HEALTH TIPS

No title

             ಭೂಮಿಕಾ ಪ್ರತಿಷ್ಠಾನದ ಕಲಾಸೇವೆ ಸ್ತುತ್ಯರ್ಹ-ಎಡನೀರು ಶ್ರೀ
   ಬದಿಯಡ್ಕ: ಹೊಸ ತಲೆಮಾರಿನ ವಿದ್ಯಾಥರ್ಿಗಳ ರುಚಿ ಬದಲಾಗುತ್ತಿದೆ. ಆಸಕ್ತಿ, ಹವ್ಯಾಸಗಳು ದಿಕ್ಕುತಪ್ಪಿದ್ದು, ಮರಳಿ ಪರಂಪರೆಗೆ ತರುವ ಯತ್ನಗಳು ಆಗಬೇಕು. ಭೂಮಿಕಾ ಪ್ರತಿಷ್ಠಾನದ ನಿರಂತರ ಚಟುವಟಿಕೆ ಈ ನಿಟ್ಟಿನಲ್ಲಿ ಸದಾಶಯಯುಕ್ತವಾಗಿದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು.
   ಉಡುಪುಮೂಲೆಯ ಭೂಮಿಕಾ ಪ್ರತಿಷ್ಠಾನ ಗುರುವಾರ ಸಂಜೆ ಎಡನೀರು ಸ್ವಾಮೀಜೀಸ್ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆಯವರ ನೂತನ ಹವ್ಯಕ ಕಥಾ ಸಂಕಲನದ ಕೃತಿ "ಹತ್ತಗಳು" ಬಿಡುಗಡೆ ಮತ್ತು ನೃತ್ಯ ಸಿಂಚನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
  ಯುವ ಸಮೂಹಕ್ಕೆ ಇಂದು ವಿವಿಧ ವಿಚಾರಗಳನ್ನು ತಿಳಿಯಪಡಿಸುವ ಅನೇಕಾನೇಕ ತರಬೇತಿಗಳು ಸಂಘಟಿಸಲ್ಪಡುತ್ತಿದ್ದರೂ ಸಂಸ್ಕೃತಿ-ಸಂಸ್ಕಾರಕ್ಕೆ ಸಂಬಂಧಿಸಿದ ಮಾರ್ಗದರ್ಶನದ ಕೊರತೆ ಇದೆ. ಉಡುಪಮೂಲೆ ಪ್ರತಿಷ್ಠಾನವು ಹಲವು ವರ್ಷಗಳಿಂದ ಈ ಹಿನ್ನೆಲೆಯಲ್ಲಿ ನಿರ್ವಹಿಸುತ್ತಿರುವ ಕಾರ್ಯ ಚಟುವಟಿಕೆಗಳು ಇತರೆಡೆಗಳಿಗೆ ಮಾದರಿಯಾಗಿ ದಾರಿದೀಪವಾಗಿದೆ ಎಂದು ಶ್ರೀಗಳು ಶ್ಲಾಘನೆ ವ್ಯಕ್ತಪಡಿಸಿದರು. ಸಾಹಿತ್ಯ, ಕಲೆಗಳು ಸುದೃಢ ಸಮಾಜ ನಿಮರ್ಾಣದಲ್ಲಿ ಮುಂಚೂಣಿಯಲ್ಲಿ ನಿಲ್ಲವಂತದ್ದಾಗಿದ್ದು, ಈ ಬಗ್ಗೆ ಕ್ರಿಯಾತ್ಮಕವಾದಷ್ಟು ಬೇರುಗಳು ಗಟ್ಟಿಗೊಂಡು ನವ ಸಮಾಜ ಸುಂದರಗೊಳ್ಳುವುದೆಂದು ತಿಳಿಸಿದರು.
   ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಸಾಹಿತಿ, ಕಲಾವಿದ ಬಾಲ ಮಧುರಕಾನನ ಮಾತನಾಡಿ, ಅಪರಿಮಿತವಾದ ಕಲಾ ಪ್ರೇಮವು ಧೀಮಂತ ವ್ಯಕ್ತಿಯನ್ನಾಗಿ ರೂಪುಗೊಳ್ಳಲು ಸಹಾಯವಾಗುತ್ತದೆ. ಎಲ್ಲಾ ಕಲಾ ಪ್ರಕಾರಗಳೂ ಪರಸ್ಪರ ಪೂರಕವಾಗಿದ್ದು, ವ್ಯಕ್ತಿಯನ್ನು ಶಕ್ತಿಯನ್ನಾಗಿ ಬೆಳೆಸುತ್ತದೆ ಎಂದು ತಿಳಿಸಿದರು. ಉಡುಪಮೂಲೆ ಪ್ರತಿಷ್ಠಾನದ ಕಲಾಸೇವೆ ಗಡಿನಾಡು ಕಾಸರಗೋಡಿನ ಹೆಮ್ಮೆಯಾಗಿದ್ದು, ಅದರ ನಿರಂತರ ಪ್ರಕ್ರಿಯೆಗಳು ನಾಡು-ನುಡಿಯ ಮುಕುಟಮಣಿಗಳು ಎಂದು ತಿಳಿಸಿದರು.
   ಕಣ್ಣೂರು ವಿ.ವಿ.ಯ ಕನ್ನಡ ಅಧ್ಯಯನ ವಿಭಾಗದ ಮಾರ್ಗದಶರ್ಿ, ಸಾಹಿತಿ ಡಾ.ಯು.ಮಹೇಶ್ವರಿ ಉಪಸ್ಥಿತರಿದ್ದರು.
   ಉಡುಪಮೂಲೆ ಪ್ರತಿಷ್ಠಾನದ ಅಧ್ಯಕ್ಷೆ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬ್ರಹ್ಮಶ್ರೀ ರಾಘವೇಂದ್ರ ಉಡುಪಮೂಲೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
   ಬಳಿಕ ಭೂಮಿಕಾ ಉಡುಪಮೂಲೆ ಪ್ರತಿಷ್ಠಾನದ ವಿದ್ಯಾಥರ್ಿಗಳಿಂದ ನೃತ್ಯ ಸಿಂಚನ ಕಾರ್ಯಕ್ರಮ ಪ್ರಸ್ತುತಗೊಂಡಿತು. 80 ಯುವ ನೃತ್ಯಪಟುಗಳು ನೃತ್ಯ ಪ್ರದಶರ್ಿಸಿದರು. ಈ ಪೈಕಿ 27 ಮಂದಿ ವಿದ್ಯಾಥರ್ಿಗಳು ರಂಗಪ್ರವೇಶ ನಡೆಸಿದರು.  ನೃತ್ಯ ಕಾರ್ಯಕ್ರಮಕ್ಕೆ ನಿದರ್ೇಶನ ಮತ್ತು ನಟುವಾಂಗದಲ್ಲಿ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ, ಹಾಡುಗಾರಿಕೆಯಲ್ಲಿ ಸರೋಜಾ ಎಸ್ ಭಟ್, ಮೃದಂಗದಲ್ಲಿ ಗೀತೇಶ್ ಕಾಂಞಿಂಗಾಡ್, ವಯೋಲಿನ್ ನಲ್ಲಿ ಬಾಲರಾಜ್ ಮುಳ್ಳೇರಿಯ ಸಹಕರಿಸಿದರು.
 





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries