಿಂತು ಜಾತ್ರೆಯ ವಿಶೇಷತೆ ಮತ್ತು ಮಹತ್ವವನ್ನು ಇಮ್ಮಡಿಯಾಗಿಸಿದರು. ಆಕರ್ಷಣೀಯ ನಡು ಬಂಡಿ ಉತ್ಸವನ್ನು ಕಂಡ ಹಲವು ಸಹಸ್ರ ಭಕ್ತಾಭಿಮಾನಿಗಳು ಭಕ್ತಿ ಭಾವದೊಂದಿಗೆ ಪುನೀತರಾದರು. ಸೋಮವಾರ ಅಪರಾಹ್ನ ಪಿಲಿಚಾಮುಂಡಿ ನೇಮ, ಸಾಯಂಕಾಲ ಕಡೇ ಬಂಡಿ ಉತ್ಸವ ಸಹಿತ ವಾಲಸರಿಯ ನಂತರ ಧ್ವಜಾವರೋಹಣದೊಂದಿಗೆ ಬಂಡಿಮಾರು ಜಾತ್ರೆ ಸಮಾಪ್ತಿಗೊಂಡಿತು.
  ಭಾನುವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಸಾಧನಾ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷೆ ಅಕ್ಷತಾ ಬಜ್ಪೆ ಧಾಮರ್ಿಕ ಉಪನ್ಯಾಸ ನೀಡಿದರು. ಬದಲಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಸಂಸ್ಕೃತಿಯ ಅರಿವು ಭಾವಿ ಜನಾಂಗಕ್ಕೆ ಆಗಬೇಕಿದೆ. ವಿವಿಧ ಆಚರಣೆಗಳು ಸಹಿತ ಧರ್ಮ ಪರಂಪರೆಯ ಬಗ್ಗೆ ಮಕ್ಕಳಲ್ಲಿ ಅರಿವು ಮತ್ತು ತಿಳುವಳಿಕೆ ಮೂಡಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾದುದಾಗಿದೆ ಎಂದರು. ಎಳೆಯರಲ್ಲಿ ಆಚಾರ ವಿಚಾರಗಳು ಮೈಗೂಡಿಸಿಕೊಳ್ಳುವಂತಾಗಲು ಸಮಾಜ ಸಮುದಾಯಗಳು ಶ್ರಮಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
  ಕ್ಯಾಂಪ್ಕೋ ನಿದರ್ೇಶಕ ಬಾನೊಟ್ಟು ಬಾಲಕೃಷ್ಣ ರೈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಭಾರತೀಯ ಸೇನೆಯ ಮಾಜಿ ಸೈನಿಕ ಪೆರುವೋಡಿ ವಸಂತ ಕೃಷ್ಣ ಶರ್ಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಂಗನಾಥ ಶೆಟ್ಟಿ ಪಟ್ಲಗುತ್ತು, ಎನ್.ಶಂಕರ ಬೆರಿಪದವು, ಆನಂದ ಪದ್ಯಾಣ, ನಿಟ್ಟೋಣಿ ಶ್ರೀಪಾದ ಇವರನ್ನು ಕ್ಷೇತ್ರ ಉತ್ಸವ ಸಮಿತಿ ವತಿಯಿಂದ ಅಭಿನಂದಿಸಲಾಯಿತು.ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ ಗೌರವ ಉಪಸ್ಥಿತಿಯಲ್ಲಿ ದೇವಸ್ಥಾನ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಸರವು ಗಣಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಓಂ ಶ್ರೀ ಬದಿಯಾರು ಪ್ರಾಯೋಜಿಸಿದ ಆರ್ಯನ್ಸ್ ಡ್ಯಾನ್ಸ್ ಮಂಗಳೂರು ಇವರಿಂದ ನೃತ್ಯ ವೈಭವ ನಡೆಯಿತು. ಸೋಮವಾರದಂದು ವೈಷ್ಣವಿ ನಾಟ್ಯನಿಲಯ ಪುತ್ತೂರು ಇದರ ಬಾಯಾರು ಶಾಖಾ ವಿದ್ಯಾಥರ್ಿಗಳಿಂದ ಭರತ ನಾಟ್ಯ ಪ್ರಸ್ತುತಿ, ಧ್ವಜಾವರೋಹಣದ ನಂತರ ದೇವದಾಸ್ ಕಾಪಿಕಾಡ್ ನಿದರ್ೇಶನದ ಪನಿಯರೆ ಆವಂದಿನ ನಾಟಕ ಪ್ರದರ್ಶನಗೊಂಡಿತು. ಮೇ.2 ರಂದು ಬಂಡಿಮಾರು ಕೊರತಿ ಗುಳಿಗ ನೇಮವು ದೈವಸ್ಥಾನ ಪರಿಸರದಲ್ಲಿ ನಡೆಯಲಿದೆ.
 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries