ಜಲ ಸಂರಕ್ಷಣೆಯ ಗಂಭೀರತೆಯ ಬಗ್ಗೆ ಕಾರ್ಯಪ್ರವೃತ್ತರಾಗಬೇಕು-ಪಿ.ಡಿ.ಟಿ.ಆಚಾರ್ಯ
ಕುಂಬಳೆ: ಮುಂದಿನ ಕಾಲಘಟ್ಟವು ವೈಜ್ಞಾನಿಕವಾಗಿ ಎಲ್ಲಾ ಅಭಿವೃದ್ದಿ ಗಳ ಏರುಗತಿಯ ಸೌಕರ್ಯಗಳಿಂದ ಕೂಡಿರುವುದಾದರೂ ಜೀವಜಾಲಗಳು ಅತ್ಯಗತ್ಯ ಜಲ ಲಭ್ಯತೆಯ ಭೀಕರತೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಲೆಮಾರನ್ನು ಲಕ್ಷ್ಯದಲ್ಲಿರಿಸಿ ಗಂಭೀರ ಯೋಜನೆಗಳ ಅನುಷ್ಠಾನ ಅಗತ್ಯವಿದೆ ಎಂದು ಲೋಕಸಭೆಯ ಮಾಜೀ ಸೆಕ್ರಟರಿ ಜನರಲ್ ಪಿ.ಡಿ.ಟಿ.ಆಚಾರ್ಯ ತಿಳಿಸಿದರು.
ಮಾನವಹಕ್ಕು ಸಂರಕ್ಷಣಾ ಮಿಷನ್ ಕೋಝಿಕ್ಕೋಡ್ ವಲಯದ ನೇತೃತ್ವದಲ್ಲಿ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರ ಸಮೀಪದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಕಾಯರ್ಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿ ಮತ್ತು ವಾತಾವರಣದ ಅಸಮತೋಲನದಿಂದ ವ್ಯಾಪಕ ಪ್ರಮಾಣದಲ್ಲಿ ಭೂಖಂಡ ಬಿಸಿಯೇರುತ್ತಿರುವುದು ಕಳವಳಕಾರಿಯಾಗಿದ್ದು, ಜೊತೆಗೆ ಜಲದ ಲಭ್ಯತೆ ಮರೀಚಿಕೆಯಾಗುವ ಭೀತಿ ಎದುರಾಗಿದೆ. ಇದು ವ್ಯಾಪಕ ಅಶಾಂತಿಗೆ ಕಾರಣವಾಗಲಿದ್ದು, ಈಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೊಡಿಸಬೇಕೆಂದು ಅವರು ಕರೆನೀಡಿದರು.
ಮಾನವಹಕ್ಕು ಸಂರಕ್ಷಣಾ ಮಿಷನ್ ಸಂಸ್ಥಾಪಕ, ರಾಷ್ಟ್ರೀಯ ಸಮಿತಿ ಅಧ್ಯಕ್ಷ ಪ್ರಕಾಶ್ ಚೆನ್ನಿತ್ತಲ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರಾಜ್ಯ ಕಾರ್ಯದಸರ್ಿ ರಾಧಾಮಣಿ ಅಮ್ಮ, ಖಜಾಂಜಿ ಎಂವಿ.ಜಿ.ನಾಯರ್, ವಿ.ಕೆ.ಸತೀಶನ್, ಕೆ.ಕೈಲಾಸನಾಥನ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಮೋಹನ್ ಐಸಾಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಬಳಿಕ ವಿವಿಧ ಗಣ್ಯರಿಂದ ತರಬೇತಿಗಳು ನಡೆಯಿತು. ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ನಿವೃತ್ತವ ಪೋಲೀಸ್ ಮಹಾನಿದರ್ೇಶಕ ಲಂಬೋದರನ್ ಮೊದಲಾದವರು ತರಗತಿ ನಡೆಸಿದರು.ಸಂಯೋಜಕ ಅಮೀರ್ ಛಾಪಾ ಎರಡು ದಿನಗಳ ಕಾಯರ್ಾಗಾರದ ನೇತೃತ್ವ ವಹಿಸಿರುವರು.